Summer Health : ಸೌತೆಕಾಯಿ ತಿಂದಾಕ್ಷಣ ನೀರು ಕುಡಿಯೋದು ಅಪಾಯ!
ಸೌತೆಕಾಯಿ ಎಲ್ಲರಿಗೂ ಅಚ್ಚುಮೆಚ್ಚು. ಬೇಸಿಗೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಸೌತೆಕಾಯಿ ದೇಹ ಸೇರುತ್ತೆ. ಕೆಲವರಿಗೆ ಯಾವುದೇ ಆಹಾರ ಸೇವನೆ ಮಾಡಿದ್ರೂ ತಕ್ಷಣ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಸೌತೆಕಾಯಿ ತಿಂದ ನಂತ್ರವೂ ನೀವು ನೀರು ಕುಡಿಯುತ್ತಿದ್ದರೆ ಅದ್ರಿಂದಾಗುವ ಸಮಸ್ಯೆ ಏನು ಎಂಬುದನ್ನು ಓದಿ.
ಬೇಸಿಗೆ (Summer)ಯಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆ ಶುರುವಾಯ್ತೆಂದ್ರೆ ಅನೇಕ ಅನಾರೋಗ್ಯ (Illness) ಸಮಸ್ಯೆ ಕಾಡಲು ಶುರುವಾಗುತ್ತದೆ. ಇದಕ್ಕೆ ದೇಹ (Body) ದಲ್ಲಿ ತೇವಾಂಶ (Moisture )ಕಡಿಮೆಯಾಗುವುದೇ ಕಾರಣವಾಗಿದೆ. ಬೇಸಿಗೆಯಲ್ಲಿ ಡೀಹೈಡ್ರೇಟ್ ಆಗದಂತೆ ನೋಡಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕಾಗುತ್ತದೆ. ಇದ್ರ ಜೊತೆಗೆ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಬೇಸಿಗೆ ಬಂದ್ರೆ ನೀರಿನಾಂಶವಿರುವ ಕಲ್ಲಂಗಡಿ ಹಣ್ಣು,ಸೌತೆಕಾಯಿ (Cucumber) ಸೇರಿದಂತೆ ಅನೇಕ ಹಣ್ಣುಗಳು ಪ್ರಕೃತಿಯಲ್ಲಿ ಸಿಗುತ್ತವೆ. ಬೇಸಿಗೆಯಲ್ಲಿ, ಜನರು ಹೆಚ್ಚಾಗಿ ಸೌತೆಕಾಯಿಯನ್ನು ತಿನ್ನುತ್ತಾರೆ. ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಇದನ್ನು ಸಲಾಡ್ ರೀತಿಯಲ್ಲಿ, ಮೊಸರಿನ ಜೊತೆ ಸ್ಯಾಂಡ್‌ವಿಚ್ ರೂಪದಲ್ಲಿ ಸೇವನೆ ಮಾಡ್ಬಹುದು. ಆದ್ರೆ ಸೌತೆಕಾಯಿಯನ್ನು ತಿನ್ನುವಾಗ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಸೌತೆಕಾಯಿ ತಿಂದ ತಕ್ಷಣ ನೀರನ್ನು ಕುಡಿಯಬಾರದು. ಕೆಲವರು ಹಣ್ಣು ತಿಂದ ನಂತ್ರ ನೀರು ಕುಡಿಯುತ್ತಾರೆ. ಹಾಗೇ ಸೌತೆಕಾಯಿ ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸವಿದ್ರೆ ಇದನ್ನೋದಿ. ಸೌತೆಕಾಯಿ ತಿಂದ ತಕ್ಷಣ ನೀರು ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ಇದನ್ನು ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುದನ್ನು ನಾವು ಹೇಳ್ತೇವೆ.
ಸೌತೆಕಾಯಿ ತಿಂದ ತಕ್ಷಣ ನೀರು ಕುಡಿದ್ರೆ ಆಗುವ ಅಡ್ಡಪರಿಣಾಮ :
ಮೊದಲೇ ಹೇಳಿದಂತೆ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಂಶವಿದೆ. ಬೇಸಿಗೆಯಲ್ಲಿ ಸೌತೆಕಾಯಿಗೆ ಬಹುಬೇಡಿಕೆಯಿರುತ್ತದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಖನಿಜ, ವಿಟಮಿನ್ ಮತ್ತು ಎಲೆಕ್ಟ್ರೋಲೈಟ್ ಇದ್ರಲ್ಲಿದೆ. ತೂಕ ಇಳಿಸಲು ಸೌತೆಕಾಯಿ ಹೆಚ್ಚು ಪರಿಣಾಮಕಾರಿ. ಆದ್ರೆ ತಜ್ಞರ ಪ್ರಕಾರ, ಸೌತೆಕಾಯಿ ತಿಂದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಬೇಕು.
ತಜ್ಞರು ಏನು ಹೇಳ್ತಾರೆ? :
ಅಗತ್ಯ ಪೋಷಕಾಂಶ : ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ನೀರಿನಾಂಶವಿದೆ. ಇದಲ್ಲದೆ ವಿಟಮಿನ್ ಸಿ, ಕೆ, ಮೆಗ್ನೀಸಿಯಮ್, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳು ಇದ್ರಲ್ಲಿವೆ. ಇದು ಚರ್ಮ ಮತ್ತು ಕೂದಲ ಸೌಂದರ್ಯಕ್ಕೆ ಒಳ್ಳೆಯದು. ಆದ್ರೆ ಸೌತೆಕಾಯಿ ಸೇವನೆ ನಂತ್ರ ನೀರು ಕುಡಿದರೆ, ನಿಮ್ಮ ದೇಹಕ್ಕೆ ಈ ಪೋಷಕಾಂಶಗಳು ಸಿಗುವುದಿಲ್ಲ. ಸೌತೆಕಾಯಿ ಸೇವಿಸಿಯೂ ಪ್ರಯೋಜನ ಶೂನ್ಯವಾಗುತ್ತದೆ.
TEA AFTER LUNCH: ತೂಕಡಿಕೆ ನಿಲ್ಲಿಸಿ ಎನರ್ಜಿಟಿಕ್ ಆಗಲು ಬೆಸ್ಟ್
ಅಜೀರ್ಣ : ಸೌತೆಕಾಯಿ ಮಲಬದ್ಧತೆಗೆ ಔಷಧಿ ಎನ್ನಬಹುದು. ಮಲಬದ್ಧತೆ ಸಮಸ್ಯೆಯಿರುವವರು ಸೌತೆಕಾಯಿ ಸೇವನೆ ಮಾಡ್ಬೇಕೆಂದು ಹೇಳಲಾಗುತ್ತದೆ. ಆದರೆ ಸೌತೆಕಾಯಿ ತಿಂದ ತಕ್ಷಣ ನೀರು ಕುಡಿದರೆ ಲೂಸ್ ಮೋಷನ್ ಸಮಸ್ಯೆ ಕಾಡಬಹುದು. ಆದ್ದರಿಂದ ಸೌತೆಕಾಯಿ ತಿಂದು ಅರ್ಧ ಗಂಟೆಯವರೆಗೆ ನೀರು ಸೇವನೆ ಮಾಡ್ಬೇಡಿ. ಅರ್ಧ ಗಂಟೆ ನಂತ್ರ ನೀರು ಕುಡಿಯಿರಿ.
ನೀರು ಸಮೃದ್ಧವಾಗಿರುವ ಹಣ್ಣಿನ ಜೊತೆ ನೀರು : ಸೌತೆಕಾಯಿ ಮಾತ್ರವಲ್ಲ ನೀರು ಸಮೃದ್ಧವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ತಿಂದ ತಕ್ಷಣವೇ ನೀವು ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಕಲ್ಲಂಗಡಿ ಹಣ್ಣು, ಅನಾನಸ್ ಹಣ್ಣು ತಿಂದ ನಂತ್ರವೂ ನೀರು ಕುಡಿಯಲು ಹೋಗಬೇಡಿ.
ನೀವೂ ಉಗುರು ಕಡಿತೀರಾ? ಆರೋಗ್ಯ ಹಾಳ್ಮಾಡುವ ಚಟಕ್ಕೆ ಹೇಳಿ ಗುಡ್ ಬೈ
ಪಿಹೆಚ್ ಮಟ್ಟ : ಯಾವುದೇ ಆಹಾರ ಜೀರ್ಣಗೊಳ್ಳಲು ಕರುಳಿನಲ್ಲಿ ಪಿಹೆಚ್ ಮಟ್ಟವು ಅಗತ್ಯವಾಗಿರುತ್ತದೆ. ಆದರೆ ಸೌತೆಕಾಯಿಯನ್ನು ತಿನ್ನುವುದರಿಂದ ಅಥವಾ ಸೌತೆಕಾಯಿ ತಿಂದ ನಂತ್ರ ನೀರು ಕುಡಿಯುವುದರಿಂದ ಈ ಪಿಹೆಚ್ ಮಟ್ಟವು ದುರ್ಬಲಗೊಳ್ಳುತ್ತದೆ. ಜೀರ್ಣಕ್ರಿಯೆಗೆ ರೂಪುಗೊಳ್ಳಬೇಕಾದ ಆಮ್ಲವು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಸೌತೆಕಾಯಿ ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುವುದ್ರಿಂದ ಸೌತೆಕಾಯಿ ತಿಂದ ತಕ್ಷಣ ನೀರು ಕುಡಿದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡ್ಬಹುದು.
ಇಷ್ಟು ದಿನಗಳ ಕಾಲ ಸೌತೆಕಾಯಿ ತಿಂದು ನೀರು ಕುಡಿಯುತ್ತಿದ್ದರೆ ಇಂದೇ ಈ ಅಭ್ಯಾಸ ಬಿಡ್ಬಿಡಿ.