Monsoon: ಸಿಕ್ಕಿದ್ದೆಲ್ಲ ಹಣ್ಣು ತಿಂದ್ರೆ ಆರೋಗ್ಯ ಕೆಡ್ಬಹುದು ಜೋಪಾನ
ಮಾನ್ಸೂನ್ ಸಂದರ್ಭದಲ್ಲಿ ಯಾವ ರೀತಿಯ ಹಣ್ಣುಗಳನ್ನು ಸೇವನೆ ಮಾಡಬೇಕು? ಹಾಗೂ ಯಾವ ರೀತಿಯ ಹಣ್ಣುಗಳನ್ನು ಸೇವನೆ ಮಾಡಬಾರದು? ಎಂದು ಕುರಿತಾಗಿ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ಮಾನ್ಸೂನ್ ಸಮಯದಲ್ಲಿ, ಮಳೆ ಹಾಗೂ ಚಳಿಯ ಜೊತೆಗೆ ರೋಗಗಳೂ ಹೆಚ್ಚಿರುತ್ತವೆ. ಹಾಗಾಗಿ ಈ ರೋಗಗಳ ಅಪಾಯ ಕಡಿಮೆ ಮಾಡಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೋಗ ನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾನ್ಸೂನ್‌ನಲ್ಲಿ ಅನೇಕ ಹಣ್ಣುಗಳನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಈ ಮಳೆಗಾಲದಲ್ಲಿ ಯಾವ ಹಣ್ಣುಗಳು ಪ್ರಯೋಜನಕಾರಿ ಮತ್ತು ಸೇವಿಸಬೇಕು ಮತ್ತು ಆಹಾರ ಯೋಜನೆಯಲ್ಲಿ ಯಾವ ಹಣ್ಣುಗಳನ್ನು ತಪ್ಪಿಸಬೇಕು ಎಂಬುದನ್ನು ವೈದ್ಯರು ಬಹಿರಂಗಪಡಿಸುತ್ತಾರೆ.
ಹಣ್ಣುಗಳು (Fruits)
ಹೆಣ್ಣುಗಳನ್ನು ಸೇರಿಸಬೇಕು ಎಂದು ಕೂಡಲೇ ಬೇರೆ ಕಾಲಮಾನದಲ್ಲಿ ಸೇವಿಸಬಹುದಾದ ಎಲ್ಲಾ ಹಣ್ಣುಗಳನ್ನು ಮಳೆಗಾಲದಲ್ಲಿ ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ. ಏಕೆಂದರೆ, ವಾತಾವರಣವು ತಂಪಾಗಿರುವ ಕಾರಣ ನೀವು ಸೇವಿಸುವ ಆಹಾರ ನಿಮ್ಮ ದೇಹದಲ್ಲಿ ತಂಪನ್ನು ಹೆಚ್ಚಿಸುವ ಮೂಲಕ ನೆಗಡಿ, ಜ್ವರ (Fever), ಕೆಮ್ಮು ಇಂತಹ ಸಮಸ್ಯೆಗಳು ಹೆಚ್ಚಬಹುದು. ಅದಕ್ಕಾಗಿ ಯಾವ ಯಾವ ಕಾಲದಲ್ಲಿ ಯಾವ ರೀತಿಯ ಹಣ್ಣುಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕ. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಕೋವಿಡ್ -19 ರ ಚೇತರಿಕೆ ಮತ್ತು ತಡೆಗಟ್ಟುವಿಕೆ ಹಾಗೂ ಸಾಮಾನ್ಯ ಶೀತ, ಜ್ವರ ಇವುಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಮಳೆಗಾಲದಲ್ಲಿ ಬೆಚ್ಚಗಿರಬೇಕು ಅಂದ್ರೆ ಇಂಥದ್ದನ್ನೆಲ್ಲಾ ತಿನ್ಬೇಕು
ಪೌಷ್ಟಿಕತಜ್ಞರಾದ (Nutritionist) ಡಾ.ಸಲೋನಿ ಜವೇರಿ ಅವರು ಸಂದರ್ಶನ ಒಂದರಲ್ಲಿ ಆರೋಗ್ಯ ಕುರಿತಾಗಿ ಈ ಕೆಲವು ಸಲಹೆಗಳನ್ನು ನೀಡುತ್ತಾರೆ. ದಾಳಿಂಬೆ (Pomegranate), ಸೇಬು, ನೇರಳೆ, ಪೇರಳೆಗಳಂತ ಹಣ್ಣುಗಳ ಪ್ರಯೋಜನಗಳನ್ನು ಹೀಗೆ ಪ್ರತಿಪಾದಿಸಿದರು ವರ್ಷದ ಈ ಸಮಯದಲ್ಲಿ ಸುಲಭವಾಗಿ ಲಭ್ಯವಿರುವ ಈ ಹಣ್ಣುಗಳನ್ನು ನೇರವಾಗಿ ಸೇವಿಸಬಹುದು, ತ್ವರಿತ ತಿಂಡಿಗಳ (Quick snacks) ರೂಪದಲ್ಲಿ ಸೇವಿಸುವ ಮೂಲಕ ಅವುಗಳ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಉತ್ಕರ್ಷಣ ನಿರೋಧಕದ ಗುಣಗಳನ್ನು ಪಡೆದುಕೊಳ್ಳಬಹುದು ಎಂಬುದಾಗಿ ಹೇಳುತ್ತಾರೆ.
ನಮ್ಮ ದೇಹವು ಚಳಿಗಾಲಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಈ ಅವಧಿಯನ್ನು ಬಳಸಿಕೊಳ್ಳುತ್ತವೆ, ಸ್ವಲ್ಪ ಆಮ್ಲಾ, ಮೊರಿಂಗಾ, ದಾಲ್ಚಿನ್ನಿ, ಹಲ್ಡಿ ಮತ್ತು ಕರಿಮೆಣಸು ಚಹಾವನ್ನು (Tea) ಸೇವಿಸುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚಿನ ಗಮನವನ್ನು ನೀಡುವುದು ದೇಹವನ್ನು ಉತ್ತಮಗೊಳಿಸುತ್ತದೆ. ಈ ಪವಿತ್ರ ಚಹಾವನ್ನು ಕೆಲವು ಬೆಚ್ಚಗಿನ ಭಜಿಗಳೊಂದಿಗೆ ಜೋಡಿಸಿ. ಚಿಂತಿಸಬೇಡಿ, ಮಧ್ಯಮ ಪ್ರಮಾಣದಲ್ಲಿ ಎಲ್ಲಾ ಆಹಾರಗಳು ಒಳ್ಳೆಯದು. ಎಂಬುದಾಗಿ ಅವರು ಹೇಳುತ್ತಾರೆ.
ಆತ್ಮಂತನ್ ಸ್ವಾಸ್ಥ್ಯ ಕೇಂದ್ರದ ಸಿಇಒ (CEO) ಮತ್ತು ವೈದ್ಯಕೀಯ ನಿರ್ದೇಶಕ ಡಾ ಮನೋಜ್ ಕುಟ್ಟೇರಿ ಅವರ ಪ್ರಕಾರ, "ಮಾನ್ಸೂನ್‌ನಲ್ಲಿ ಅನೇಕ ಹಣ್ಣುಗಳನ್ನು ತಪ್ಪಿಸಬೇಕು, ಸಾಮಾನ್ಯವಾಗಿ ಕಲ್ಲಂಗಡಿ (Watermelon) ಮುಂತಾದ ತಂಪಾಗಿಸುವ ಗುಣವನ್ನು ಹೊಂದಿರುವ ಹಣ್ಣುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಅವರು ಹೇಳುತ್ತಾರೆ. ಸೇಬು, ಪೇರಳೆ, ಚೆರ್ರಿಗಳು, ಲಿಚಿಗಳು, ಅಂಜೂರದ ಹಣ್ಣುಗಳು, ಕಿತ್ತಳೆ, ಪಪ್ಪಾಯಿ, ಜಾಮೂನ್ (Jamun), ಪ್ಲಮ್ (Plums), ದಾಳಿಂಬೆ ಮುಂತಾದ ಇತರ ಋತುಮಾನದ ಹಣ್ಣುಗಳು ಆರೋಗ್ಯ ವೃದ್ಧಿಗೆ ಪ್ರಯೋಜನಕಾರಿ (Helpful)." ಎಂಬುದಾಗಿ ಹೇಳುತ್ತಾರೆ.
ಇದನ್ನೂ ಓದಿ: ಹಣ್ಣು ತಿನ್ನೋದು ಓಕೆ, ಫ್ರುಟ್ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ಅಪಾಯ ಜೋಕೆ !
ಮಾನ್ಸೂನ್‌ನಲ್ಲಿ ನೀವು ಹೊಂದಿರಬೇಕಾದ ಹಣ್ಣುಗಳ ಪಟ್ಟಿಯು (list) ಹೀಗಿದೆ ನೋಡಿ..
- ಸೇಬುಗಳು (Apple)
- ಆವಕಾಡೊಗಳು (Avocado)
- ಖರ್ಜೂರ (Dates)
- ಅಂಜೂರ (Figs)
- ನಿಂಬೆಹಣ್ಣುಗಳು (Lemon)
- ಮಾವಿನ ಹಣ್ಣುಗಳು (Mango)
- ಕಿತ್ತಳೆ (Orange)
- ಪಪ್ಪಾಯಿಗಳು (papaya)
- ಒಣದ್ರಾಕ್ಷಿ (Raisins) - ನೆನೆಸಿ (Soaked) ಸೇವನೆ ಮಾಡಬೇಕು