ಈ ದೇವಸ್ಥಾನದಲ್ಲಿ ಇಲಿಗಳಿಗೆ ವಿಶೇಷ ಪೂಜೆ, ನೈವೇದ್ಯ ಅರ್ಪಿಸಲಾಗುತ್ತದೆ. ಈ ದೇವಾಲಯದಲ್ಲಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಇಲಿಗಳಿವೆ. ಇಲಿಗಳನ್ನು ಇಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಏನಿದು ಇಲಿ ಸಾಮ್ರಾಜ್ಯದ ವಿಶೇಷ ದೇಗುಲದ ಆಚರಣೆ?
ಬಿಕಾನೇರ್ (ಆ.21) ಭಾರತದ ಪ್ರತಿ ದೇಗುಲದಲ್ಲಿನ ಆಚರಣೆ, ಸಂಪ್ರದಾಯ, ಪೂಜೆ, ನಂಬಿಕೆಗಳು ಭಿನ್ನ. ಪ್ರತಿಯೊಂದು ದೇವಸ್ಥಾನಗಳಿಗೆ ವಿಶೇಷ ಮಹತ್ವವಿದೆ. ದೇಗುಲದು ಪ್ರತಿ ಆಚರಣೆ ಹಿಂದೆ ಪುರಾಣ, ಇತಿಹಾಸ ಸೇರಿದಂತೆ ಹಲವು ನಂಬಿಕೆಗಳು ಒಳಗೊಂಡಿರುತ್ತದೆ. ಭಾರತದಲ್ಲಿನ ಇಲಿಗಳನ್ನೇ ಪೂಜಿಸುವ ದೇವಸ್ಥಾನವಿದೆ. ಈ ದೇವಸ್ಥಾನದ ಒಳಗೆ ಇಲಿಗಳು ಸ್ವಚ್ಚಂದವಾಗಿ ಓಡಾಡಿಕೊಂಡಿರುತ್ತದೆ. ಈ ದೇವಸ್ಥಾನದಲ್ಲಿ 25,000ಕ್ಕೂ ಹೆಚ್ಚು ಇಲಿಗಳಿವೆ. ಪ್ರತಿ ದಿನ ಹಾಲಿನ ನೈವೇದ್ಯ ಅರ್ಪಿಸಲಾಗುತ್ತದೆ. ಈ ವಿಶೇಷ ದೇವಸ್ಥಾನ ರಾಜಸ್ಥಾನದ ಬಿಕಾನೇರ್‌ನಲ್ಲಿದೆ.
ಕರ್ಣಿ ಮಾತಾ ದೇಗುಲ
ರಾಜಸ್ಥಾನದ ಕರ್ಣಿ ಮಾತಾ ದೇಗುಲ ಅತ್ಯಂತ ವಿಶೇಷ ದೇವಸ್ಥಾನ. ಇಲಿಗಳನ್ನು ಕಂಡರೆ ಮಾರುದ್ದ ದೂರ ಹೋಗುವವರೆ ಹೆಚ್ಚು. ಇನ್ನು ಮನೆಯೊಳಗೆ ಒಂದು ಇಲಿ ಸೇರಿಕೊಂಡರೆ ಹೊರಗೆ ಹಾಕುವರೆಗೆ ನೆಮ್ಮದಿ ಇಲ್ಲದಾಗುತ್ತದೆ. ಆದರೆ ಇಲ್ಲಿ ಇಲಿಗಳೇ ಪವಿತ್ರ. ಈ ಕರ್ಣಿ ಮಾತಾ ದೇಗುಲದಲ್ಲಿ ಇಲಿಗಳನ್ನು ಪವಿತ್ರ ಎಂದು ಪೂಜಿಸಲು ಕೆಲ ಕಾರಣಗಳಿವೆ.
ಕರ್ಣಿ ಮಾತಾ ದೇಗುಲದಲ್ಲಿ ಇಲಿಗಳನ್ನು ಕಬ್ಬಾ ಅಥವಾ ಕಾಬಾ ಎಂದು ಕರೆಯುತ್ತಾರೆ. ಪುರಾಣಗಳಲ್ಲಿ ಕರ್ಣಿ ಮಾತಾ ದೇಗುಲ ಅತ್ಯಂತ ಪ್ರಸಿದ್ಧಿ ಪಡೆದಿದೆ. ಕರ್ಣಿ ಮಾತಾ ದೇವಿಯನ್ನು ದುರ್ಗಾ ದೇವಿಯ ಅವತಾರ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಕರ್ಣಿ ಮಾತಾ ಮಗ ಲಖನ್ ನದಿಯಲ್ಲಿ ಮುಳುಗಿ ಮತಪಟ್ಟಿದ್ದ. ಕರ್ಣಿ ಮಾತೆ ಮಗನ ಉಳಿಸಿಕೊಳ್ಳಲು ಯಮಧರ್ಮನ ಪ್ರಾರ್ಥನೆಯಲ್ಲಿ ತೊಡಗುತ್ತಾಳೆ. ಪ್ರತ್ಯಕ್ಷಗೊಂಡ ಯಮನ ಬಳಿ ತನ್ನ ಮಗನನ್ನು ಉಳಿಸಿಕೊಡುವಂತೆ ಕೇಳಿಕೊಳ್ಳುತ್ತಾಳೆ. ವೇಳೆ ಯಮ ಈ ನದಿಯಲ್ಲಿ ಹಲವು ಮಕ್ಕಳು ಮೃತಪಟ್ಟಿದ್ದಾರೆ. ನಿಮ್ಮ ಪ್ರಾರ್ಥನೆಯಿಂದ ಕರ್ಣಿ ಮಾತಾ ಹಾಗೂ ಅವರ ವಂಶಸ್ಥರ ಮಕ್ಕಳು ಇಲಿಗಳ ರೂಪದಲ್ಲಿ ಪುನರ್ಜನ್ಮ ತಾಳುವಂತೆ ಅನುಗ್ರಹಿಸಿದ. ಹೀಗಾಗಿ ಈ ಕರ್ಣಿ ಮಾತಾ ದೇಗುಲದಲ್ಲಿ ಇರುವ ಈ ಇಲಿಗಳು ಆಕೆಯ ಮಕ್ಕಳು ಎಂದು ಭಕ್ತರು ಪೂಜಿಸುತ್ತಾರೆ. ಈ ಪೌರಾಣಿಕ ನಂಬಿಕೆ ಈ ಭಾಗದ ಸ್ಥಳೀಯರಲ್ಲಿ ಅಚಲವಾಗಿದೆ. ಭಕ್ತಿಯಿಂದ ಭಕ್ತರು ಇಲಿಗಳ ಪೂಜಿಸುತ್ತಾರೆ.
ಇಲಿಗಳ ದರ್ಶನವಾದರೆ ಶುಭ ನಂಬಿಕೆ
ಈ ದೇವಸ್ಥಾನಕ್ಕೆ ಬರುವ ಭಕ್ತರು ಇಲಿಗಳಿಗೆ ಹಾಲಿನ ನೈವೇದ್ಯ ನೀಡುತ್ತಾರೆ. ಈ ದೇವಸ್ಥಾನದಲ್ಲಿ 25 ಸಾವಿರಕ್ಕೂ ಹೆಚ್ಚು ಇಲಿಗಳಿವೆ. ಎಲ್ಲವೂ ಕಪ್ಪು ಇಲಿಗಳು. ಇದರ ಜೊತೆಗೆ ಬೆರೆಳಣಿಗೆ ಬಿಲಿ ಇಲಿಗಳು ಇವೆ. ಬಿಲಿ ಇಳಿಗಳು ಕರ್ಣಿ ಮಾತಾ ದೇವರ ನಿಜವಾದ ಮಕ್ಕಳು ಎಂಬ ನಂಬಿಕೆ ಇದೆ. ಹೀಗಾಗಿ ಕಪ್ಪು ಇಲಿಗಳ ಜೊತೆ ಬಿಲಿ ಇಳಿಗಳ ದರ್ಶನವಾದರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.
ದೇವಾಲಯದ ಪ್ರಸಾದ ಮೊದಲು ಇಲಿಗೆ ಅರ್ಪಣೆ
ಈ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಧಾನ್ಯಗಳು, ಮೋದಕ , ಸಿರಿಧಾನ್ಯ, ಹಾಲು ಸೇರಿದಂತೆ ಹಲವು ಪ್ರಸಾದಗಳನ್ನ ತಯಾರಿಸಲಾಗುತ್ತದೆ. ಭಕ್ತರಿಗೆ ನೀಡುವ ಮೊದಲು ಇಲಿಗಳಿಗೆ ಅರ್ಪಿಸಲಾಗುತ್ತದೆ. ಈ ದೇವಸ್ಥಾನದಲ್ಲಿ 25 ಸಾವಿರಕ್ಕೂ ಹೆಚ್ಚು ಇಲಿಗಳಿದ್ದರೂ ದುರ್ನಾತ, ರೋಗ ರುಜಿನಗಳು ವರದಿಯಾಗಿಲ್ಲ.
ಇಲಿ ತುಳಿದರೆ ಪಾಪ
ಈ ದೇವಸ್ಥಾನಕ್ಕೆ ಬರುವ ಭಕ್ತರು ಅವಸರದಲ್ಲಿ ದರ್ಶನ ಪಡೆಯಲು ಸಾಧ್ಯವಿಲ್ಲ. ಕಾರಣ ಕಾಲಿಟ್ಟೆಲ್ಲಾ ಇಲಿಗಳು ಓಡಾಡುತ್ತಿರುತ್ತದೆ. ಒಂದು ವೇಳೆ ಇಲಿಗಳ ಮೇಲೆ ಕಾಲಿಟ್ಟರೆ ಪಾಪ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಮನುಷ್ಯನ ಕಾಲು ತುಳಿದು ಇಲಿ ಮೃತಪಟ್ಟರೆ ಪಾಪ ಪರಿಹಾರವಾಗಿ ಬೆಳ್ಳಿಯ ಅಥವಾ ಚಿನ್ನದ ಇಲಿಯ ವಿಗ್ರಹವನ್ನು ಕಾಣಿಕೆಯಾಗಿ ನೀಡಬೇಕು. ಇನ್ನು ದೇವಸ್ಥಾನದ ಇಲಿಗಳನ್ನು ಗಿಡುಗ ಸೇರಿದಂತೆ ಇತರ ಪಕ್ಷಿಗಳು, ಪ್ರಾಣಿಗಳಿಂದ ರಕ್ಷಿಸಲು ಸುತ್ತಲು ಬಲೆಗಳನ್ನು ಹಾಕಲಾಗಿದೆ.


