MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Anant Nag Dada Saheb Phalke
Renuka Swamy Case Update
CM DK Shivakumar on KPSC
Upper Bhadra Project
Bengaluru-Mangaluru Vande Bharat
Karnataka Lokayukta Raids
Bengaluru Property Records
Archaeological Discovery Karnataka
Trump’s Greenland Agreement
MLA Suresh Gowda Daughter
IMD Weather Forecast
  • Home
  • Entertainment
  • ಸತ್ಯಭಾಮೆಯ ಕಣ್ಣುಗಳಿಂದ ಬಂದ ಕೃಷ್ಣನ ಕಥೆ.. ಸಂಸ್ಕೃತಿ ಜಯನಾ ಬ್ಯಾಕ್‌ಗ್ರೌಂಡ್ ಗೊತ್ತಾದ್ರೆ ಶಾಕ್ ಆಗ್ತೀರಾ?

ಸತ್ಯಭಾಮೆಯ ಕಣ್ಣುಗಳಿಂದ ಬಂದ ಕೃಷ್ಣನ ಕಥೆ.. ಸಂಸ್ಕೃತಿ ಜಯನಾ ಬ್ಯಾಕ್‌ಗ್ರೌಂಡ್ ಗೊತ್ತಾದ್ರೆ ಶಾಕ್ ಆಗ್ತೀರಾ?

ತಮ್ಮ ಕುಟುಂಬದ ಹೆಸರಿನಿಂದ ಜನರು ತಮ್ಮನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬುದನ್ನು ಸಂಸ್ಕೃತಿ ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ತಾವು ಪರಿಗಣಿಸುವುದಿಲ್ಲ ಎಂದಿದ್ದಾರೆ. ಬದಲಾಗಿ, ಇಂತಹ ಕುಟುಂಬದ ಹಿನ್ನೆಲೆಯಿಂದ ಬಂದಾಗ ಏನಾಗುತ್ತದೆ? ಸಂಸ್ಕೃತಿ ಜಯನಾ ಏನಂದ್ರು..?!

3 Min read
Author : Shriram Bhat
Published : Sep 23 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

Sanskruti Jayana surname-Sanskruti Jayana acting debut-Sanskruti Jayana Satyabhama-Krishnavataram Part 1-ಕುಟುಂಬದ ಹೆಸರಿನೊಂದಿಗೆ ಬರುವ ಜವಾಬ್ದಾರಿಯನ್ನು ಅರಿತುಕೊಂಡಿರುವ ನಟಿ ಸಂಸ್ಕೃತಿ ಜಯನಾ ವೈರಲ್ ಮಾತುಗಳು ಇಲ್ಲಿವೆ ನೋಡಿ!

ಚಿತ್ರರಂಗಕ್ಕೆ ಕಾಲಿಡುವ ಪ್ರತಿಯೊಬ್ಬ ಹೊಸ ನಟ-ನಟಿಗೂ ತಮ್ಮದೇ ಆದ ಸವಾಲುಗಳಿರುತ್ತವೆ. ಆದರೆ ಈಗಾಗಲೇ ಸಮಾಜದಲ್ಲಿ ಗುರುತಿಸಿಕೊಂಡಿರುವ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆ ಆ ಸವಾಲು ಮತ್ತಷ್ಟು ವಿಭಿನ್ನವಾಗಿರುತ್ತದೆ. ತಮ್ಮ ಕುಟುಂಬದ ಹೆಸರಿನೊಂದಿಗೆ ಬರುವ ಜವಾಬ್ದಾರಿಯನ್ನು ಅರಿತುಕೊಂಡಿರುವ ನಟಿ ಸಂಸ್ಕೃತಿ ಜಯನಾ, ಇದೇ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ನನ್ನಂತಹ ಸರ್‌ನೇಮ್‌ ಇರುವ ಕುಟುಂಬದಿಂದ ಬಂದರೆ ನೀವು ಇನ್ನಷ್ಟು ಕಷ್ಟಪಡಬೇಕು” ಎಂಬ ಅವರ ಮಾತು ಇದೀಗ ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

‘ಕೃಷ್ಣಾವತಾರಂ ಪಾರ್ಟ್ 1: ದಿ ಹಾರ್ಟ್’ ಚಿತ್ರದ ಮೂಲಕ ಸಂಸ್ಕೃತಿ ಜಯನಾ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ಸತ್ಯಭಾಮೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಕೃಷ್ಣನ ದೃಷ್ಟಿಕೋನದಿಂದ ಹೇಳಲಾಗುವ ಪೌರಾಣಿಕ ಕಥೆಯನ್ನು ಸತ್ಯಭಾಮೆಯ ಕಣ್ಣುಗಳ ಮೂಲಕ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಈ ಸಿನಿಮಾದಲ್ಲಿದೆ. ಹೀಗಾಗಿ ತಮ್ಮ ಚೊಚ್ಚಲ ಸಿನಿಮಾದಲ್ಲೇ ಇಂತಹ ಮಹತ್ವದ ಪಾತ್ರ ಸಿಕ್ಕಿರುವುದು ಆಶೀರ್ವಾದದಂತೆಯೇ ಅನಿಸಿತು ಎಂದು ಸಂಸ್ಕೃತಿ ಹೇಳಿದ್ದಾರೆ.

Related Articles

Related image1
ರಿಚಾ ಚಡ್ಡಾ ನಟನೆಗೆ ಬ್ರೇಕ್, ಆ 'ದುರಂತಮಯ ಕಾರಣ' ಬಹಿರಂಗ; ‘ಬ್ರೈನ್ ಫಾಗ್’ ಏಕಾಯ್ತು?!
Related image2
ಮುರಿದು ಬಿತ್ತಾ ಲವ್ ಮ್ಯಾರೇಜ್ ಆಗಿದ್ದ ಸೆಲೆಬ್ರಿಟಿ ಜೋಡಿಯ 13 ವರ್ಷಗಳ ದಾಂಪತ್ಯ? ಏನಾಯ್ತು..!?
37
Image Credit : Instagram

ಸತ್ಯಭಾಮೆಯ ಪಾತ್ರದ ಬಗ್ಗೆ ಮಾತನಾಡಿದ ಅವರು, ಕೃಷ್ಣನ ಪತ್ನಿಯಾಗಿದ್ದರೂ ಸತ್ಯಭಾಮೆ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದ್ದ ಮಹಿಳೆ ಎಂದು ಹೇಳಿದ್ದಾರೆ. ತಾನು ನಂಬಿದ್ದ ವಿಚಾರವನ್ನು ಮುಕ್ತವಾಗಿ ಹೇಳುತ್ತಿದ್ದಳು, ತನ್ನದೇ ಆದ ಗುರುತನ್ನು ಉಳಿಸಿಕೊಂಡಿದ್ದಳು ಎಂಬ ಕಾರಣಕ್ಕೆ ಇಂದಿನ ಮಹಿಳೆಯರಿಗೂ ಆಕೆ ಸ್ಫೂರ್ತಿಯಾಗಬಲ್ಲಳು ಎಂದು ಸಂಸ್ಕೃತಿ ಅಭಿಪ್ರಾಯಪಟ್ಟಿದ್ದಾರೆ. ನರಕಾಸುರನ ಸಂಹಾರ ಸೇರಿದಂತೆ ಹಲವು ಮಹತ್ವದ ಘಟನೆಗಳಲ್ಲಿ ಸತ್ಯಭಾಮೆಯ ಪಾತ್ರವಿದ್ದು, ಇಂತಹ ದೊಡ್ಡ ಪರಂಪರೆಯ ಪಾತ್ರವನ್ನು ತೆರೆಯ ಮೇಲೆ ನಿರ್ವಹಿಸುವುದು ತಮ್ಮ ಪಾಲಿಗೆ ಸವಾಲಿನ ಕೆಲಸವಾಗಿತ್ತು ಎಂದು ಅವರು ತಿಳಿಸಿದ್ದಾರೆ.

47
Image Credit : Instagram

ಪೌರಾಣಿಕ ಕಥೆಗಳು ಭಾರತೀಯರ ಭಾವನೆ ಮತ್ತು ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದುಕೊಂಡಿರುವುದರಿಂದ ಚಿತ್ರತಂಡದ ಮೇಲೂ ದೊಡ್ಡ ಜವಾಬ್ದಾರಿ ಇತ್ತು. ಸಂಸ್ಕೃತಿ ಅವರ ಪ್ರಕಾರ, ಚಿತ್ರತಂಡ ಈ ಕಥೆಯನ್ನು ಕೇವಲ ಪೌರಾಣಿಕ ಸಿನಿಮಾ ಎಂದು ನೋಡದೆ ಇತಿಹಾಸದ ದೃಷ್ಟಿಯಿಂದ ಪರಿಗಣಿಸಿತ್ತು. ನಿರ್ದೇಶಕ ಹಾರ್ದಿಕ್ ಸೇರಿದಂತೆ ಇಡೀ ತಂಡ ಪ್ರತಿಯೊಂದು ಸಣ್ಣ ವಿಚಾರಕ್ಕೂ ಹೆಚ್ಚಿನ ಗಮನ ನೀಡಿತ್ತು. ಯಾವುದೇ ವ್ಯಕ್ತಿಯ ಧಾರ್ಮಿಕ ಅಥವಾ ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪಾತ್ರಗಳನ್ನು ರೂಪಿಸಲು ಸಾಕಷ್ಟು ಎಚ್ಚರಿಕೆ ವಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಚೊಚ್ಚಲ ಚಿತ್ರವೇ ಇಷ್ಟು ದೊಡ್ಡ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಬಂದಿರುವುದರಿಂದ ಮುಂದಿನ ಸಿನಿಮಾಗಳ ಆಯ್ಕೆಯಲ್ಲೂ ಸಂಸ್ಕೃತಿ ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ. ಆದರೆ ಒಂದೇ ರೀತಿಯ ಪಾತ್ರಗಳಲ್ಲಿ ಸಿಲುಕಿಕೊಳ್ಳಲು ಅವರು ಸಿದ್ಧರಿಲ್ಲ. ನಟಿಯಾಗಿ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷಿಸುವಂತಹ ವಿಭಿನ್ನ ಪಾತ್ರಗಳು ಮತ್ತು ಕಥೆಗಳನ್ನು ಮಾಡಲು ಬಯಸಿರುವುದಾಗಿ ಹೇಳಿದ್ದಾರೆ. ದೊಡ್ಡ ಸಿನಿಮಾ ಅಥವಾ ದೊಡ್ಡ ಪಾತ್ರ ಎನ್ನುವುದಕ್ಕಿಂತ ಒಳ್ಳೆಯ ಕಥೆ ಮತ್ತು ವಿಭಿನ್ನ ಪಾತ್ರವೇ ತಮಗೆ ಮುಖ್ಯ ಎಂದು ಸಂಸ್ಕೃತಿ ಸ್ಪಷ್ಟಪಡಿಸಿದ್ದಾರೆ.

57
Image Credit : Instagram

ವಿಶ್ವದ ಪ್ರಮುಖ ನಟನಾ ಶಾಲೆಗಳಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿರುವ ಸಂಸ್ಕೃತಿ, ಆ ತರಬೇತಿಯನ್ನು ವಿಭಿನ್ನ ಪಾತ್ರಗಳ ಮೂಲಕ ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಸಿನಿಮಾ ಯಾವ ಭಾಷೆಯದ್ದೇ ಆಗಿರಲಿ, ಕಥೆ ಮತ್ತು ಪಾತ್ರದಲ್ಲಿ ತಮಗೆ ಸವಾಲು ಕಾಣಿಸಿದರೆ ಅದನ್ನು ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ. ಜೀವನದಲ್ಲಿ ಸೀಮಿತ ಸಂಖ್ಯೆಯ ಸಿನಿಮಾಗಳನ್ನು ಮಾಡಿದರೂ ನೆನಪಿನಲ್ಲಿ ಉಳಿಯುವಂತಹ ಕಥೆಗಳಲ್ಲಿ ಭಾಗಿಯಾಗಬೇಕು ಎಂಬುದು ತಮ್ಮ ಆಶಯ ಎಂದು ಸಂಸ್ಕೃತಿ ತಿಳಿಸಿದ್ದಾರೆ.

ಇನ್ನು ಸಂಸ್ಕೃತಿ ಜಯನಾ ಅವರ ಕುಟುಂಬದ ಹಿನ್ನೆಲೆಯೂ ವಿಶೇಷವಾಗಿದೆ. ಉತ್ತರ ಪ್ರದೇಶದ ರಾಜ್ಯಪಾಲೆ ಹಾಗೂ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಮೊಮ್ಮಗಳಾಗಿರುವ ಅವರು, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನಕ್ಕೆ ಮಹತ್ವ ನೀಡುವ ಕುಟುಂಬದಲ್ಲಿ ಬೆಳೆದಿದ್ದಾರೆ. ಅವರ ತಾಯಿ ಅನಾರ್ ಪಟೇಲ್ ಸಾಮಾಜಿಕ ಉದ್ಯಮಿಯಾಗಿದ್ದು, ತಂದೆ ಜಯೇಶ್ ಪಟೇಲ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕುಟುಂಬದ ಹಲವು ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡಿರುವುದು ಸಂಸ್ಕೃತಿ ಅವರ ಚಿಂತನೆಯ ಮೇಲೂ ಪ್ರಭಾವ ಬೀರಿದೆ.

67
Image Credit : Instagram

ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ಎಂಬ ಭಾವನೆ ಬಾಲ್ಯದಿಂದಲೇ ತಮ್ಮೊಳಗೆ ಬೆಳೆದಿದೆ ಎಂದು ಅವರು ಹೇಳಿದ್ದಾರೆ. ‘ಕೃಷ್ಣಾವತಾರಂ’ ಸಿನಿಮಾ ಮಾಡುವಾಗ ಕಥೆ ಮತ್ತು ಸಿನಿಮಾಗಳು ಸಮಾಜ ಹಾಗೂ ಸಂಸ್ಕೃತಿಯ ಮೇಲೆ ಎಷ್ಟು ಪ್ರಭಾವ ಬೀರುತ್ತವೆ ಎಂಬುದು ಮತ್ತಷ್ಟು ಅರ್ಥವಾಯಿತು ಎಂದು ಸಂಸ್ಕೃತಿ ತಿಳಿಸಿದ್ದಾರೆ. ಹೀಗಾಗಿ ನಟನೆಯ ಮೂಲಕವೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಜವಾಬ್ದಾರಿ ತಮ್ಮಲ್ಲಿದೆ ಎಂದು ಹೇಳಿದ್ದಾರೆ.

ತಮ್ಮ ಕುಟುಂಬದ ಹೆಸರಿನಿಂದ ಜನರು ತಮ್ಮನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬುದನ್ನು ಸಂಸ್ಕೃತಿ ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ತಾವು ಪರಿಗಣಿಸುವುದಿಲ್ಲ ಎಂದಿದ್ದಾರೆ. ಬದಲಾಗಿ, ಇಂತಹ ಕುಟುಂಬದ ಹಿನ್ನೆಲೆಯಿಂದ ಬಂದಾಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇನ್ನಷ್ಟು ಶ್ರಮಿಸಬೇಕಾಗುತ್ತದೆ ಎಂಬುದು ಅವರ ನಿಲುವು.

77
Image Credit : Instagram

“ನೀವು ಒಂದು ನಿರ್ದಿಷ್ಟ ಕುಟುಂಬದ ಹೆಸರು ಮತ್ತು ಅದರ ಪರಂಪರೆಯನ್ನು ಹೊತ್ತುಕೊಂಡು ಬಂದಾಗ, ನಿಮ್ಮ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಜನರು ನಿಮ್ಮ ಮಾತನ್ನು ಮಾತ್ರ ನಂಬುವುದಿಲ್ಲ; ನೀವು ನಿಮ್ಮನ್ನು ಸಾಬೀತುಪಡಿಸಬೇಕು” ಎಂಬ ಅರ್ಥದಲ್ಲಿ ಸಂಸ್ಕೃತಿ ಮಾತನಾಡಿದ್ದಾರೆ. ತಮ್ಮ ಕುಟುಂಬದ ಪರಂಪರೆ ಮತ್ತು ಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವುದು ತಮ್ಮ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಹೀಗೆ, ಸತ್ಯಭಾಮೆಯಂತಹ ಶಕ್ತಿಶಾಲಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸಂಸ್ಕೃತಿ ಜಯನಾ, ಕುಟುಂಬದ ಹೆಸರಿನ ಜೊತೆಗೆ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಳ್ಳುವ ಗುರಿಯಲ್ಲಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯಲು ಸಿದ್ಧವಾಗಿರುವ ಈ ನಟಿಯ ಮುಂದಿನ ಸಿನಿಮಾ ಆಯ್ಕೆಗಳು ಹೇಗಿರಲಿವೆ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮನರಂಜನಾ ಸುದ್ದಿ
ಬಾಲಿವುಡ್
ಜೀವನಶೈಲಿ
ಕುಟುಂಬ
 

Latest Videos
Recommended Stories
Recommended image1
ರಿಚಾ ಚಡ್ಡಾ ನಟನೆಗೆ ಬ್ರೇಕ್, ಆ 'ದುರಂತಮಯ ಕಾರಣ' ಬಹಿರಂಗ; ‘ಬ್ರೈನ್ ಫಾಗ್’ ಏಕಾಯ್ತು?!
Recommended image2
ಬಿಗ್ ಬಾಸ್ ಮಾಜಿ ಸ್ಪರ್ಧಿ ಅಸ್ವಸ್ಥ, 5ನೇ ಸುತ್ತಿನ ಕೀಮೋ ಥೆರಪಿ ಬೆನ್ನಲ್ಲೇ ಐಸಿಯುಗೆ ದಾಖಲು
Recommended image3
"Bigg Boss ರಿಜೆಕ್ಟ್ ಮಾಡ್ದೆ, ಜಗಳವಾಡಿ ಮನೆ ಬಿಟ್ಟಿದ್ದೆ.." ಯುಟ್ಯೂಬರ್ ಭೂಮಿಕಾ ಬಸವರಾಜ್ ಹೇಳಿದ್ದಿಷ್ಟು!
Related Stories
Recommended image1
ರಿಚಾ ಚಡ್ಡಾ ನಟನೆಗೆ ಬ್ರೇಕ್, ಆ 'ದುರಂತಮಯ ಕಾರಣ' ಬಹಿರಂಗ; ‘ಬ್ರೈನ್ ಫಾಗ್’ ಏಕಾಯ್ತು?!
Recommended image2
ಮುರಿದು ಬಿತ್ತಾ ಲವ್ ಮ್ಯಾರೇಜ್ ಆಗಿದ್ದ ಸೆಲೆಬ್ರಿಟಿ ಜೋಡಿಯ 13 ವರ್ಷಗಳ ದಾಂಪತ್ಯ? ಏನಾಯ್ತು..!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved