ನಟ ಯಶ್ ಅವರ 'ಟಾಕ್ಸಿಕ್' ಚಿತ್ರವು ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಇದರ ನಡುವೆಯೇ, ಅವರ ಮಗಳು ಆಯ್ರಾ ಜೊತೆಗಿನ ಹಳೆಯ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟ ಯಶ್​ ಹವಾ ಸದ್ಯ ಜೋರಾಗಿದೆ. ಟಾಕ್ಸಿಕ್​ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಇದು ಸಕತ್​ ಸದ್ದು ಮಾಡುತ್ತಿದೆ. ಇದರ ನಡುವೆಯೇ ಯಶ್​ ಅವರಿಗೆ ಎಲ್ಲೆಡೆಯಿಂದ ಭರ್ಜರಿ ಆಫರ್​ಗಳು ಕೂಡ ಬರುತ್ತಿವೆ. ಇವುಗಳ ಹೊರತಾಗಿಯೂ ಯಶ್​ ಅವರು ತಮ್ಮ ಕುಟುಂಬಕ್ಕೂ ಅಷ್ಟೇ ಟೈಮ್​ ಕೊಡುತ್ತಿದ್ದಾರೆ. ಈಗ ಅವರು ತಮ್ಮ ಮಗಳ ಜೊತೆ ಇದ್ದ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಯಶ್​ ಅವರ ಹವಾ ಜೋರಾಗಿ ಇರುವ ಕಾರಣದಿಂದ ಅವರ ವಿಡಿಯೋಗಳೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಮತ್ತೆ ಸದ್ದು ಮಾಡುತ್ತಿವೆ.

ಅಂದಹಾಗೆ ಯಶ್​ ಮತ್ತು ರಾಧಿಕಾ ಪಂಡಿತ್​ ಅವರಿಗೆ ಇಬ್ಬರು ಮಕ್ಕಳು. ದೊಡ್ಡವಳು ಆಯ್ರಾ ಮತ್ತು ಚಿಕ್ಕವ ಮಗ ಯಥರ್ವ್. ಅಂದಹಾಗೆ ಆಯ್ರಾಗೆ ಈಗ ಏಳು ವರ್ಷ ವಯಸ್ಸು, ಯಥರ್ವ್​ಗೆ ಆರು ವರ್ಷ ವಯಸ್ಸು. ಇದೀಗ ಯಶ್​ ಅವರ, ಹಳೆಯ ವಿಡಿಯೋ ಒಂದು ಈಗ ವೈರಲ್​ ಆಗುತ್ತಿದೆ. ಅದರಲ್ಲಿ ಆಯ್ರಾಳನ್ನು ಯಶ್​ ಎತ್ತುಕೊಂಡಿದ್ದಾರೆ. ಅದರ ವಿಡಿಯೋ ಈಗ ಸಕತ್​ ಸೌಂಡ್​ ಮಾಡುತ್ತಿದೆ. ಇದಕ್ಕೆ ಕಾರಣ, ಆಯ್ರಾ, ಅಪ್ಪ ಯಶ್​ ಅಭಿಮಾನಿಗಳನ್ನು ಕಂಡು ಕೈಬೀಸುತ್ತಿದ್ದಾಳೆ. ಆಗಿನ್ನೂ ಅವಳಿಗೆ ಒಂದು ವರ್ಷವೂ ತುಂಬಿಲ್ಲ ಎಂದು ಕಾಣಿಸುತ್ತದೆ. ಆಗಲೇ ಫ್ಯಾನ್ಸ್​ ಹತ್ತಿರ ಕೈಬೀಸೋದನ್ನು ಕಲಿತಿದ್ದಾಳೆ. ಇದರ ವಿಡಿಯೋ ಟಾಕ್ಸಿಕ್​ ಹಿನ್ನೆಲೆಯಲ್ಲಿ ಮತ್ತೆ ವೈರಲ್​ ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಟಾಕ್ಸಿಕ್​ ಹವಾ

ಇನ್ನು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic a fairy tale for grown-ups) ಸಿನಿಮಾ ವಿಶ್ವಾದ್ಯಂತ ಹಲ್​ಚಲ್​ ಸೃಷ್ಟಿಸುತ್ತಿದೆ. ಈ ಚಿತ್ರ ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಭಾರಿ ಕುತೂಹಲ ಸೃಷ್ಟಿಯಾಗಿದೆ. ಈ ಚಿತ್ರದಲ್ಲಿ ಯಶ್​ ಅವರು, ಒಬ್ಬರು ಅಥವಾ ಇಬ್ಬರು ಅಲ್ಲ, ಬರೋಬ್ಬರಿ ಐದು ನಟಿಯರೊಂದಿಗೆ ನಟಿಸಿದ್ದು, ಅಂಥದ್ದೇನಿದೆ ಇದರಲ್ಲಿ ಎಂದು ನೋಡುವ ತವಕದಲ್ಲಿದ್ದಾರೆ ಅಭಿಮಾನಿಗಳು. ಈ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರ ಫ್ಯಾನ್ಸ್​ ಕ್ರೇಜ್​ ಇನ್ನಷ್ಟು ಹೆಚ್ಚಿದೆ. ಹಿಂದಿ ಟ್ರೇಲರ್ ನಂತರ, ತಯಾರಕರು ಈಗ ಇಂಗ್ಲಿಷ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ, ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ. ಕೆಲವರು ಇಂಗ್ಲಿಷ್ ಟ್ರೈಲರ್ ಹಿಂದಿಗಿಂತ ಉತ್ತಮವಾಗಿದೆ ಎಂದು ಬಣ್ಣಿಸಿದ್ದಾರೆ. ಯಶ್ ಅವರ ಚಿತ್ರಕ್ಕೆ ಯುಕೆ ಚಲನಚಿತ್ರೋದ್ಯಮ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದೆ.

'ಟಾಕ್ಸಿಕ್' Vs 'ಧುರಂಧರ್'

ಟಾಕ್ಸಿಕ್ ಹಿಂಸೆ ಮತ್ತು ಲೈಂಗಿಕ ದೃಶ್ಯಗಳ ವಿಭಾಗಗಳಲ್ಲಿ 5 ರಲ್ಲಿ 5 ರೇಟಿಂಗ್ ಅನ್ನು ಪಡೆದುಕೊಂಡಿದೆ. ನಗ್ನತೆ, ಮಾದಕ ದ್ರವ್ಯಗಳು, ಬೆದರಿಕೆ, ಥ್ರಿಲ್ಲರ್​ ಮತ್ತು ಭಾಷೆ ವಿಭಾಗಗಳಲ್ಲಿ ಇದು 5 ರಲ್ಲಿ 4 ರೇಟಿಂಗ್ ಅನ್ನು ಪಡೆದುಕೊಂಡಿದೆ. 'ಧುರಂಧರ್' ಮತ್ತು 'ಧುರಂಧರ್ 2' ಬಗ್ಗೆ ಹೇಳುವುದಾದರೆ, ರಣವೀರ್ ಸಿಂಗ್ ನಟಿಸಿದ ಈ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸೆನ್ಸಾರ್ ಮಂಡಳಿಯು 18+ ಪ್ರಮಾಣಪತ್ರವನ್ನು ನೀಡಿತ್ತು. ಆದರೆ 'ಟಾಕ್ಸಿಕ್' ರೇಟಿಂಗ್ ವಿಷಯದಲ್ಲಿ ಅದನ್ನು ಮೀರಿಸಿದೆ. 'ಧುರಂಧರ್' ನ ಎರಡೂ ಭಾಗಗಳು ಹಿಂಸಾಚಾರ ವಿಭಾಗದಲ್ಲಿ ಮಾತ್ರ 5 ರಲ್ಲಿ 5 ಪೂರ್ಣ ರೇಟಿಂಗ್‌ಗಳನ್ನು ಪಡೆದಿತ್ತು. ಆದರೆ ಇತರ ವಿಭಾಗಗಳಲ್ಲಿ ಚಿತ್ರವು ಗಮನಾರ್ಹವಾಗಿ ಕಡಿಮೆ ರೇಟಿಂಗ್‌ಗಳನ್ನು ಪಡೆದುಕೊಂಡಿದೆ.