MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Mangaluru Railway Zone
Duleep Trophy Final
US Open 2026
Yeshwantpur-Mangaluru Vande Bharat
BDA Amendment Act 2026
Koppal Govt School
Hassan-Belur Road Project
Bigg Boss Kannada 13
Tukaram Mundhe
Uppinangady Ganeshotsava Samiti
  • Home
  • Entertainment
  • ನಟನೆಗೆ ಗುಡ್‌ಬೈ ಹೇಳೋಕೆ ನಿರ್ಧರಿಸಿದ್ದ ಸಮಂತಾ! ನಿರ್ದೇಶಕ ರಾಜ್ ನಿಡಿಮೋರು ಕೊಟ್ಟ ಟ್ವಿಸ್ಟ್ ಏನು?

ನಟನೆಗೆ ಗುಡ್‌ಬೈ ಹೇಳೋಕೆ ನಿರ್ಧರಿಸಿದ್ದ ಸಮಂತಾ! ನಿರ್ದೇಶಕ ರಾಜ್ ನಿಡಿಮೋರು ಕೊಟ್ಟ ಟ್ವಿಸ್ಟ್ ಏನು?

ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ನಿಜವಾಗಿಯೂ ಸಿನಿಮಾಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದರಾ? ಆ ನಿರ್ಧಾರದಿಂದ ಅವರನ್ನು ತಡೆದವರು ಯಾರು? ನಿರ್ದೇಶಕ ರಾಜ್ ನಿಡಿಮೋರು ನೀಡಿದ ಬೆಂಬಲವಾದರೂ ಏನು? ಇಲ್ಲಿದೆ ಪೂರ್ತಿ ವಿವರ.

1 Min read
Author : Naveen Kodase
Published : Sep 10 2026, 06:35 PM IST
Share this Photo Gallery
  • FB
  • TW
  • Linkdin
  • Whatsapp
15
ಸಮತಾ ಸಿನಿಮಾಗೆ ಗುಡ್‌ ಬೈ ಹೇಳಲು ಮುಂದಾಗಿದ್ದೇಕೆ ಗೊತ್ತಾ?
Image Credit : JioHotstar Telugu/ X, Kalyani Priyadarshan/ Instagram

ಸಮತಾ ಸಿನಿಮಾಗೆ ಗುಡ್‌ ಬೈ ಹೇಳಲು ಮುಂದಾಗಿದ್ದೇಕೆ ಗೊತ್ತಾ?

ಸೂಪರ್ ಡಿಲಕ್ಸ್, ರಂಗಸ್ಥಲಂ, ಈಗ ಸೇರಿದಂತೆ ಹಲವಾರು ಬ್ಲಾಕ್‌ ಬಸ್ಟರ್ ಸಿನಿಮಾ ಮೂಲಕ ತೆಲುಗು ಅಭಿಮಾನಿಗಳ ಮನೆಮಾತಾಗಿರುವ ಸಮಂತಾ ರುತ್ ಪ್ರಭು, ಒಂದು ಹಂತದಲ್ಲಿ ಸಿನಿಮಾ ಸಹವಾಸವೇ ಬೇಡ ಅಂತ, ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದರಂತೆ. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಸ್ವತಃ ಸಮಂತಾ ಅವರೇ ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ ನಟಿ
Image Credit : Instagram

ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ ನಟಿ

ತೆಲುಗು ಚಿತ್ರರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸ್ಟಾರ್ ನಟಿಯಾಗಿ ಮೆರೆದವರು ಸಮಂತಾ. ಆದರೆ, ಮಯೋಸಿಟಿಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಜೀವನದ ಸವಾಲುಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದವು. ಈ ಹಂತದಲ್ಲಿ ನಟನೆಗೆ ಶಾಶ್ವತವಾಗಿ ಗುಡ್‌ಬೈ ಹೇಳಲು ಅವರು ನಿರ್ಧರಿಸಿದ್ದರಂತೆ.

Related Articles

Related image1
ಕೊನೆಗೂ ಬಯಲಾಯ್ತು ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ರಹಸ್ಯ: ಡಿಸೈನ್ ಕೂಡ ಯೂನಿಕ್!
Related image2
ಸೀಮಂತ ಸಂಭ್ರಮದಲ್ಲಿ ಸಮಂತಾ: ರಾಜ್ ನಿಡಿಮೋರು ಜೊತೆಗಿನ ಫೋಟೋಗಳು ಸಖತ್ ವೈರಲ್
35
ಮೂರು ವರ್ಷಗಳ ವಿರಾಮದ ನಂತರ ಏನಾಯ್ತು?
Image Credit : Instagram

ಮೂರು ವರ್ಷಗಳ ವಿರಾಮದ ನಂತರ ಏನಾಯ್ತು?

ಆರೋಗ್ಯ ಹದಗೆಟ್ಟಿದ್ದರಿಂದ ಸಮಂತಾ ಸುಮಾರು ಎರಡು ವರ್ಷಗಳ ಕಾಲ ಮನೆಯಲ್ಲೇ ಇರಬೇಕಾಯಿತು. ಇದರಿಂದಾಗಿ ಮೂರು ವರ್ಷಗಳ ಕಾಲ ಅವರು ಬೆಳ್ಳಿತೆರೆಯಿಂದ ದೂರ ಉಳಿದರು. 'ನನ್ನನ್ನು ನೋಡಲು ಪ್ರೇಕ್ಷಕರು ಮತ್ತೆ ಥಿಯೇಟರ್‌ಗೆ ಬರುತ್ತಾರಾ?' ಎಂಬ ಭಯ ಮತ್ತು ಆತಂಕ ಅವರನ್ನು ಕಾಡಿತ್ತು. ಈ ಕಾರಣದಿಂದಾಗಿ ನಟನೆಯನ್ನು ಬಿಟ್ಟು ಬೇರೆ ಉದ್ಯಮಗಳತ್ತ ಗಮನ ಹರಿಸಲು ಅವರು ಯೋಚಿಸಿದ್ದರಂತೆ.

45
ರಾಜ್ ನಿಡಿಮೋರು ಏನು ಮಾಡಿದರು?
Image Credit : Twitter

ರಾಜ್ ನಿಡಿಮೋರು ಏನು ಮಾಡಿದರು?

ಸಮಂತಾ ನಟನೆ ಬಿಡುವ ಯೋಚನೆಯಲ್ಲಿದ್ದಾಗ, ನಿರ್ದೇಶಕ ರಾಜ್ ನಿಡಿಮೋರು ಅವರಿಗೆ ಬೆಂಬಲವಾಗಿ ನಿಂತರು. ಸಮಂತಾ ಅವರ ನಿರ್ಧಾರವನ್ನು ಅವರು ಒಪ್ಪಲಿಲ್ಲ. ತೆಲುಗು ಪ್ರೇಕ್ಷಕರಲ್ಲಿ ಸಮಂತಾಗೆ ಇರುವ ಅಭಿಮಾನ ಮತ್ತು ಅವರ ಸ್ಟಾರ್‌ಡಮ್ ಅನ್ನು ರಾಜ್ ನೆನಪಿಸಿದರು. ನಟನೆಯ ಪ್ರತಿಭೆಯನ್ನು ವ್ಯರ್ಥ ಮಾಡಬಾರದೆಂದು ಹೇಳಿ, 'ಮಾ ಇಂಟಿ ಬಂಗಾರಂ' ಕಥೆಯೊಂದಿಗೆ ಅವರನ್ನೇ ನಾಯಕಿಯನ್ನಾಗಿಸಿ ಸಿನಿಮಾ ನಿರ್ಮಿಸಲು ಮುಂದಾದರು.

55
ಭರ್ಜರಿ ಕಮ್‌ಬ್ಯಾಕ್ ಮಾಡಿದ ಸಮಂತಾ
Image Credit : Twitter

ಭರ್ಜರಿ ಕಮ್‌ಬ್ಯಾಕ್ ಮಾಡಿದ ಸಮಂತಾ

ರಾಜ್ ನಿಡಿಮೋರು ಅವರ ಪ್ರೋತ್ಸಾಹದಿಂದ ಸಮಂತಾ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ.ಗೂ ಹೆಚ್ಚು ಗಳಿಸಿ ಭರ್ಜರಿ ಯಶಸ್ಸು ಕಂಡಿತು. ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಭಾವುಕರಾದ ಸಮಂತಾ, 'ನಾನು ನಟನೆಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದೆ. ಆದರೆ ರಾಜ್ ಅವರು ನನ್ನನ್ನು ಮತ್ತೆ ನಟಿಸುವಂತೆ ಒಪ್ಪಿಸಿದರು. ಅವರ ಪ್ರೋತ್ಸಾಹದಿಂದಲೇ ಇಂದು ಮತ್ತೆ ಪ್ರೇಕ್ಷಕರ ಪ್ರೀತಿ ನೋಡುತ್ತಿದ್ದೇನೆ' ಎಂದು ಕೃತಜ್ಞತೆ ಸಲ್ಲಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸಮಂತಾ ರುತ್ ಪ್ರಭು
ಟಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Sardar 2 Review: ಸ್ಪೈ ಮಿಷನ್‌ನಲ್ಲಿ ಆಶಿಕಾ-ಕಾರ್ತಿ ಅಬ್ಬರ: ಇಲ್ಲಿದೆ ಪ್ಲಸ್-ಮೈನಸ್ ರಿವ್ಯೂ
Recommended image2
ಕೊನೆಗೂ ಬಯಲಾಯ್ತು ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ರಹಸ್ಯ: ಡಿಸೈನ್ ಕೂಡ ಯೂನಿಕ್!
Recommended image3
ಜಯಲಲಿತಾ ಮಾದರಿಯಲ್ಲೇ ದರ್ಶನ್ ವಿಚಾರಣೆ? ಖುದ್ದು ಹಾಜರಾತಿ ಅರ್ಜಿಗೆ ಹೈಕೋರ್ಟ್ ಮಹತ್ವದ ಸಲಹೆ
Related Stories
Recommended image1
ಕೊನೆಗೂ ಬಯಲಾಯ್ತು ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ರಹಸ್ಯ: ಡಿಸೈನ್ ಕೂಡ ಯೂನಿಕ್!
Recommended image2
ಸೀಮಂತ ಸಂಭ್ರಮದಲ್ಲಿ ಸಮಂತಾ: ರಾಜ್ ನಿಡಿಮೋರು ಜೊತೆಗಿನ ಫೋಟೋಗಳು ಸಖತ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved