MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Astrology
  • Festivals
  • Shri Krishna Janmashtami 2026: ಉಡುಪಿಯಲ್ಲಿ ಇಂದು ರಾತ್ರಿ 12:12ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ಜನಸಾಗರವೇ ಕಾಯುತ್ತಿದೆ!

Shri Krishna Janmashtami 2026: ಉಡುಪಿಯಲ್ಲಿ ಇಂದು ರಾತ್ರಿ 12:12ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ಜನಸಾಗರವೇ ಕಾಯುತ್ತಿದೆ!

Shri Krishna Janmashtami 2026 ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಯಲಿದೆ..

1 Min read
Author : Ravi Janekal
Published : Sep 04 2026, 11:10 AM IST
Share this Photo Gallery
  • FB
  • TW
  • Linkdin
  • Whatsapp
14
Shri Krishna Janmashtami 2026: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
Image Credit : Pinterest\Google Gemini

Shri Krishna Janmashtami 2026: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಸುತ್ತಿದ್ದು, ಕೃಷ್ಣಮಠದಲ್ಲಿ ಕೃಷ್ಣಾವತಾರದ ಗಳಿಗೆಯಲ್ಲಿ ಪಾವನ ಅರ್ಘ್ಯ ಪ್ರದಾನಕ್ಕೆ ಕಾಯುತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Shri Krishna Janmashtami 2026 ಕೃಷ್ಣನಿಗಾಗಿ 2.50 ಲಕ್ಷಕ್ಕೂ ಅಧಿಕ ಚಕ್ಕುಲಿ!
Image Credit : Gemini

Shri Krishna Janmashtami 2026 ಕೃಷ್ಣನಿಗಾಗಿ 2.50 ಲಕ್ಷಕ್ಕೂ ಅಧಿಕ ಚಕ್ಕುಲಿ!

ಶ್ರಾವಣ ಮಾಸದ ಅಷ್ಟಮಿ, ಮಧ್ಯರಾತ್ರಿ ಚಂದ್ರೋದಯದ 12.12 ಗಂಟೆಗೆ ರೋಹಿಣಿ ನಕ್ಷತ್ರದ ಸಹಯೋಗದಲ್ಲಿ ಶಿರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣನಿಗೆ ಮಹಾಪೂಜೆ ನೆರವೇರಿಸಿ, ಪ್ರಧಾನ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರಿಗೂ ಕೃಷ್ಣಾರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿದೆ.ಈ ಮಹಾಪೂಜೆಯ ಸಂದರ್ಭದಲ್ಲಿ ಬಾಲಕೃಷ್ಣನಿಗೆ ವೈವಿಧ್ಯಮಯ ನೈವೇದ್ಯಗಳನ್ನು ಮಾಡಲಾಗುತ್ತದೆ, ಅದಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಬಾಣಸಿಗರು 2.50 ಲಕ್ಷಕ್ಕೂ ಅಧಿಕ ಚಕ್ಕುಲಿ ಹಾಗೂ ಗುಂಡಿಟ್ಟು, ಎಳ್ಳುಂಡೆ, ಅರಳುಂಡೆ, ಕಡಲೆಉಂಡೆ, ರವಾಉಂಡೆ ಇತ್ಯಾದಿ ವಿವಿಧ ಬಗೆಯ ಉಂಡೆಗಳನ್ನು ತಯಾರಿಸಿದ್ದಾರೆ.

Related Articles

Related image1
Krishna Janmashtami Wishes in Kannada 2026: ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು
Related image2
Janmashtami Saree: ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆಗೆ ಯಾವ ಸೀರೆ ಉಡಬೇಕು? ಇಲ್ಲಿವೆ ಬೆಸ್ಟ್ ಡಿಸೈನ್ಸ್
34
ನಾಳೆ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ - ಕೃಷ್ಣಲೀಲೋತ್ಸವ
Image Credit : Asianet News

ನಾಳೆ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ - ಕೃಷ್ಣಲೀಲೋತ್ಸವ

ನಾಳೆ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ - ಕೃಷ್ಣಲೀಲೋತ್ಸವ - ಮೊಸರುಕುಡಿಕೆಗೆ ಜನಸಾಗರವೇ ಸೇರಲಿದ್ದು, ಅವರಿಗೆ ಪ್ರಸಾದ ರೂಪದಲ್ಲಿ 1.50 ಲಕ್ಷ ಚಕ್ಕುಲಿ ಉಂಡೆಗಳನ್ನು ವಿತರಿಸಲಾಗುತ್ತದೆ. ಅಲ್ಲಗೆ ನಗರದ ವಿವಿಧ ಶಾಲೆಗಳಿಗೂ ಕೃಷ್ಣನ ಪ್ರಸಾದ ರೂಪದಲ್ಲಿ ಕಳಿಸಿಕೊಡಲಾಗುತ್ತದೆ.ಉಡುಪಿ ಕೃಷ್ಣ ಲೀಲೋತ್ಸವದ ಪ್ರಮುಖ ಆಕರ್ಷಣೆ ಹುಲಿವೇಷ ಕುಣಿತ, ಈ ಬಾರಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಹುಲಿವೇಷ ಧರಿಸುತಿದ್ದು, ನಗರದ ಬೀದಿಗಳಲ್ಲಿ ಇಂದು ಮತ್ತು ನಾಳೆ ನೂರಾರು ಹುಲಿಗಳು ಅಬ್ಬರಿಸಲಿದ್ದಾವೆ. ನಗರದ ಅನೇಕ ಕಡೆಗಳಲ್ಲಿ ಲಕ್ಷಾಂತರ ರು. ಬಹುಮಾನವಿರುವ ಹುಲಿ ಕುಣಿತದ ಸ್ಪರ್ಧೆಗಳೂ ನಡೆಯಲಿವೆ.

44
ಉಡುಪಿ ಶ್ರೀಕೃಷ್ಣನಿಗೆ 500 ರು. ಮೌಲ್ಯದ ಮಾಲೆಗಳು:
Image Credit : Asianet News

ಉಡುಪಿ ಶ್ರೀಕೃಷ್ಣನಿಗೆ 500 ರು. ಮೌಲ್ಯದ ಮಾಲೆಗಳು:

ಸಂಪ್ರದಾಯದಂತೆ ಕೃಷ್ಣಮಠದಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಶಿರೂರು ಮಠದ ವಿಶೇಷ ಎಂದರೆ ಹುಲಿವೇಷಧಾರಿಗಳಿಗೆ ನೋಟಿನ ಮಾಲೆಗಳನ್ನು ಹಾಕಿ ಸನ್ಮಾನ ಮಾಡುವುದು, ಹಿಂದಿನ ಶ್ರೀ ಲಕ್ಷ್ಮೀವರ ತೀರ್ಥರು ಆರಂಭಿಸಿದ್ದ ಈ ಸಂಪ್ರದಾಯವನ್ನು ಶ್ರೀ ವೇದವರ್ಧನ ತೀರ್ಥರೂ ಮುಂದಿಸಲು ನಿರ್ಧರಿಸಿದ್ದು, ಅದಕ್ಕಾಗಿ ಪ್ರತಿಯೊಬ್ಬ ಹುಲಿವೇಷಧಾರಿಗೆ ಹಾಕುವುದಕ್ಕೆ ನೂರಾರು ಸಂಖ್ಯೆಯಲ್ಲಿ 500 ರು. ಮೌಲ್ಯ.ದ ಮಾಲೆಗಳು ಸಿದ್ಧವಾಗಿವೆ. ಸ್ಪರ್ಧೆಯಲ್ಲಿ ಗೆದ್ದವರರಿಗೆ ವಿಶೇಷ ಬಹುಮಾನಗಳಿವೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಉಡುಪಿ
ಹಬ್ಬ

Latest Videos
Recommended Stories
Recommended image1
ಇಂದು ಕೃಷ್ಣ ಜನ್ಮಾಷ್ಟಮಿಯಂದು ಹರ್ಷನ ಯೋಗ, 5 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ, ಅದೃಷ್ಟದ ಬಾಗಿಲು ತೆರೆಯಲಿದೆ
Recommended image2
ಮೈಸೂರು ದಸರಾ 2026: ಗಜಪಡೆಯ ಬಲಿಷ್ಠ 'ಶ್ರೀಕಂಠ' ನಿಗೆ ಎರಡನೇ ಬಾರಿ ಪಟ್ಟದ ಗೌರವ, ನಿಶಾನೆಯಾಗಿ ಏಕಲವ್ಯ
Recommended image3
ಕೃಷ್ಣ ಜನ್ಮಾಷ್ಟಮಿ: ನಮ್ಮೊಳಗೆ ಕೃಷ್ಣ ಹುಟ್ಟುವ ಹಬ್ಬ
Related Stories
Recommended image1
Krishna Janmashtami Wishes in Kannada 2026: ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು
Recommended image2
Janmashtami Saree: ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆಗೆ ಯಾವ ಸೀರೆ ಉಡಬೇಕು? ಇಲ್ಲಿವೆ ಬೆಸ್ಟ್ ಡಿಸೈನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved