ರೀಲ್ಸ್ ನೋಡಿ ಟೈಮ್ ಹಾಳ್ಮಾಡ್ತಿರೋ ಮಕ್ಕಳಿಗೆ ಈ 5 ಶಾರ್ಟ್ ಫಿಲ್ಮ್ ತೋರ್ಸಿ
ಮಕ್ಕಳು ಮೊಬೈಲ್ , ಟಿವಿ ನೋಡ್ತಿದ್ರೆ ಪಾಲಕರಿಗೆ ಟೆನ್ಷನ್ ಆಗೋದು ಸಾಮಾನ್ಯ. ಒಳ್ಳೆ ವಿಡಿಯೋ ನೋಡಿ ಅಂತ ಮಕ್ಕಳಿಗೆ ಪಾಲಕರು ಸಲಹೆ ನೀಡ್ತಾರೆ. ಆದ್ರೆ ಒಳ್ಳೆಯ ವಿಡಿಯೋ ಯಾವ್ದು ಎನ್ನುವ ಪ್ರಶ್ನೆಗೆ ಪಾಲಕರ ಬಳಿ ಉತ್ತರ ಇಲ್ಲ. ನೀವೂ ಈ ಗೊಂದಲದಲ್ಲಿದ್ರೆ ಯೂಟ್ಯೂಬ್ ನಲ್ಲಿ ಮಕ್ಕಳಿಗೆ ಈ ಐದು ಸಿನಿಮಾ ತೋರಿಸಿ.

Hope
ಯೂಟ್ಯೂಬ್ ನಲ್ಲಿ ಸಾಕಷ್ಟು ಶಾರ್ಟ್ ಸಿನಿಮಾಗಳಿವೆ. ಅದ್ರಲ್ಲಿ Hope ಕೂಡ ಒಂದು. ಇದು ಮಕ್ಕಳಿಗೆ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಕಲಿಸುತ್ತದೆ. ಕಷ್ಟದ ಸಮಯದಲ್ಲಿ ತಮ್ಮನ್ನು ತಾವು ಹೇಗೆ ನಿಭಾಯಿಸಬೇಕು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಜೀವನದಲ್ಲಿ ಸವಾಲು ಎದುರಾದ್ರೆ ನಾವು ಅದನ್ನು ಸುಲಭವಾಗಿ ಬಿಟ್ಟುಕೊಡಬಾರದು ಎಂಬುದನ್ನು ಚಿತ್ರ ನೋಡಿ ಮಗು ಕಲಿಯಬಹುದು. ಒಂದು ಮಗು ಚಿಕ್ಕ ವಯಸ್ಸಿನಿಂದಲೇ ಕಷ್ಟಗಳನ್ನು ಎದುರಿಸಲು ಕಲಿತರೆ, ಭವಿಷ್ಯದ ಸವಾಲುಗಳನ್ನು ಎದುರಿಸೋದು ಕಷ್ಟವಲ್ಲ.
ದಿ ಪ್ರೆಸೆಂಟ್ (The Present)
ಎರಡನೇ ಚಿತ್ರ ದಿ ಪ್ರೆಸೆಂಟ್. ಇದರಲ್ಲಿ, ಒಂದು ಮಗು ನಾಯಿಮರಿಯನ್ನು ಉಡುಗೊರೆಯಾಗಿ ಪಡೆಯುತ್ತದೆ. ನಾಯಿಮರಿಯ ಒಂದು ಕಾಲಿನಲ್ಲಿ ಸಮಸ್ಯೆ ಇರುತ್ತದೆ. ಆರಂಭದಲ್ಲಿ, ಮಗುವಿಗೆ ಅದು ಇಷ್ಟವಾಗೋದಿಲ್ಲ. ಅದನ್ನು ಸಾಕಲು ನಿರಾಕರಿಸುತ್ತದೆ. ನಂತ್ರ, ಮಗುವಿನ ಆಲೋಚನೆ ಬದಲಾಗುತ್ತದೆ. ನಾಯಿಮರಿ ಅಂಗವೈಕಲ್ಯದ ಹೊರತಾಗಿಯೂ ಅದನ್ನು ಸ್ವೀಕರಿಸುತ್ತದೆ. ಈ ಕಥೆ ಮಕ್ಕಳಿಗೆ ಪ್ರೀತಿ, ಸಹಾನುಭೂತಿ, ಇತರರ ಬಗ್ಗೆ ಯೋಚಿಸಲು ಕಲಿಸುತ್ತದೆ.
ಇಯಾನ್ (Ian)
ಮೂರನೇ ಚಿತ್ರ ಇಯಾನ್. ಇದು ಸೆರೆಬ್ರಲ್ ಪಾಲ್ಸಿ ಇರುವ ಮಗುವಿನ ಕಥೆಯನ್ನು ಹೇಳುತ್ತದೆ. ಈ ಮಗು ಇತರ ಮಕ್ಕಳೊಂದಿಗೆ ಆಟವಾಡಲು ಮತ್ತು ಸೇರಲು ಬಯಸುತ್ತದೆ. ಯಾರನ್ನಾದರೂ ಗೇಲಿ ಮಾಡುವುದು ಅಥವಾ ಬೆದರಿಸುವುದು ತಪ್ಪು ಎಂದು ಈ ಚಿತ್ರ ಮಗುವಿಗೆ ಕಲಿಸುತ್ತದೆ.
For the Birds
For the Birds ಈ ಚಿತ್ರ ಒಂದು ಹಕ್ಕಿಯ ಕಥೆಯನ್ನು ಹೇಳುತ್ತದೆ. ಈ ಹಕ್ಕಿ ಇತರ ಪಕ್ಷಿಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಈ ಕಥೆ, ನಮಗಿಂತ ಭಿನ್ನವಾಗಿರುವವರನ್ನು ಕಡಿಮೆ ಅಂದಾಜು ಮಾಡಬಾರದು, ಅವರನ್ನು ಭಿನ್ನವಾಗಿ ನೋಡಬಾರದು, ಕಿರುಕುಳ ನೀಡಬಾರದು ಎಂಬುದನ್ನು ಕಲಿಸುತ್ತದೆ.
Let's Eat
ಯೂಟ್ಯೂಬ್ ನಲ್ಲಿರುವ ಲೆಟ್ಸ್ ಈಟ್ ಶಾರ್ಟ್ ಸಿನಿಮಾವನ್ನು ಕೂಡ ನೀವು ನಿಮ್ಮ ಮಕ್ಕಳಿಗೆ ತೋರಿಸಬಹುದು. ಇದು ತಾಯಿ ಮತ್ತು ಮಗಳ ಕಥೆಯನ್ನು ಹೇಳುತ್ತದೆ. ಈ ಕಿರುಚಿತ್ರ ಕೇವಲ 8 ನಿಮಿಷಗಳಷ್ಟು ಉದ್ದವಾಗಿದೆ. ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ತೋರಿಸಬಹುದಾದ ಸಿನಿಮಾ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

