MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Karnataka Districts
  • Bengaluru Urban
  • 2 ಮಕ್ಕಳ ತಾಯಿಗೆ ತಾಳಿ ಕಟ್ಟಿದ ಬೆಂಗಳೂರು ಟೆಕ್ಕಿ; ಅಂಬೇಡ್ಕರ್ ಪ್ರತಿಮೆ ಮುಂದೆಯೇ ಮದುವೆ!

2 ಮಕ್ಕಳ ತಾಯಿಗೆ ತಾಳಿ ಕಟ್ಟಿದ ಬೆಂಗಳೂರು ಟೆಕ್ಕಿ; ಅಂಬೇಡ್ಕರ್ ಪ್ರತಿಮೆ ಮುಂದೆಯೇ ಮದುವೆ!

ಆನೇಕಲ್‌ನಲ್ಲಿ, ಸಮಾಜದ ಕಟ್ಟುಪಾಡುಗಳನ್ನು ಮೀರಿ ಐಟಿ ಉದ್ಯೋಗಿಯೊಬ್ಬರು ಇಬ್ಬರು ಮಕ್ಕಳ ತಾಯಿಯಾದ ವಿಧವೆ ಮಹಿಳೆಯನ್ನು ಪ್ರೇಮ ವಿವಾಹವಾಗಿದ್ದಾರೆ. ಕುಟುಂಬದ ವಿರೋಧದ ನಂತರ, ಸಂಘಟನೆಯ ಮಧ್ಯಪ್ರವೇಶದಿಂದಾಗಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ಈ ಆದರ್ಶ ವಿವಾಹ ನಡೆದಿದೆ.

2 Min read
Author : Sathish Kumar KH
Published : Sep 03 2026, 11:45 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಂಗಳೂರು: ಸಮಾಜದ ಕಟ್ಟುಪಾಡುಗಳು ಮತ್ತು ಮೂಢನಂಬಿಕೆಗಳನ್ನು ಬದಿಗೊತ್ತಿ, ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ ಅಪರೂಪದ ಪ್ರೇಮ ವಿವಾಹವೊಂದು ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಬ್ಬರು ಮುದ್ದಾದ ಮಕ್ಕಳ ತಾಯಿಯಾಗಿ, ಒಂಟಿಯಾಗಿ ಬದುಕುತ್ತಿದ್ದ ವಿಧವೆ ಮಹಿಳೆಯನ್ನು ಐಟಿ ಉದ್ಯೋಗಿಯೊಬ್ಬರು ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಅತ್ಯಂತ ಸರಳವಾಗಿ ಪ್ರೇಮ ವಿವಾಹವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಬೆಂಗಳೂರು ನಗರ ಹೊರವಲಯದ ಆನೇಕಲ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪುರುಷೋತ್ತಮ್ ಹಾಗೂ ನಾಗರತ್ನ ಎಂಬುವರು ಹಾರ ಬದಲಾಯಿಸಿಕೊಳ್ಳುವ ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Related Articles

Related image1
20 ಲಕ್ಷ ಸಂಬಳದ ಹೈಕ್​ ರಿಜೆಕ್ಟ್​ ಮಾಡಿದ ಬೆಂಗಳೂರು ಟೆಕ್ಕಿ: ಭಾರಿ ವೈರಲ್ ಆಗ್ತಿದೆ ಯುವಕನ ಸ್ಟೋರಿ
Related image2
'35ಕ್ಕೇ ಕೆಲಸಕ್ಕೆ ಗುಡ್‌ಬೈ': ಬೆಂಗಳೂರು ಟೆಕ್ಕಿ ಇಟ್ಟ ಷರತ್ತು ಕೇಳಿ ಹುಡುಗಿಯರು ಶಾಕ್; ಹೆಂಡತಿಗೆ ಇಷ್ಟಿರಬೇಕು ಸಂಬಳ
36
Image Credit : Asianet News

ಪ್ರೀತಿಗೆ ಕಾರಣವಾದ ಪರಿಚಯ: ಸಂಕಷ್ಟದಲ್ಲಿದ್ದ ಮಹಿಳೆಗೆ ಆಸರೆ

ನಾಗರತ್ನ ಅವರಿಗೆ ಈ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಆದರೆ, ದುರಾದೃಷ್ಟವಶಾತ್ ರಸ್ತೆ ಅಪಘಾತವೊಂದರಲ್ಲಿ ಪತಿ ತೀರಿಕೊಂಡ ನಂತರ, ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ತೀವ್ರ ಕಷ್ಟದಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುರುಷೋತ್ತಮ್ ಅವರ ಪರಿಚಯ ನಾಗರತ್ನ ಅವರಿಗೆ ಆಗಿದೆ. ಪರಿಚಯ ಕ್ರಮೇಣ ಗಾಢ ಪ್ರೀತಿಗೆ ತಿರುಗಿ, ಇಬ್ಬರೂ ಕೆಲ ಕಾಲ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು (ಸಹಜೀವನ ನಡೆಸುತ್ತಿದ್ದರು).

46
Image Credit : Asianet News

ಕುಟುಂಬದ ವಿರೋಧ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಕರಣ

ನಾಗರತ್ನ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಪುರುಷೋತ್ತಮ್ ಅವರ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕುಟುಂಬದ ಒತ್ತಡಕ್ಕೆ ಮಣಿದು ಪುರುಷೋತ್ತಮ್ ಮದುವೆಯಾಗಲು ಹಿಂದೇಟು ಹಾಕಿದ್ದರು. ಇದರಿಂದ ನೊಂದ ನಾಗರತ್ನ, ತಮಗೆ ನ್ಯಾಯ ಕೊಡಿಸುವಂತೆ ಆನೇಕಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

56
Image Credit : Asianet News

ಮನವೊಲಿಸಿದ ಸಂಘಟನೆ: ಒಪ್ಪಿ ಕೈಹಿಡಿದ ಯುವಕ

ವಿಷಯ ತಿಳಿದ ಕೂಡಲೇ 'ಕರ್ನಾಟಕ ರಾಜ್ಯ ಪ್ರಜಾ ಶಕ್ತಿ ಸಂಘಟನೆ'ಯ ಅಧ್ಯಕ್ಷ ಸುರೇಶ್ ಹಾಗೂ ವಕೀಲ ಪುರುಷೋತ್ತಮ್ ಅವರು ಮಧ್ಯಪ್ರವೇಶಿಸಿದರು. ಇಬ್ಬರ ನಡುವೆ ಸಮಾಲೋಚನೆ ನಡೆಸಿ, ಕಷ್ಟದಲ್ಲಿದ್ದ ಮಹಿಳೆ ಮತ್ತು ಆಕೆಯ ಮಕ್ಕಳಿಗೆ ಬಾಳು ಕೊಡುವಂತೆ ಪುರುಷೋತ್ತಮ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಪ್ರೀತಿಯ ಮಹತ್ವ ಮತ್ತು ಜವಾಬ್ದಾರಿಯನ್ನು ಅರಿತ ಟೆಕ್ಕಿ ಪುರುಷೋತ್ತಮ್, ನಾಗರತ್ನ ಅವರನ್ನೇ ಮದುವೆಯಾಗಲು ಸಂಪೂರ್ಣ ಮನಸ್ಸಿನಿಂದ ಒಪ್ಪಿಕೊಂಡರು.

66
Image Credit : Asianet News

ಅಂಬೇಡ್ಕರ್ ಪ್ರತಿಮೆ ಎದುರು ಮದುವೆ: ಸಾಕ್ಷಿಯಾದ ಶಾಸಕ ಬಿ. ಶಿವಣ್ಣ!

ಆನೇಕಲ್ ಪಟ್ಟಣದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಎದುರು ಎರಡೂ ಮನಸ್ಸುಗಳು ಒಂದಾದವು. ಪ್ರಜಾ ಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಈ ಅಪರೂಪದ ಮದುವೆ ಸಾಂಗವಾಗಿ ನೆರವೇರಿತು.

ಈ ಅಪರೂಪದ ಹಾಗೂ ಆದರ್ಶ ವಿವಾಹಕ್ಕೆ ಆನೇಕಲ್ ಕ್ಷೇತ್ರದ ಶಾಸಕ ಬಿ. ಶಿವಣ್ಣ ಅವರು ಖುದ್ದಾಗಿ ಆಗಮಿಸಿ, ನವಜೋಡಿಗೆ ಅಕ್ಷತೆ ಹಾಕಿ, ಶುಭ ಹಾರೈಸಿ ಆಶೀರ್ವದಿಸಿದರು. ಇಬ್ಬರು ಮಕ್ಕಳಿರುವ ತಾಯಿಯ ಬಾಳಿಗೆ ಬೆಳಕಾಗಿ ನಿಂತ ಐಟಿ ಉದ್ಯೋಗಿ ಪುರುಷೋತ್ತಮ್ ಅವರ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಂಗಳೂರು ನಗರ
ಟೆಕ್ಕಿ
ಮದುವೆ

Latest Videos
Recommended Stories
Recommended image1
Bengaluru: ಪಿಎಂ ಮೋದಿ ಮೆಚ್ಚಿದ ಬೆಂಗಳೂರಿನ ಬೀದಿಬದಿ ವ್ಯಾಪಾರಿ ನಿಂಗಮ್ಮ ಬದುಕು ಅತಂತ್ರ
Recommended image2
ಆಸ್ತಿ, ಬಿಸಿನೆಸ್ ಬ್ಯಾಗ್ರೌಂಡ್ ಏನೂ ಇಲ್ಲ.. ಬೆಂಗಳೂರಲ್ಲಿ ₹15,000 ದಿಂದ ₹1.81 ಲಕ್ಷದ 5BHK ಬಾಡಿಗೆ ಮನೆಗೆ ಬಂದ ಯುವತಿ!
Recommended image3
ಬೆಂಗಳೂರಿನ ಮೇಲಿನ ಭಾರ ತಗ್ಗಿಸಲು ‘ಮತ್ತೊಂದು ಬೆಂಗಳೂರು’ ನಿರ್ಮಾಣ, ನೀತಿ ಆಯೋಗದ ಮಹತ್ವದ ಸಲಹೆಗೆ ಸರ್ಕಾರದ ಒಲವು
Related Stories
Recommended image1
20 ಲಕ್ಷ ಸಂಬಳದ ಹೈಕ್​ ರಿಜೆಕ್ಟ್​ ಮಾಡಿದ ಬೆಂಗಳೂರು ಟೆಕ್ಕಿ: ಭಾರಿ ವೈರಲ್ ಆಗ್ತಿದೆ ಯುವಕನ ಸ್ಟೋರಿ
Recommended image2
'35ಕ್ಕೇ ಕೆಲಸಕ್ಕೆ ಗುಡ್‌ಬೈ': ಬೆಂಗಳೂರು ಟೆಕ್ಕಿ ಇಟ್ಟ ಷರತ್ತು ಕೇಳಿ ಹುಡುಗಿಯರು ಶಾಕ್; ಹೆಂಡತಿಗೆ ಇಷ್ಟಿರಬೇಕು ಸಂಬಳ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved