- Home
- Life
- Fashion
- Coriander water for hair growth: ಕೊತ್ತಂಬರಿ ಬೀಜದ ನೀರನ್ನು ಹೀಗೆ ಬಳಸಿ.. ಕೂದಲು ವೇಗವಾಗಿ ಬೆಳೆಯುತ್ತೆ!
Coriander water for hair growth: ಕೊತ್ತಂಬರಿ ಬೀಜದ ನೀರನ್ನು ಹೀಗೆ ಬಳಸಿ.. ಕೂದಲು ವೇಗವಾಗಿ ಬೆಳೆಯುತ್ತೆ!
Coriander water for hair growth: ಉದ್ದ ಹಾಗೂ ದಪ್ಪ ಕೂದಲು ಬೇಕು ಅನ್ನೋದು ಎಲ್ಲರ ಆಸೆ. ಆದರೆ, ದುಬಾರಿ ಶಾಂಪೂ, ಎಣ್ಣೆ ಬಳಸುವ ಬದಲು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕೊತ್ತಂಬರಿ ಬೀಜ ಬಳಸಿದರೆ ಸಾಕು. ಈ ಕೊತ್ತಂಬರಿ ನೀರಿನಿಂದ ಕೂದಲನ್ನು ವೇಗವಾಗಿ ಬೆಳೆಸಬಹುದು.

ಕೂದಲಿನ ಆರೋಗ್ಯ ಸುಧಾರಿಸಲು ಸಹಕಾರಿ
ಕೂದಲಿನ ಆರೋಗ್ಯ ಸುಧಾರಿಸಲು ಸಹಕಾರಿ
ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಕೊತ್ತಂಬರಿ ಬೀಜ ಇದ್ದೇ ಇರುತ್ತದೆ. ಇದನ್ನು ನಾವು ಹಲವು ಅಡುಗೆಗಳಲ್ಲಿ ಬಳಸುತ್ತೇವೆ. ಆದರೆ ಈ ಕೊತ್ತಂಬರಿ ಬೀಜ ನಮ್ಮ ಕೂದಲು ಆರೋಗ್ಯವಾಗಿ ಬೆಳೆಯಲು ಕೂಡ ಸಹಾಯ ಮಾಡುತ್ತದೆ. ಯಾಕೆಂದರೆ, ಕೊತ್ತಂಬರಿ ಬೀಜದಲ್ಲಿ ವಿಟಮಿನ್ ಎ, ಸಿ, ಕೆ ಜೊತೆಗೆ ಕಬ್ಬಿಣ, ತಾಮ್ರ, ಮೆಗ್ನೀಶಿಯಂ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ನಿಯಮಿತವಾಗಿ ಈ ನೀರನ್ನು ಬಳಸಿ
ನಿಯಮಿತವಾಗಿ ಈ ನೀರನ್ನು ಬಳಸಿ
ಕೊತ್ತಂಬರಿ ನೀರನ್ನು ಬಳಸುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ. ಕೊತ್ತಂಬರಿಯಲ್ಲಿರುವ ಕೆಲವು ಪೋಷಕಾಂಶಗಳು ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೂದಲಿನ ಬುಡಗಳು ಗಟ್ಟಿಯಾಗುತ್ತವೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಈ ನೀರಿನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಫ್ರೀ ರಾಡಿಕಲ್‌ಗಳಿಂದಾಗುವ ಹಾನಿಯನ್ನು ತಡೆದು, ಕೂದಲು ಸೀಳುವುದನ್ನು ಮತ್ತು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಬರುವುದನ್ನು ತಡೆಯುತ್ತದೆ. ಕೊತ್ತಂಬರಿಯಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಗಳು ಸೋಂಕು, ತುರಿಕೆ ಮತ್ತು ತಲೆಹೊಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ನೀರನ್ನು ಬಳಸುವುದರಿಂದ ಕೂದಲಿನ ಬುಡಗಳು ಬಲಪಡುವುದಲ್ಲದೆ, ಹೊಸ ಕೂದಲು ಬೆಳೆಯಲು ಸಹಕಾರಿಯಾಗಿದೆ.
ಈ ಕೊತ್ತಂಬರಿ ನೀರನ್ನು ಹೇಗೆ ತಯಾರಿಸಿಕೊಳ್ಳಬೇಕು?
ಈ ಕೊತ್ತಂಬರಿ ನೀರನ್ನು ಹೇಗೆ ತಯಾರಿಸಿಕೊಳ್ಳಬೇಕು?
ಎರಡು ಚಮಚ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಗ್ಗೆ ಆ ನೀರನ್ನು ಸಣ್ಣ ಉರಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ. ನೀರು ತಣ್ಣಗಾದ ನಂತರ ಅದನ್ನು ಸೋಸಿ, ಒಂದು ಸ್ಪ್ರೇ ಬಾಟಲಿಗೆ ತುಂಬಿಸಿ.
ಬಳಸುವ ವಿಧಾನ
ಶಾಂಪೂವಿನಿಂದ ತಲೆ ತೊಳೆದ ನಂತರ, ಕೊನೆಯಲ್ಲಿ ಈ ಕೊತ್ತಂಬರಿ ನೀರಿನಿಂದ ನೆತ್ತಿ ಮತ್ತು ಕೂದಲನ್ನು ತೊಳೆಯಿರಿ. 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಸಾಮಾನ್ಯ ನೀರಿನಿಂದ ತೊಳೆಯಬಹುದು.
ಸ್ಪ್ರೇ ಕೂಡ ಮಾಡ್ಬೋದು
ಸ್ಪ್ರೇ ಬಾಟಲಿ ಸಹಾಯದಿಂದ ಕೂದಲಿನ ಬುಡಗಳಿಗೆ ನೇರವಾಗಿ ಸ್ಪ್ರೇ ಮಾಡಿ, ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ವಾರದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಬಹುದು.
ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ?
ಕೊತ್ತಂಬರಿ ನೀರು ಕೂದಲಿನ ಆರೋಗ್ಯಕ್ಕೆ ಸಹಕಾರಿ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಇದು ಎಲ್ಲರಿಗೂ ಒಂದೇ ರೀತಿ ಕೆಲಸ ಮಾಡದಿರಬಹುದು. ಆದರೆ, ಇದರಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ಕೂದಲಿಗೆ ಬಾಹ್ಯ ಪೋಷಣೆಯನ್ನು ನೀಡುತ್ತವೆ. ನಾಲ್ಕೈದು ದಿನ ಬಳಸಿ ಕೂದಲು ಬೆಳೆಯಲಿಲ್ಲ ಎಂದುಕೊಳ್ಳಬೇಡಿ. ನಿಯಮಿತವಾಗಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಆನುವಂಶಿಕ ಕೂದಲು ಉದುರುವಿಕೆ, ಹಾರ್ಮೋನ್ ಅಸಮತೋಲನ ಅಥವಾ ತೀವ್ರ ವಿಟಮಿನ್ ಕೊರತೆ ಇದ್ದಾಗ ಕೇವಲ ಈ ನೀರು ಮಾತ್ರ ಸಾಕಾಗುವುದಿಲ್ಲ. ಇತರ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.