MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ತೆಲುಗಿನ ದಂತಕಥೆ ಎನ್‌ಟಿಆರ್‌ಗಿತ್ತು ಈ ವೀಕ್ನೆಸ್? ಮಗ ಪ್ರಶ್ನಿಸಿದಾಗ ಅವರು ಮಾಡಿದ್ದೇನು?

ತೆಲುಗಿನ ದಂತಕಥೆ ಎನ್‌ಟಿಆರ್‌ಗಿತ್ತು ಈ ವೀಕ್ನೆಸ್? ಮಗ ಪ್ರಶ್ನಿಸಿದಾಗ ಅವರು ಮಾಡಿದ್ದೇನು?

ದೊಡ್ಡೋರು ್ಂದ್ರೆ ಒಂದಲ್ಲೊಂದು ವೀಕ್‌ನೆಸ್ ಇರೋದು ಸುಳ್ಳಲ್ಲ. ಕೆಲವರು ಸಾಯುವವರೆಗೂ ಅದನ್ನು ಮುಚ್ಚಿಟ್ಟುಕೊಂಡರೆ ಮತ್ತೆ ಕೆಲವರಿಗೆ ಅದು ಮುಚ್ಚಿಟ್ಟುಕೊಳ್ಳಲಾಗದ ಓಪನ್ ಸೀಕ್ರೆಟ್ ಆಗಿ ಬಿಡುತ್ತೆ. ತೆಲುಗಿನ ಲೆಜೆಂಡರಿ ನಟ ನಂದಮೂರಿ ತಾರಕ ರಾಮರಾವ್ ಅವರಿಗೂ ಒಂದು ಕೆಟ್ಟ ಚಟವಿತ್ತು ಈ ಚಟವನ್ನು ಪುತ್ರರಲ್ಲಿ ಒಬ್ಬ ಪ್ರಶ್ನೆ ಮಾಡಿದ ನಂತರ ಅವರು ಅದನ್ನು ಬಿಟ್ಟು ಬಿಟ್ಟರು. ಆದರೆ ಅವರ ಒಬ್ಬ ಪುತ್ರ ನಂದಮೂರಿ ಬಾಲಕೃಷ್ಣ ಅದೇ ಅಭ್ಯಾಸವನ್ನು ಅಂಟಿಸಿಕೊಂಡಾಗಿತ್ತು, ಅಪ್ಪ ಚಟ ಬಿಡುವ ಹೊತ್ತಿಗೆ.  

2 Min read
Anusha Kb
Published : Oct 10 2024, 02:36 PM IST| Updated : Oct 10 2024, 02:50 PM IST
Share this Photo Gallery
  • FB
  • TW
  • Linkdin
  • Whatsapp
16

ನಂದಮೂರಿ ತಾರಕ ರಾಮರಾವ್ ತೆಲುಗು ಸಿನಿಮಾರಂಗದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡವರು. ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ, ಟಾಲಿವುಡ್ ನಂಬರ್ ಒನ್ ಹೀರೋ ಆಗಿ ಹಲವಾರು ಮರೆಯಲಾಗದ ಸಿನಿಮಾಗಳನ್ನು ನೀಡಿದ್ದಾರೆ.
 

26

ತನ್ನನ್ನು ಆರಾಧಿಸಿದ ಜನರ ಸೇವೆ ಸಲ್ಲಿಸಬೇಕೆಂದು ಎನ್ಟಿಆರ್ ರಾಜಕೀಯ ಪ್ರವೇಶಿಸಿದರು. 1982ರಲ್ಲಿ ಪಕ್ಷ ಸ್ಥಾಪಿಸಿದ NTR 9 ತಿಂಗಳಲ್ಲಿಯೇ ಅವಿಭಜಿತ ಆಂಧ್ರಪ್ರದೇಶದ (ಈಗ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಾಗಿ ಬೇರ್ಪಟ್ಟಿವೆ) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಬಹಳ ಶಿಸ್ತಿನ ವ್ಯಕ್ತಿ ಎನ್‌ಟಿಾರ್. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಪರಿಶ್ರಮದಿಂದ ಹಲವು ಮೈಲಿಗಲ್ಲುಗಳನ್ನು  ತಲುಪಿದರು. ಆದರೆ ಎಷ್ಟೇ ದೊಡ್ಡವರಾದರೂ ಒಂದಲ್ರೊಂದು ದೌರ್ಬಲ್ಯ ಮನುಷ್ಯನಿಗೆ ಕಾಮನ್. ಎನ್‌ಟಿಆರ್‌ಗೂ ಇದ್ದ ದೌರ್ಬಲ್ಯದ ಬಗ್ಗ ಕಿರಿಯ ಮಗ ಪ್ರಶ್ನಿಸಿದದ್ರು. ಇವರಿಗೆ 12 ಮಕ್ಕಳು. 8 ಗಂಡು ಮಕ್ಕಳಾದರೆ. 4  ಹೆಣ್ಣು. ಗಂಡು ಮಕ್ಕಳಲ್ಲಿ ಬಾಲಕೃಷ್ಣ, ಹರಿಕೃಷ್ಣ ಮಾತ್ರ ಜನಪ್ರಿಯರು. ಹೆಣ್ಣು ಮಕ್ಕಳಲ್ಲಿ ಪುರಂದರೇಶ್ವರಿ, ಭುವನೇಶ್ವರಿ ಬಗ್ಗೆ ಸಾಮಾನ್ಯರಿಗೂ ಅವರು ರಾಜಕೀಯ ರಂಗದಲ್ಲಿ ಮೂಡಿಸಿರುವ ಛಾಪಿನಿಂದ ಎಲ್ಲರಿಗೂ ಗೊತ್ತು. ಎನ್ಟಿಆರ್ ಪುತ್ರರಲ್ಲಿ ಒಬ್ಬರಾದ ಜಯಶಂಕರ್ ಕೃಷ್ಣ ಒಂದು ವಿಷಯದಲ್ಲಿ ಎನ್ಟಿಆರ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. ಅದನ್ನು ಅವರು ನೇರವಾಗಿ ಪ್ರಶ್ನೆ ಮಾಡಿದ್ದರು.

36

NTRಗೆ ಬೆಳಗ್ಗೆಯೊಂದು ಸಿಗರೇಟ್ ಸೇದುವ ಅಭ್ಯಾಸವಿತ್ತು. ಇದು ಅವರ ದಿನಚರಿಯ ಒಂದು ಭಾಗ. ಸಿಗರೇಟ್ ಸೇದುತ್ತಾರೆ ಎಂಬ ವಿಷಯ ಕುಟುಂಬದ ಎಲ್ಲರಿಗೂ ತಿಳಿದಿತ್ತು. ಹರಿಕೃಷ್ಣಗೂ ಧೂಮಪಾನ ಮಾಡುವ ಅಭ್ಯಾಸವಿತ್ತು. ಅವರು ಸಿಗರೇಟ್ ಅನ್ನು ಹೆಚ್ಚು ಸೇದುತ್ತಿದ್ದರು. ಎನ್ಟಿಆರ್‌ಗೆ ಅದು ಇಷ್ಟವಾಗುತ್ತಿರಲಿಲ್ಲ. ಸಿಗರೇಟ್ ತ್ಯಜಿಸುವಂತೆ ಹರಿಕೃಷ್ಣನಿಗೆ ಎನ್ಟಿಆರ್ ಪದೇ ಪದೇ ಹೇಳುತ್ತಿದ್ದರು. 

ಆದರೆ ಜಯಶಂಕರ್ ಕೃಷ್ಣ ಅವರಿಗೆ ಇದು ಇಷ್ಟವಾಗಲಿಲ್ಲ. ತಂದೆ ಸಿಗರೇಟ್ ಸೇದುತ್ತಿದ್ದಾಗ ಮಗನಿಗೆ ಸಿಗರೇಟ್ ಬಿಡುವಂತೆ ನೀತಿ ಹೇಳುವುದು ಸರಿಯಲ್ಲ ಎಂದುಕೊಂಡರು. ಅವರು ಮನಸ್ಸಿನ ಮಾತನ್ನು ನೇರವಾಗಿ ಎನ್‌ಟಿಆರ್‌ಗೇ ಹೇಳಿದರು. ಅಪ್ಪಾ ನೀವು ಸಿಗರೇಟ್ ಸೇದುತ್ತಾ, ಹರಿ ಅಣ್ಣನಿಗೆ ಸಿಗರೇಟ್ ಬಿಡುವಂತೆ ಹೇಳುವುದು ಸರಿಯಲ್ಲ ಎಂದರು. ಜಯಶಂಕರ್ ಕೃಷ್ಣ ಅವರ ಪ್ರಶ್ನೆ ತೆಲಗು ಲೆಜೆಂಡರಿಯನ್ನು ಕಲಕಿತು. ಅಂದಿನಿಂದ ಅವರು ಮತ್ತೆಂದು ಸಿಗರೇಟ್ ಮುಟ್ಟಿರಲಿಲ್ಲ,
 

46

ವಾಸ್ತವವಾಗಿ ಸಿಗರೇಟ್ ಸೇದುವುದು ಎನ್ಟಿಆರ್ ಗೆ ಚಟವಾಗಿರಲಿಲ್ಲ. ನಟರಿಗೆ ಧ್ವನಿ ಬಹಳ ಮುಖ್ಯ. ಧ್ವನಿ ಮಾಡ್ಯುಲೇಷನ್ ಗಾಗಿ ಅವರು ಪ್ರತಿದಿನ ಬೆಳಗ್ಗೆ ಒಂದು ಸಿಗರೇಟ್ ಸೇದುತ್ತಿದ್ದರು. ಆದರೆ.. ಮಗ ತನ್ನನ್ನು ಪ್ರಶ್ನಿಸಿದ್ದರಿಂದ ಎನ್ಟಿಆರ್ ಇನ್ನು ಮುಂದೆ ಸಿಗರೇಟ್ ಸೇದುವುದಿಲ್ಲ ಎಂದು ನಿರ್ಧರಿಸಿದರು. ಅಷ್ಟೇ ಕಥೆ. ಈ ವಿಷಯವನ್ನು ಒಂದು ಸಂದರ್ಶನದಲ್ಲಿ ಎನ್ಟಿಆರ್ ಪುತ್ರಿ ಪುರಂದರೇಶ್ವರಿ ಬಹಿರಂಗಪಡಿಸಿದ್ದಾರೆ. 

ಆದರೆ ಈ ಅಭ್ಯಾಸವನ್ನು ನಂದಮೂರಿ ಬಾಲಕೃಷ್ಣ ಮುಂದುವರೆಸಿದ್ದು ವಿಶೇಷ. ಬಾಲಕೃಷ್ಣ ಕೂಡ ಬೆಳಗ್ಗೆ ಬೇಗನೆ ಎದ್ದೇಳುತ್ತಾರೆ. ಎದ್ದ ತಕ್ಷಣ ಒಂದು ಸಿಗರೇಟ್ ಸೇದುತ್ತಾರೆ. ಸಿಗರೇಟ್ ಸೇದುವುದರಿಂದ ಗಂಟಲಿನಲ್ಲಿರುವ ಕಫ ಹೊರಬರುತ್ತದೆ. ಧ್ವನಿ ಸ್ಪಷ್ಟವಾಗುತ್ತದೆ. ಸಿನಿಮಾಗಳಲ್ಲಿ ಸಂಭಾಷಣೆ ಹೇಳಲು ಅದು ಸಹಾಯ ಮಾಡುತ್ತದೆ ಎಂದು ಬಾಲಕೃಷ್ಣ ನಂಬುತ್ತಾರೆ. ಈ ವಿಷಯವನ್ನು ಒಂದು ಸಂದರ್ಭದಲ್ಲಿ ಬಾಲಕೃಷ್ಣ ಸ್ವತಃ ಹೇಳಿಕೊಂಡಿದ್ದಾರೆ. 

56
ಬಾಲಕೃಷ್ಣ

ಬಾಲಕೃಷ್ಣ

ಬಾಲಕೃಷ್ಣ ಅವರ ಡೈಲಾಗ್‌ ಡೆಲಿವರಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಬಾಲಯ್ಯ ಅವರನ್ನು ವಿಶೇಷವಾಗಿಸುವ ಅಂಶಗಳಲ್ಲಿ ಅವರ ಡೈಲಾಗ್‌ ಡೆಲಿವರಿ ಒಂದು. ಎನ್ಟಿಆರ್ ಮಾಸ್ ಡೈಲಾಗ್ ಹೇಳಿದರೆ.. ಅಭಿಮಾನಿಗಳಿಗೆ ಹಬ್ಬ. ಚಿತ್ರಮಂದಿರಗಳು ತುಂಬಿ ಹೋಗುತ್ತವೆ. ಅವರ ಕಂಚಿನ ಕಂಠದ ಹಿಂದಿನ ರಹಸ್ಯ ಪ್ರತಿದಿನ ಬೆಳಿಗ್ಗೆ ಒಂದು ಸಿಗರೇಟ್ ಸೇದುವುದೇ ಎನ್ನಲಾಗಿದೆ. ಅದು ಚಟವಾಗಿ ಅಲ್ಲ ಕೇವಲ ಗಂಟಲಿಗಾಗಿ ಸೇದುತ್ತಾರಂತೆ. 


 

66
ಬಾಲಕೃಷ್ಣ

ಬಾಲಕೃಷ್ಣ

ಪ್ರಸ್ತುತ ಬಾಲಕೃಷ್ಣ ಸತತ ಗೆಲುವುಗಳೊಂದಿಗೆ ಜೋಶಿನಲ್ಲಿದ್ದಾರೆ. ಅವರು ನಟಿಸಿದ ಅಖಂಡ, ವೀರಸಿಂಹ ರೆಡ್ಡಿ, ಭಗವಂತ್ ಕೇಸರಿ ಚಿತ್ರಗಳು ಹಿಟ್ ತಂದುಕೊಟ್ಟವು. ಪ್ರಸ್ತುತ ಬಾಬಿ ನಿರ್ದೇಶನದಲ್ಲಿ NBK 109 ಚಿತ್ರ ಮಾಡುತ್ತಿದ್ದಾರೆ. 2025 ರ ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ಇದೆ. 

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಟಾಲಿವುಡ್
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved