MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Fashion
  • Fashion Hacks: ಇನ್ಮುಂದೆ ಡ್ರೆಸ್‌ನಿಂದ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಲ್ಲ! ಈ 5 ಟ್ರಿಕ್ಸ್ ಗೊತ್ತಿರಲಿ

Fashion Hacks: ಇನ್ಮುಂದೆ ಡ್ರೆಸ್‌ನಿಂದ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಲ್ಲ! ಈ 5 ಟ್ರಿಕ್ಸ್ ಗೊತ್ತಿರಲಿ

Fashion Hacks: ಡ್ರೆಸ್ ಅಥವಾ ಟಾಪ್ ಧರಿಸಿದಾಗ ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಿಸುತ್ತಿದೆಯೇ? ಬ್ರಾ ಸ್ಟ್ರ್ಯಾಪ್ ಕ್ಲಿಪ್, ಸೇಫ್ಟಿ ಪಿನ್, ಸರಿಯಾದ ಸ್ಟ್ರ್ಯಾಪ್ ಫಿಟ್ ಸೇರಿದಂತೆ ಈ ಸರಳ ಟ್ರಿಕ್ಸ್ ಮೂಲಕ ನಿಮ್ಮ ಲುಕ್ ಅನ್ನು ಹೆಚ್ಚು ನೀಟ್ ಆಗಿ ಕಾಣುವಂತೆ ಮಾಡಬಹುದು.

1 Min read
Author : Pavna Das
Published : Sep 18 2026, 09:39 PM IST
Share this Photo Gallery
  • FB
  • TW
  • Linkdin
  • Whatsapp
16
ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಿಸದಂತೆ ಟ್ರಿಕ್ಸ್
Image Credit : AI

ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಿಸದಂತೆ ಟ್ರಿಕ್ಸ್

ನಿಮಗೆ ಇಷ್ಟವಾದ ಡ್ರೆಸ್ ಅಥವಾ ಟಾಪ್ ಧರಿಸಿದಾಗ ಬ್ರಾ ಸ್ಟ್ರ್ಯಾಪ್ ಪದೇಪದೇ ಹೊರಗೆ ಕಾಣಿಸಿಕೊಳ್ಳುತ್ತದೆಯೇ? ವಿಶೇಷವಾಗಿ ಸ್ಲೀವ್‌ಲೆಸ್, ಆಫ್-ಶೋಲ್ಡರ್ ಅಥವಾ ಡೀಪ್ ನೆಕ್ ಇರುವ ಬಟ್ಟೆಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದರಿಂದ ಒಟ್ಟಾರೆ ಲುಕ್ ಕೂಡ ಸ್ವಲ್ಪ ಹಾಳಾಗಬಹುದು. ಆದರೆ ಇದಕ್ಕಾಗಿ ಪ್ರತಿಬಾರಿ ಹೊಸ ಬ್ರಾ ಖರೀದಿಸುವ ಅಗತ್ಯವಿಲ್ಲ. ಕೆಲವು ಸರಳ ಟ್ರಿಕ್ಸ್ ಮೂಲಕ ಬ್ರಾ ಸ್ಟ್ರ್ಯಾಪ್‌ಗಳನ್ನು ಸರಿಯಾದ ಜಾಗದಲ್ಲಿ ಫಿಕ್ಸ್ ಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬ್ರಾ ಸ್ಟ್ರ್ಯಾಪ್ ಕ್ಲಿಪ್ ಬಳಸಿ
Image Credit : AI

ಬ್ರಾ ಸ್ಟ್ರ್ಯಾಪ್ ಕ್ಲಿಪ್ ಬಳಸಿ

ಮಾರುಕಟ್ಟೆಯಲ್ಲಿ ಸಿಗುವ ಸಣ್ಣ ಬ್ರಾ ಸ್ಟ್ರ್ಯಾಪ್ ಕ್ಲಿಪ್‌ಗಳನ್ನು ಬಳಸಬಹುದು. ಬ್ರಾದ ಹಿಂಭಾಗದಲ್ಲಿ ಎರಡೂ ಸ್ಟ್ರ್ಯಾಪ್‌ಗಳನ್ನು ಒಟ್ಟಿಗೆ ಹಿಡಿಯುವಂತೆ ಕ್ಲಿಪ್ ಹಾಕಿದರೆ ಅವು ಕುತ್ತಿಗೆಯ ಮಧ್ಯಭಾಗದತ್ತ ಬರುತ್ತವೆ. ಇದರಿಂದ ತೆರೆದ ಭುಜಗಳಿರುವ ಡ್ರೆಸ್‌ಗಳಲ್ಲಿ ಸ್ಟ್ರ್ಯಾಪ್ ಕಾಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

Related Articles

Related image1
Fast Fashion: ಒಮ್ಮೆ ಧರಿಸಿ ಬಿಸಾಡಬೇಡಿ! ನಿಮ್ಮ ಬಟ್ಟೆ ಯಾವಾಗಲೂ ಹೊಸದಾಗಿ ಕಾಣಲು ಇಷ್ಟು ಮಾಡಿ ಸಾಕು!
Related image2
Fashion Tips: 40ರಲ್ಲೂ ಯಂಗ್ ಆಗಿ ಕಾಣಬೇಕಾ? ಈ 7 ಸಲ್ವಾರ್ ಸೂಟ್ ಡಿಸೈನ್ ಟ್ರೈ ಮಾಡಿ!
36
ಸೇಫ್ಟಿ ಪಿನ್‌ನಿಂದ ಸ್ಟ್ರ್ಯಾಪ್ ಫಿಕ್ಸ್ ಮಾಡಿ
Image Credit : AI

ಸೇಫ್ಟಿ ಪಿನ್‌ನಿಂದ ಸ್ಟ್ರ್ಯಾಪ್ ಫಿಕ್ಸ್ ಮಾಡಿ

ಸ್ಟ್ರ್ಯಾಪ್ ಕ್ಲಿಪ್ ಇಲ್ಲದಿದ್ದರೆ ಸಣ್ಣ ಸೇಫ್ಟಿ ಪಿನ್ ಸಹಾಯ ಮಾಡಬಹುದು. ಬಟ್ಟೆಯ ಒಳಭಾಗದಲ್ಲಿ ಬ್ರಾ ಸ್ಟ್ರ್ಯಾಪನ್ನು ನಿಧಾನವಾಗಿ ಫಿಕ್ಸ್ ಮಾಡಬಹುದು. ಆದರೆ ಪಿನ್ ಚರ್ಮಕ್ಕೆ ಚುಚ್ಚದಂತೆ ಹಾಗೂ ಬಟ್ಟೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ.

46
ಸ್ಟ್ರ್ಯಾಪ್‌ನ ಉದ್ದವನ್ನು ಸರಿಯಾಗಿ ಹೊಂದಿಸಿ
Image Credit : AI

ಸ್ಟ್ರ್ಯಾಪ್‌ನ ಉದ್ದವನ್ನು ಸರಿಯಾಗಿ ಹೊಂದಿಸಿ

ಬ್ರಾ ಸ್ಟ್ರ್ಯಾಪ್ ಹೊರಗೆ ಕಾಣಲು ತಪ್ಪಾದ ಫಿಟ್ ಕೂಡ ಕಾರಣವಾಗಬಹುದು. ಸ್ಟ್ರ್ಯಾಪ್ ತುಂಬಾ ಸಡಿಲವಾಗಿದ್ದರೆ ಅದು ಭುಜದಿಂದ ಜಾರಬಹುದು. ಆದ್ದರಿಂದ ಬ್ರಾ ಧರಿಸಿದ ನಂತರ ಆರಾಮದಾಯಕವಾಗಿರುವಂತೆ ಸ್ಟ್ರ್ಯಾಪ್‌ನ ಉದ್ದವನ್ನು ಸರಿಯಾಗಿ ಹೊಂದಿಸಿ.

56
ವಿಭಿನ್ನ ಡ್ರೆಸ್‌ಗಳಿಗೆ ಕನ್ವರ್ಟಿಬಲ್ ಬ್ರಾ ಆಯ್ಕೆ ಮಾಡಿ
Image Credit : pinterest

ವಿಭಿನ್ನ ಡ್ರೆಸ್‌ಗಳಿಗೆ ಕನ್ವರ್ಟಿಬಲ್ ಬ್ರಾ ಆಯ್ಕೆ ಮಾಡಿ

ನೀವು ಹೆಚ್ಚಾಗಿ ಸ್ಲೀವ್‌ಲೆಸ್ ಅಥವಾ ವಿಭಿನ್ನ ನೆಕ್‌ಲೈನ್ ಇರುವ ಬಟ್ಟೆಗಳನ್ನು ಧರಿಸುತ್ತಿದ್ದರೆ ಕನ್ವರ್ಟಿಬಲ್ ಬ್ರಾ ಉಪಯುಕ್ತವಾಗಬಹುದು. ಇದರ ಸ್ಟ್ರ್ಯಾಪ್‌ಗಳನ್ನು ಡ್ರೆಸ್‌ಗೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಹೊಂದಿಸಬಹುದು.

66
ಬಟ್ಟೆಯ ಒಳಗೆ ಸ್ಟ್ರ್ಯಾಪ್ ಹೋಲ್ಡರ್ ಹಾಕಿಸಿ
Image Credit : Asianet News

ಬಟ್ಟೆಯ ಒಳಗೆ ಸ್ಟ್ರ್ಯಾಪ್ ಹೋಲ್ಡರ್ ಹಾಕಿಸಿ

ಕೆಲವು ಡ್ರೆಸ್ ಮತ್ತು ಟಾಪ್‌ಗಳಲ್ಲಿ ಒಳಭಾಗದಲ್ಲೇ ಸಣ್ಣ ಸ್ಟ್ರ್ಯಾಪ್ ಹೋಲ್ಡರ್‌ಗಳು ಅಥವಾ ಲೂಪ್‌ಗಳು ಇರುತ್ತವೆ. ನಿಮ್ಮ ಬಟ್ಟೆಯಲ್ಲಿ ಇವು ಇಲ್ಲದಿದ್ದರೆ ಟೈಲರ್ ಮೂಲಕ ಸಣ್ಣ ಹೂಕ್ ಅಥವಾ ಲೂಪ್ ಹಾಕಿಸಬಹುದು. ಇದರಿಂದ ಬ್ರಾ ಸ್ಟ್ರ್ಯಾಪ್ ಬಟ್ಟೆಯ ಒಳಗೇ ಉಳಿಯಲು ಸಹಾಯವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಫ್ಯಾಷನ್
ಜೀವನಶೈಲಿ
ಮಹಿಳೆಯರು
ಮಹಿಳಾ ದಿನಾಚರಣೆ
 

Latest Videos
Recommended Stories
Recommended image1
Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ
Recommended image2
Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್
Recommended image3
ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!
Related Stories
Recommended image1
Fast Fashion: ಒಮ್ಮೆ ಧರಿಸಿ ಬಿಸಾಡಬೇಡಿ! ನಿಮ್ಮ ಬಟ್ಟೆ ಯಾವಾಗಲೂ ಹೊಸದಾಗಿ ಕಾಣಲು ಇಷ್ಟು ಮಾಡಿ ಸಾಕು!
Recommended image2
Fashion Tips: 40ರಲ್ಲೂ ಯಂಗ್ ಆಗಿ ಕಾಣಬೇಕಾ? ಈ 7 ಸಲ್ವಾರ್ ಸೂಟ್ ಡಿಸೈನ್ ಟ್ರೈ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved