ನೀವು ಮುಸ್ಲಿಂ, ಹೇ ರಾಮ ಅಂತ ಹೇಗೆ ಹೇಳ್ತೀರಿ? ಪ್ರಧಾನಿ ಕಚೇರಿ ತಲುಪಿದ ಹಿಟ್ ಸಿನಿಮಾ
ಸಿನಿಮಾವೊಂದರ 'ಹೇ ರಾಮ್' ಸಂಭಾಷಣೆಗೆ ಸೆನ್ಸಾರ್ ಮಂಡಳಿ ತಡೆಯೊಡ್ಡಿತ್ತು. ಈ ವಿವಾದ ಪ್ರಧಾನಿ ಕಚೇರಿಯನ್ನು ತಲುಪಿದಾಗ, ಸ್ವತಃ ಪ್ರಧಾನ ಮಂತ್ರಿಗಳೇ ಅವರೇ ಸಿನಿಮಾ ವೀಕ್ಷಿಸಿ ಬಿಡುಗಡೆಗೆ ಅನುಮತಿ ನೀಡಿದ್ದರು.

ಹೇ ರಾಮ್
ಸಿನಿಮಾ ಮತ್ತು ಸೆನ್ಸಾರ್ ಬೋರ್ಡ್ ನಡುವೆ ಆಗಾಗ್ಗೆ ಸಂಘರ್ಷ ಏರ್ಪಡುತ್ತಿರುತ್ತದೆ. ತಮ್ಮ ಸಿನಿಮಾಗಳಲ್ಲಿ ದೃಶ್ಯ ಅಥವಾ ಡೈಲಾಗ್‌ಗಳಿಗೆ ಕತ್ತರಿ ಹಾಕಿದ್ದಕ್ಕೆ ನಿರ್ದೇಶಕರು, ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಈ ಸಂಘರ್ಷ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾವೊಂದರ "ಹೇ ರಾಮ್" ಎಂಬ ಡೈಲಾಗ್ ವಿವಾದಕ್ಕೆ ಸಿಲುಕಿ, ಅಂತಿಮವಾಗಿ ಪ್ರಧಾನಿಗಳ ಕಚೇರಿಯನ್ನು ತಲುಪಿತ್ತು. ಪ್ರಧಾನಿಗಳು ಸಿನಿಮಾ ವೀಕ್ಷಣೆ ಮಾಡಿದಾಗಲೇ ಬಿಡುಗಡೆಯ ಅವಕಾಶ ಸಿಕ್ಕಿತ್ತು.
ಸೆನ್ಸಾರ್ ಬೋರ್ಡ್
ಬಾಲಿವುಡ್ ಸಿನಿಮಾ ನಿರ್ಮಾಪಕರಾಗಿರುವ ತಿಗ್ಮಾಂಶು ಧುಲಿಯಾ (Tigmanshu Dhulia) ಸಂದರ್ಶನವೊಂದಲ್ಲಿ, ಚಿತ್ರವೊಂದು ಪ್ರಧಾನಿ ಕಚೇರಿಯವರೆಗೂ ತಲುಪಿದ್ದರ ಬಗ್ಗೆ ವಿವರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಿರ್ದೇಶಕರು, ಬ್ರಿಟಿಷರಿಗೆ ತಿಳಿಯದ ಹಾಗೆ ದೇಶಭಕ್ತಿ ಜಾಗೃತಗೊಳಿಸುವ ಡೈಲಾಗ್ ಬಳಕೆ ಮಾಡುತ್ತಿದ್ದರು. ಹಾಗಾಗಿ ಸೆನ್ಸಾರ್ ಬೋರ್ಡ್ ಎಂಬ ಕಲ್ಪನೆಯನ್ನು ತೆಗೆದುಕೊಂಡು ಬರಲಾಯ್ತು.
ಗಂಗಾ ಜಮುನಾ ಸಿನಿಮಾ ಸಂಭಾಷಣೆ ವಿವಾದ
ದಿಲೀಪ್ ಕುಮಾರ್ ನಟನೆಯ 'ಗಂಗಾ ಜಮುನಾ' ಸಿನಿಮಾಗೆ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆಯನ್ನೊಡ್ಡಿತ್ತು. ಸಿನಿಮಾದ ಒಂದು ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಈ ದೃಶ್ಯದಲ್ಲಿ ದಿಲೀಪ್ ಕುಮಾರ್ ನಿರ್ವಹಿಸುತ್ತಿದ್ದ ಪಾತ್ರ ಹೇ ರಾಮ ಎಂದು ಹೇಳುವ ಮೂಲಕ ಕೊನೆಯಾಗುತ್ತದೆ. ಹೇ ರಾಮ ಬಳಕೆಗೆ ಸೆನ್ಸಾರ್ ಮಂಡಳಿಯಿಂದ ವಿರೋಧ ವ್ಯಕ್ತವಾಗಿತ್ತು.
ಗಂಗಾ ಹೆಸರಿನ ಹಿಂದೂ ಪಾತ್ರ
ಮುಂದುವರಿದು ಮಾತನಾಡಿದ ಧುಲಿಯಾ, ನೀವು ಹೇಗೆ ಹೇ ರಾಮ ಎಂದು ಹೇಳುತ್ತೀರಿ? ನೀವು ಮುಸ್ಲಿಂ ಅಲ್ಲವೇ ಎಂದು ಸೆನ್ಸಾರ್ ಮಂಡಳಿ ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರಿಸಿದ ದಿಲೀಪ್ ಕುಮಾರ್, ಚಿತ್ರದಲ್ಲಿ ನನ್ನದು ಗಂಗಾ ಹೆಸರಿನ ಹಿಂದೂ ಪಾತ್ರ. ಹಾಗಾಗಿ ಗಂಗಾ ತನ್ನ ಕೊನೆ ಕ್ಷಣದಲ್ಲಿ ಹೇ ರಾಮ ಎಂದು ಹೇಳಬಹುದಿತ್ತು ಎಂದರು. ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಪ್ರಕರಣ ಪ್ರಧಾನಿಗಳ ಕಚೇರಿಯವರೆಗೂ ತಲುಪಿತ್ತು.
ಗಂಗಾ ಜಮುನಾ ಸಿನಿಮಾ ವೀಕ್ಷಣೆ ಮಾಡಿದ ಜವಾಹರ್ ಲಾಲ್ ನೆಹರು
ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಜವಾಹರ್ ಲಾಲ್ ನೆಹರೂ, ಅವರೇ ಸ್ವತಃ 'ಗಂಗಾ ಜಮುನಾ' ಸಿನಿಮಾ ವೀಕ್ಷಣೆ ಮಾಡಿದ್ದರು. ಚಿತ್ರದಲ್ಲಿ ಯಾವುದೇ ವಿವಾದಿತ ಸಂಭಾಷಣೆ ಇಲ್ಲದಿರೋದನ್ನು ದೃಢೀಕರಿಸಿ ಸಿನಿಮಾ ಬಿಡುಗಡೆಗೆ ಸೂಚಿಸಿದ್ದರು. ಈ ಘಟನೆ ಬಳಿಕ ದಿಲೀಪ್ ಕುಮಾರ್, ತಮ್ಮ ಸಿನಿಮಾ ಬಿಡುಗಡೆಗೆ ತಡೆಯುಂಟಾದ್ರೆ ಪ್ರಧಾನಿಗಳಿಂದ ಸಹಾಯ ಪಡೆಯುತ್ತಾರೆ ಎಂಬ ಗಾಸಿಪ್ ಶುರುವಾಯ್ತು. ಈ ಘಟನೆ ಬಳಿಕ ದಿಲೀಪ್ ಕುಮಾರ್ ಯಾವ ಸಿನಿಮಾಗಳು ಅಡೆತಡೆಗಳು ಆಗಲಿಲ್ಲ ಎಂದು ಧುಲಿಯಾ ಹೇಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

