- Home
- Life
- Food
- ಜಿಮ್ ಇಲ್ಲ, ಡಯಟ್ ಇಲ್ಲ, 41ರಲ್ಲೂ ಎರಡು ಮಕ್ಕಳ ತಾಯಿ ನಯನತಾರಾ ಫಿಟ್‌ನೆಸ್ ಸೀಕ್ರೆಟ್ ಸಿಂಪಲ್ ಇದೆ ನೋಡಿ!
ಜಿಮ್ ಇಲ್ಲ, ಡಯಟ್ ಇಲ್ಲ, 41ರಲ್ಲೂ ಎರಡು ಮಕ್ಕಳ ತಾಯಿ ನಯನತಾರಾ ಫಿಟ್‌ನೆಸ್ ಸೀಕ್ರೆಟ್ ಸಿಂಪಲ್ ಇದೆ ನೋಡಿ!
40 ವರ್ಷ ದಾಟಿದರೂ ನಯನತಾರಾ ಗ್ಲಾಮರ್ ಕಿಂಚಿತ್ತೂ ಕಡಿಮೆ ಆಗಿಲ್ಲ. ಯುವ ನಟಿಯರಿಗೆ ಪೈಪೋಟಿ ನೀಡುತ್ತಾ ಲೇಡಿ ಸೂಪರ್‌ಸ್ಟಾರ್ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಕಠಿಣ ಡಯಟ್, ಜಿಮ್ ವರ್ಕೌಟ್ ಇಲ್ಲದೆ ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಿಳಿಯೋಣ ಬನ್ನಿ.

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಪಡೆದ ನಟಿ ನಯನತಾರಾ. ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿದ್ದರೂ, ಅವರ ಸೌಂದರ್ಯ, ಫಿಟ್‌ನೆಸ್ ಮತ್ತು ನಟನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ 41ನೇ ವಯಸ್ಸಿನಲ್ಲೂ ಅಷ್ಟೇ ಎನರ್ಜಿ ಮತ್ತು ಗ್ಲಾಮರಸ್ ಲುಕ್‌ನಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದಾರೆ.
'ಟಾಕ್ಸಿಕ್' ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಮಿಂಚಿದ್ದ ನಯನತಾರಾ
ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದರೂ ಅವರಲ್ಲಿ ದೊಡ್ಡ ಬದಲಾವಣೆ ಕಾಣಿಸುವುದಿಲ್ಲ. ಇತ್ತೀಚೆಗೆ ಕನ್ನಡದ ಸ್ಟಾರ್ ನಟ ಯಶ್ ಜೊತೆ 'ಟಾಕ್ಸಿಕ್' ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿ ಸುದ್ದಿಯಾಗಿದ್ದಾರೆ. ಹಾಗಾದರೆ, ಈ ವಯಸ್ಸಿನಲ್ಲೂ ನಯನತಾರಾ ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಗೊತ್ತಾ?
ಇಷ್ಟವಾದ ಆಹಾರವನ್ನು ಮಿತವಾಗಿ ಸೇವಿಸುತ್ತಾರೆ
ಒಂದು ಕಾಲದಲ್ಲಿ ಡಯಟ್ ಎಂದರೆ ಕಠಿಣ ನಿಯಮಗಳು ಮತ್ತು ಇಷ್ಟವಿಲ್ಲದ ಆಹಾರವನ್ನು ತಿನ್ನಬೇಕು ಎಂದು ನಯನತಾರಾ ಭಾವಿಸಿದ್ದರಂತೆ. ಆದರೆ, ಕಾಲಕ್ರಮೇಣ ಅವರ ಆಲೋಚನಾ ವಿದಾನ ಬದಲಾಯಿತು. ದೇಹಕ್ಕೆ ಕಷ್ಟ ಕೊಡುವ ಕಠಿಣ ಉಪವಾಸಗಳ ಬದಲು, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡುವುದೇ ನಿಜವಾದ ಡಯಟ್ ಎಂದು ಅವರು ಈಗ ನಂಬುತ್ತಾರೆ. ಅವರು ತಮಗೆ ಇಷ್ಟವಾದ ಆಹಾರವನ್ನು ಮಿತವಾಗಿ ತಿನ್ನಲು ಇಷ್ಟಪಡುತ್ತಾರೆ.
ಪ್ರತಿದಿನ ಯೋಗ ಮಾಡುತ್ತಾರೆ ಲೇಡಿ ಸೂಪರ್‌ಸ್ಟಾರ್
ನಯನತಾರಾ ಹೆಚ್ಚು ಡಯಟ್ ಮಾಡುವುದಿಲ್ಲ, ಜಿಮ್‌ನಲ್ಲಿ ಗಂಟೆಗಟ್ಟಲೆ ವರ್ಕೌಟ್ ಕೂಡ ಮಾಡುವುದಿಲ್ಲ. ಅವರು ಫಿಟ್‌ನೆಸ್ ಅನ್ನು ತಮ್ಮ ದೈನಂದಿನ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದಾರೆ. ಪ್ರತಿದಿನ ತಪ್ಪದೆ ವೇಟ್ ಟ್ರೈನಿಂಗ್‌ಗೆ ನಯನತಾರಾ ಆದ್ಯತೆ ನೀಡುತ್ತಾರೆ. ಇದರೊಂದಿಗೆ, ಅವರು ತಮ್ಮ ಫಿಟ್‌ನೆಸ್‌ಗಾಗಿ ಯೋಗವನ್ನು ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ದೀರ್ಘಾವಧಿಯ ಶೂಟಿಂಗ್ ಶೆಡ್ಯೂಲ್‌ಗಳ ನಂತರ ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸಲು ಹಾಗೂ ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯಲು ಯೋಗ ಅವರಿಗೆ ಹೆಚ್ಚು ಸಹಾಯ ಮಾಡುತ್ತದೆ.
ಮನೆ ಊಟಕ್ಕೇ ಮೊದಲ ಆದ್ಯತೆ
ಶೂಟಿಂಗ್ ಸ್ಥಳಗಳಲ್ಲಿ ಅಥವಾ ಪ್ರಯಾಣದಲ್ಲಿರುವಾಗ ಬಗೆಬಗೆಯ ಆಹಾರ ಲಭ್ಯವಿದ್ದರೂ, ನಯನತಾರಾ ಯಾವಾಗಲೂ ಮನೆಯಲ್ಲಿ ಮಾಡಿದ ಸರಳ ಊಟವನ್ನು ತಿನ್ನಲು ಇಷ್ಟಪಡುತ್ತಾರೆ. ಶೂಟಿಂಗ್‌ಗೆ ಹೋಗುವಾಗಲೂ ಮನೆಯಿಂದಲೇ ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾರೆ. ಇದು ಜಂಕ್ ಫುಡ್‌ನಿಂದ ದೂರವಿರಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರು ತಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳು, ತಾಜಾ ತರಕಾರಿಗಳು, ಮೊಟ್ಟೆ ಮತ್ತು ಲೀನ್ ಮೀಟ್ (ಮಾಂಸ) ಒಳಗೊಂಡ ಸಮತೋಲಿತ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುತ್ತಾರೆ.
ದೇಹವನ್ನು ನಿರಂತರವಾಗಿ ಹೈಡ್ರೇಟ್ ಆಗಿಡುತ್ತಾರೆ:
ಚರ್ಮವನ್ನು ಕಾಂತಿಯುತವಾಗಿಡಲು ದೇಹವನ್ನು ನಿರಂತರವಾಗಿ ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ನಯನತಾರಾ ಅವರ ಮುಖ ಹಾಗೂ ಚರ್ಮ ಹೊಳೆಯಲು ಇದೇ ವಿಧಾನವನ್ನು ಬಳಸುತ್ತಾರೆ. ಇದಕ್ಕಾಗಿ ಅವರು ಪ್ರತಿದಿನ ಸಾಕಷ್ಟು ನೀರು, ಗ್ರೀನ್ ಟೀ, ತಾಜಾ ಹಣ್ಣಿನ ರಸಗಳು ಮತ್ತು ಸೂಪ್‌ಗಳನ್ನು ಸೇವಿಸುತ್ತಾರೆ. ಇದರೊಂದಿಗೆ, ಬಿಡುವಿಲ್ಲದ ಕೆಲಸದ ನಡುವೆಯೂ ಪ್ರತಿದಿನ ಕನಿಷ್ಠ 8 ಗಂಟೆಗಳ ನಿದ್ದೆಗೆ ನಯನತಾರಾ ಪ್ರಾಮುಖ್ಯತೆ ನೀಡುತ್ತಾರೆ. ಸರಿಯಾದ ನಿದ್ದೆ, ಸಮತೋಲಿತ ಆಹಾರ ಮತ್ತು ದೈನಂದಿನ ವ್ಯಾಯಾಮವೇ ನಯನತಾರಾ ಅವರ ಸೌಂದರ್ಯದ ನಿಜವಾದ ರಹಸ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

