ನಾನು ರಾಮ ಭಕ್ತ, ಆದರೆ ರಾಮಾಯಣ ಟ್ರೇಲರ್ ನೋಡಿ ನಾನೀಗ ರಾವಣನ ಅಭಿಮಾನಿಯಾಗಿದ್ದೇನೆ. ರಣಬೀರ್ ಕಪೂರ್‌ಗಿಂತ ರಾವಣನಾಗಿ ಯಶ್ ಉತ್ತಮವಾಗಿ ಕಾಣಿಸುತ್ತಿದ್ದಾರೆ ಎಂದು ಸಿಂಗರ್ ಹನಿ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.

ಮುಂಬೈ (ಆ.20) ರಾಮಾಯಣ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟ್ರೇಲರ್ ನೋಡಿ ಭಾರತೀಯರು ಮತ್ತೆ ರಾಮಯುಗ ನೆನಪಿಸಿಕೊಳ್ಳುತ್ತಿದ್ದಾರೆ. ರಾಮಾನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ಮೇಲೆ ನೋಡುವ ಕಾತುರ ಹೆಚ್ಚಾಗಿದೆ. ಸಿನಿಮಾದ ಟ್ರೇಲರ್, ಪೋಸ್ಟರ್‌ಗಳಲ್ಲಿ ರಣಬೀರ್ ಕಪೂರ್‌ಗಿಂತ ಹೆಚ್ಚು ಯಶ್ ಮಿಂಚುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಖ್ಯಾತ ಬಾಲಿವುಡ್ ಸಿಂಗರ್ ಹನಿ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ನನಗೆ ರಣಬೀರ್ ಕಪೂರ್‌ಗಿಂತ ಯಶ್ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಯಶ್ ನೋಡಿದಾಗ ರಾಮಾಯಾಣ ಕಾಲದ ರಾವಣನ ದರ್ಶನ ಮಾಡಿಸುವಂತಿದೆ ಎಂದು ಹೊಗಳಿದ್ದಾರೆ.

ತೆರೆ ಮೇಲೆ ರಾವಣನಾಗಿ ಯಶ್ ಅದ್ಭುತ ಎಂದ ಹನಿ ಸಿಂಗ್

ರಾಮಾಯಣ ಟೀಸರ್‌ನಲ್ಲಿ ರಾವಣನಾಗಿ ಯಶ್ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದು ವಿಡಿಯೋ ಮೂಲಕ ಪ್ರಶಂಸಿದ್ದಾರೆ. ನಮ್ಮ ಬೆಂಗಳೂರಿನ ಯಶ್ ಭಾಯಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ನಾನು ಶ್ರೀರಾಮನ ದೊಡ್ಡ ಭಕ್ತ. ಆದರೆ ನನಗೆ ರಾವಣನ ಮೇಲೆ ಯಾವುದೇ ಆದರ, ಭಕ್ತಿ ಇಲ್ಲ. ರಾವಣನಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ. ಆದರೆ ರಾಮಾಯಣದಲ್ಲಿ ರಾವಣನಾಗಿ ಯಶ್ ನೋಡಿದ ಬಳಿಕ ಫಿದಾ ಆಗಿದ್ದೇನೆ. ನನ್ನ ಅಭಿಪ್ರಾಯದಲ್ಲಿ ರಣಬೀರ್ ಕಪೂರ್‌ಗಿಂತ ಯಶ್ ಹೆಚ್ಚು ಉತ್ತಮವಾಗಿ, ಅದ್ಭುತವಾಗಿ ಕಾಣಿಸುತ್ತಿದ್ದಾರೆ.ಯಶ್ ಮಾತುಗಳು, ಡೈಲಾಗ್ ನನಗೆ ಹೆಚ್ಚು ಆಪ್ತವೆನಿಸುತ್ತಿದೆ ಎಂದು ಹನಿ ಸಿಂಗ್ ಹೇಳಿದ್ದಾರೆ.

ರಾಮಾಯಣ ಸಿನಿಮಾ ಅದ್ಭುತವಾಗಿ ಮೂಡಿ ಬರವು ವಿಶ್ವಾಸವಿದೆ. ನಾವು ಚಿಕ್ಕಂದಿನಿಂದ ರಾಮನ ಭಕ್ತನಾಗಿ, ಶ್ರೀರಾಮನ ದೇವಸ್ಥಾನ, ರಾಮಲೀಲಾ ನೋಡುತ್ತಾ ಬೆಳೆದಿದ್ದೇವೆ. ಶ್ರೀರಾಮನ ಆರಾಧಿಸುತ್ತಾ ಬಂದಿದ್ದೇವೆ. ಯಾರ ಭಾವನೆಗೂ ಧಕ್ಕೆ ಬಾರದಂತೆ ಸಿನಿಮಾ ತೆರೆಗೆ ಬರಲಿ. ಉತ್ತಮ ಸಿನಿಮಾ ಅದೇ ಗೌರವ, ಭಕ್ತಿಯೊಂದಿಗೆ ಪ್ರದರ್ಶನ ಕಾಣಲಿ ಎಂದು ಹನಿ ಸಿಂಗ್ ಹೇಳಿದ್ದಾರೆ.

ಹನಿ ಸಿಂಗ್ ವಿಡಿಯೋ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಹಲವು ಸೆಲೆಬ್ರೆಟಿಗಳು ರಾವಣ ಯಶ್ ನೋಡಲು ಕಾತರಗೊಂಡಿದ್ದಾರೆ. ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ನಿರ್ಮಾಣ, ನಟ ನಟಿಯರ ಸಂಭಾವನೆ, ಪ್ರೊಡಕ್ಷನ್, ಪ್ರಚಾರ ಸೇರಿದಂತೆ ಸಿನಿಮಾ ಒಟ್ಟು ಬಜೆಟ್ ಸರಿಸುಮಾರು 4000 ಕೋಟಿ ರೂಪಾಯಿ. ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಇಷ್ಟೇ ಕುತೂಹಲ ನಿರೀಕ್ಷೆಗಳು ಈ ಸಿನಿಮಾದ ಮೇಲಿದೆ.