- Home
- Entertainment
- ಆಮೆ ಪಕ್ಕಕ್ಕೆ ಇಡಮ್ಮಾ, ಬ್ಯೂಟಿ ಸಿಕ್ರೇಟ್ ರಿವೀಲ್ ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್
ಆಮೆ ಪಕ್ಕಕ್ಕೆ ಇಡಮ್ಮಾ, ಬ್ಯೂಟಿ ಸಿಕ್ರೇಟ್ ರಿವೀಲ್ ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಯಶ್ ಜೊತೆಗಿನ ದಾಂಪತ್ಯ ಜೀವನ ನಡೆಸುತ್ತಿದ್ದು, ಸದ್ಯ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 42ನೇ ವಯಸ್ಸಿನಲ್ಲೂ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಂಡಿರುವ ಅವರ, ಸಿನಿಮಾ ವಾಪಸಾತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ

ಯಶ್ ಮತ್ತು ರಾಧಿಕಾ ಜೋಡಿ
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು ಯಶ್ ಮತ್ತು ರಾಧಿಕಾ ಪಂಡಿತ್. ಒಟ್ಟಿಗೆ ಬಣ್ಣದ ಲೋಕದ ಜರ್ನಿಯನ್ನು ಆರಂಭಿಸಿ, ಹಲವು ವರ್ಷಗಳಿಂದ ಪ್ರೀತಿಸಿ, ಆನಂತರ 2016ರ ಆಗಸ್ಟ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು ಈ ಜೋಡಿ. ಗೋವಾದಲ್ಲಿ ಈ ಎಂಗೇಜ್‌ಮೆಂಟ್ ನಡೆದಿತ್ತು. ಆನಂತರ ಬೆಂಗಳೂರಿನಲ್ಲಿ ಅದೇ ವರ್ಷ ಡಿಸೆಂಬರ್ 9ರಂದು ಅದ್ದೂರಿಯಾಗಿ ವಿವಾಹ ಸಮಾರಂಭವು ನಡೆದಿತ್ತು.
ಕುಟುಂಬಕ್ಕಾಗಿ ಸಿನಿಮಾ ಬಿಟ್ಟ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ
ಸದ್ಯ ಬಹುತೇಕ ಮಹಿಳೆಯರಂತೆ ರಾಧಿಕಾ ಪಂಡಿತ್ ಕೂಡ ಗಂಡ, ಮಕ್ಕಳಿಗಾಗಿ ಉದ್ಯೋಗವನ್ನು ತೊರೆದಿದ್ದಾರೆ. ಒಂದೊಮ್ಮೆ ಹಾಗೂ ಈಗಲೂ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಎಂದೇ ಫೇಮಸ್ ಆಗಿರೋ ರಾಧಿಕಾ ಪಂಡಿತ್, ತಮ್ಮ ನೆಚ್ಚಿನ ಸಿನಿಮಾ ಇಂಡಸ್ಟ್ರಿಯಿಂದ ಈಗ ಕುಟುಂಬಕ್ಕಾಗಿ ತ್ಯಾಗ ಮಾಡಿದ್ದು, ಎರಡು ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ.
50 ಲಕ್ಷ ಫಾಲೋವರ್ಸ್
ಸ್ಯಾಂಡಲ್‌ವುಡ್‌ನ ಸಿಂಡ್ರೆಲ್ಲಾ, ನಟಿ ರಾಧಿಕಾ ಪಂಡಿತ್ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಸಿನಿಮಾಗಳಿಂದ ಸದ್ಯ ಕೊಂಚ ದೂರವಿದ್ದರೂ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಧಿಕಾ, ಇದೀಗ ಇನ್‌ಸ್ಟಾಗ್ರಾಂನಲ್ಲಿ 5 ಮಿಲಿಯನ್ ಅಂದರೆ 50 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
42ರ ಚೆಲುವೆ
ಸಾಮಾನ್ಯವಾಗಿ ಮಕ್ಕಳಾದ ಮೇಲೆ ದೇಹದಲ್ಲಿ ಭಾರಿ ಬದಲಾವಣೆ ಆಗುವುದು ಇದೆ. ಆದರೆ ರಾಧಿಕಾ ಪಂಡಿತ್ (Radhika Pandit) ಮಾತ್ರ ತಮ್ಮ ದೇಹವನ್ನು ಅದೇ ರೀತಿ ಉಳಿಸಿಕೊಂಡಿದ್ದಾರೆ. ಫಿಟ್ ಆ್ಯಂಡ್ ಫೈನ್ ಆಗಿರೋ ರಾಧಿಕಾಗೆ ಈಗ 42 ವರ್ಷ ವಯಸ್ಸು. ಆದರೆ ಇಂದಿಗೂ 20ರ ಚೆಲುವೆಯಂತೆ ಕಂಗೊಳಿಸುತ್ತಿದ್ದಾರೆ.
ಆಮೆ ಹಿಡಿದ ರಾಧಿಕಾ
ಇದೇ ಕಾರಣಕ್ಕೆ ರಾಧಿಕಾ ಪಂಡಿತ್ ಅವರ ಬ್ಯೂಟಿಯ ಬಗ್ಗೆ ಅವರ ಅಭಿಮಾನಿಗಳಿಗೆ ಸದಾ ಕುತೂಹಲ ಇದ್ದದ್ದೇ. ಹೋದಲ್ಲಿ, ಬಂದಲ್ಲಿ ಅವರಿಗೆ ಇದೇ ಪ್ರಶ್ನೆ ಕೇಳುತ್ತಲೇ ಇರಲಾಗುತ್ತದೆ. ಇದೀಗ ರಾಧಿಕಾ ಅವರು, ಆಮೆಯೊಂದನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ. ಆದರೆ ಇಲ್ಲಿ ಅವರ ಅಭಿಮಾನಿಗಳಿಗೆ ರಾಧಿಕಾ ಅವರ ಬ್ಯೂಟಿಯ ಬಗ್ಗೆಯೇ ಚಿಂತೆಯಾಗಿದ್ದು, ಈ ವಯಸ್ಸಿನಲ್ಲಿಯೂ ಇಷ್ಟು ಹೇಗೆ ಫಿಟ್ ಎಂದು ಪ್ರಶ್ನಿಸುತ್ತಿದ್ದಾರೆ.
ಫ್ಯಾನ್ಸ್ ಬಯಕೆ
ಸದ್ಯ ರಾಧಿಕಾ ಪಂಡಿತ್ ಸಿನಿಮಾಗಳಿಗಿಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಕ್ಕಳ ಆರೈಕೆ ಸೇರಿದಂತೆ ಕುಟುಂಬದ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಿರುವ ಅವರು, ಚಿತ್ರರಂಗಕ್ಕೆ ಯಾವಾಗ ಮರಳುತ್ತಾರೆ ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿ ಹಾಗೆಯೇ ಇದೆ. ಆದಷ್ಟು ಬೇಗ ರಾಧಿಕಾ ಸಿನಿಮಾಕ್ಕೆ ಮರಳಲಿ ಎನ್ನುವುದು ಫ್ಯಾನ್ಸ್ ಬಯಕೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

