MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Entertainment
  • TV Talk
  • Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ

Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ

ಬಿಗ್​ಬಾಸ್​ ಅಗ್ನಿಪರೀಕ್ಷೆ ತೀರ್ಪುಗಾರ್ತಿಯಾಗಿರುವ ಸಂಗೀತಾ ಶೃಂಗೇರಿ, ಟಿಆರ್‌ಪಿಗಾಗಿ ಸ್ಪರ್ಧಿಗಳಿಗೆ ಅವಮಾನ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ನಿಮಗೆ ಇಷ್ಟವಿದ್ದರೆ ನೋಡಿ, ಇಲ್ಲದಿದ್ದರೆ ಬಿಡಿ ಎಂಬ ಅವರ ಉತ್ತರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 Min read
Author : Suchethana D
Published : Aug 24 2026, 10:46 AM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ
Image Credit : Asianet News

ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ

ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದವರು ಸಂಗೀತಾ ಶೃಂಗೇರಿ. ಬಿಗ್​ಬಾಸ್​ನಿಂದ ಅಪಾರ ಜನಪ್ರಿಯತೆಯನ್ನೂ ಗಳಿಸಿದ ಅವರು ಇದೀಗ ಬಿಗ್​ಬಾಸ್​​ 13ನೇ ಸೀಸನ್​ನಲ್ಲಿ ಜಡ್ಜ್​ ಆಗಿದ್ದಾರೆ. ಜನ ಸಾಮಾನ್ಯರಿಗೆ ಬಿಗ್​ಬಾಸ್​​ ಮನೆಯೊಳಕ್ಕೆ ಹೋಗುವ ಅವಕಾಶ ನೀಡುವ ಸಲುವಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ (Bigg Boss Agni Pareekshe) ಅವರು ತೀರ್ಪುಗಾರರಲ್ಲಿ ಒಬ್ಬರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಗ್ನಿಪರೀಕ್ಷೆಯ ಬಗ್ಗೆ ಟೀಕೆ
Image Credit : instagram

ಅಗ್ನಿಪರೀಕ್ಷೆಯ ಬಗ್ಗೆ ಟೀಕೆ

ಬಿಗ್​ಬಾಸ್​ ಅಗ್ನಿ ಪರೀಕ್ಷೆಯಲ್ಲಿ ಜನರನ್ನು ತೀರ್ಪುಗಾರರು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ತೀರ್ಪುಗಾರರು ಹೇಳುವ ಮಾತುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಇದು ದುರಹಂಕರಾದ ಮಾತುಗಳು, ಖುದ್ದು ಸುದೀಪ್​ ಅವರೇ ಇಂಥ ದುರಹಂಕಾರದ ಮಾತುಗಳನ್ನು ಆಡುವುದಿಲ್ಲ ಎಂದೆಲ್ಲಾ ಟೀಕೆ ಮಾಡಲಾಗುತ್ತಿದೆ.

Related Articles

Related image1
Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ
Related image2
Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ
36
ಸ್ಪರ್ಧಿಗಳಿಗೆ ಅವಮಾನ
Image Credit : instagram

ಸ್ಪರ್ಧಿಗಳಿಗೆ ಅವಮಾನ

ಕೆಲವರು, ಈ ಅಗ್ನಿ ಪರೀಕ್ಷೆ ಅಂತ ಮಾಡಿರೋದೇ ಟಿಆರ್​ಪಿಗಾಗಿ. ಅದಕ್ಕಾಗಿ, ಸ್ಪರ್ಧಿಗಳನ್ನು ಕೀಳಾಗಿ ನೋಡಲಾಗುತ್ತಿದೆ ಎಂದೆಲ್ಲಾ ಹೇಳಲಾಗುತ್ತಿದ್ದು, ಇದೀಗ ಅದೇ ಪ್ರಶ್ನೆಯನ್ನು ಸಂಗೀತಾ ಶೃಂಗೇರಿ ಅವರಿಗೂ ಕೇಳಲಾಗಿತ್ತು.

46
ಇವೆಲ್ಲಾ TRPಗಾಗಿಯಾ?
Image Credit : Sangeetha Sringeri Instagram

ಇವೆಲ್ಲಾ TRPಗಾಗಿಯಾ?

ಇವೆಲ್ಲಾ ಮಾಡ್ತಿರೋದು ಟಿಆರ್​ಪಿಗಾಗಿ ಅಂತಾರೆ. ನಿಜವಾಗಿಯೂ ಸಾಮಾನ್ಯ ಜನರನ್ನು ಕಳಿಸೋದು ಹೌದಾ? ಹೀಗೆ ಅವರನ್ನು ಅವಮಾನ ಮಾಡ್ತಿರೋದೆಲ್ಲಾ ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ.

56
ಇಷ್ಟ ಇದ್ರೆ ನೋಡಿ, ಇಲ್ಲಾಂದ್ರೆ...
Image Credit : Instagram

ಇಷ್ಟ ಇದ್ರೆ ನೋಡಿ, ಇಲ್ಲಾಂದ್ರೆ...

ಅದಕ್ಕೆ ಗರಂ ಆದ ಸಂಗೀತಾ, ಟಿಆರ್​ಪಿ ಟಿಆರ್​ಪಿ ಅಂತೀರಾ. ಅದೆಲ್ಲಾ ನಿಮಗೆ ಯಾಕೆ? TRPನೋ ಇನ್ನೇನೋ, ಅದನ್ನು ಹೇಳಿ ಹೇಳಿನೇ ನೀವು ಟಿಆರ್​ಪಿ ಹೆಚ್ಚು ಮಾಡ್ತಿರೋದು, ಅದನ್ನೆಲ್ಲಾ ಕಟ್ಟಿಕೊಂಡು ನಿಮಗೆಲ್ಲಾ ಏನು ಆಗಬೇಕಿದೆ ಎಂದರು. ನಿಮಗೆ ಇಷ್ಟವಿದ್ದರೆ ಬಿಗ್​ಬಾಸ್​ ನೋಡಿ, ಇಲ್ಲದಿದ್ದರೆ ಬಿಡಿ. ಸುಮ್ಮನೇ ಟಿಆರ್​ಪಿ ವಿಷ್ಯ ಎಲ್ಲಾ ಮಾತನಾಡಲು ಹೋಗಬೇಡಿ ಎಂದು ಕಿಡಿ ಕಾರಿದರು.

66
ನೆಟ್ಟಿಗರ ಆಕ್ರೋಶ
Image Credit : Instagram

ನೆಟ್ಟಿಗರ ಆಕ್ರೋಶ

ಸೋಷಿಯಲ್​ ಮೀಡಿಯಾದಲ್ಲಿ ನಟಿಯ ವಿರುದ್ಧ ಅವರ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಸಂಗೀತಾ ಹೇಳಿದ್ದು, ಟಿಆರ್​ಪಿ ವಿಷ್ಯ ಬಿಡಿ. ನಿಮಗೆ ಮನರಂಜನೆ ಸಾಕಲ್ವಾ? ಇಷ್ಟ ಆದ್ರೆ ನೋಡಿ, ಇಲ್ಲಾಂದ್ರೆ ಇಲ್ಲ ಎಂದು. ಆದರೆ ಹೀಗೆ ಹೇಳಿದ್ದು, ಅತಿಯಾಯ್ತು, ಇದು ಅಹಂಕಾರದ ಪರಮಾವಧಿ ಎಂದೆಲ್ಲಾ ಕಮೆಂಟ್​ನಲ್ಲಿ ನಟಿಯ ಟ್ರೋಲ್​ ಮಾಡಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಿಚ್ಚ ಸುದೀಪ್

Latest Videos
Recommended Stories
Recommended image1
2014ರ TRP ಕ್ವೀನ್ ಗಳಾದ ಸೂಪರ್ ಹಿಟ್ ಸೀರಿಯಲ್ ನಟಿಯರು… ಇದೀಗ ಮತ್ತೆ ಪೈಪೋಟಿ ಕೊಡಲು ಬಂದ್ರು
Recommended image2
‘ಮದನ ಮನಮೋಹಿನಿ’ಯಾದ ‘ಶ್ರೀರಾಘವೇಂದ್ರ ಮಹಾತ್ಮೆ’ ಸರಸ್ವತಿ… ಹೊಸ ಲುಕ್’ಗೆ ಫ್ಯಾನ್ಸ್ ಫಿದಾ
Recommended image3
‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ: ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್
Related Stories
Recommended image1
Bigg Boss ಅಗ್ನಿ ಪರೀಕ್ಷೆಯಲ್ಲಿ ಸ್ಪರ್ಧಿಗೆ ಗೆಟ್​ ಔಟ್​ ಎಂದ ವಿನಯ್​ ಗೌಡ: ಮುಂದೇನಾಯ್ತು ನೋಡಿ
Recommended image2
Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved