MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Karnataka Districts
  • Karnataka Rains: ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ

Karnataka Rains: ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ

ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಮುಂಬರುವ 24 ಗಂಟೆಯಲ್ಲಿ ಗುಡುಗು, ಭಾರೀ ಗಾಳಿಯೊಂದಿಗೆ ಕುಡಿದ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರಮುಖವಾಗಿ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

2 Min read
Author : Sumanth SN
Published : Aug 20 2026, 03:59 PM IST
Share this Photo Gallery
  • FB
  • TW
  • Linkdin
  • Whatsapp
17
ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
Image Credit : Gemini AI

ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಉತ್ತರ ಬಂಗಾಳಕೊಲ್ಲಿಯಲ್ಲಿ ಹಾಗೂ ತೀರ ಪ್ರದೇಶದಲ್ಲಿ ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಐಎಂಡಿ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಸಮುದದಲ್ಲಿ ಅಲೆಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಆಗಸ್ಟ್ 22ರ ವರೆಗೂ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ
Image Credit : Gemini ai

ಆಗಸ್ಟ್ 22ರ ವರೆಗೂ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ

ರಾಜ್ಯದ ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರಾವಳಿಯ ಮೂರು ಜಿಲ್ಲೆ, ಮಲೆನಾಡಿನ ಮೂರು ಜಿಲ್ಲೆ ಸೇರಿದಂತೆ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಮಳೆಯಾಗಿದೆ. ಆಗಸ್ಟ್ 22ರ ವರೆಗೂ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ಬೆಂಗಳೂರು ಕೇಂದ್ರ ನೀಡಿದೆ.

Related Articles

Related image1
e-KYC Deadline: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ; ಈಗಲಾದರೂ ಎಚ್ಚೆತ್ತುಕೊಳ್ಳಿ!
Related image2
Bengaluru Metro: ಜಸ್ಟ್ ಒಂದು ವರ್ಷ, 3.8 ಕೋಟಿಗೂ ಅಧಿಕ ಪ್ರಯಾಣಿಕರು; ನಮ್ಮ ಮೆಟ್ರೋ ಮತ್ತೊಂದು ದಾಖಲೆ!
37
ಉಡುಪಿಯ ಕುಂಜಾಲು ಪ್ರದೇಶದಲ್ಲಿ 107.5 ಮೀ ಮೀ ಮಳೆ
Image Credit : Asianet News

ಉಡುಪಿಯ ಕುಂಜಾಲು ಪ್ರದೇಶದಲ್ಲಿ 107.5 ಮೀ ಮೀ ಮಳೆ

ರಾಜ್ಯದಲ್ಲಿ ಕಳೆದ 12 ದಿನಗಳ ಬಳಿಕ ಬುಧವಾರ ವ್ಯಾಪಕ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಭಾರೀ ಮಲೆಯಾಗಿಲ್ಲವಾದರೂ, ಶೇಕಡಾ 65 ರಷ್ಟು ಪ್ರದೇಶದಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಿದೆ. ಉಡುಪಿಯ ಕುಂಜಾಲು ಪ್ರದೇಶದಲ್ಲಿ 107.5 ಮೀ ಮೀ ಮಳೆಯಾಗಿದ್ದು, ನೀಲಾವರದಲ್ಲಿ 97 ಮೀಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಬೆಳಂದೂರಿನಲ್ಲಿ 89.5 ಮೀಮೀ ಮಳೆಯಾಗಿದೆ.

47
ಬಹುತೇಕ ಭರ್ತಿಯ ಹಂತಕ್ಕೆ ಜಲಾಶಯ
Image Credit : Gemini AI

ಬಹುತೇಕ ಭರ್ತಿಯ ಹಂತಕ್ಕೆ ಜಲಾಶಯ

ಇನ್ನು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿರುವ ಪರಿಣಾಮ ಕೃಷ್ಣಾ ನದಿಯ ಅರಿವು ಹೆಚ್ಚಾಗಿದ್ದು, ಆಲಮಟ್ಟಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಾಗಿದೆ. ಆಗಸ್ಟ್ 19ರಂದು ಜಲಾಶಯದ ನೀರಿನ ಸಂಗ್ರಹ ಮಟ್ಟ 122.30 ಅಡಿ ಇದ್ದು, ಬಹುತೇಕ ಭರ್ತಿಯ ಹಂತಕ್ಕೆ ತಲುಪಿದೆ. ಅಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಬಸವ ಸಾಗರ ಜಲಾಶಯ ಸಹ 32.84 ಅಡಿಗೆ ತಲುಪಿದ್ದು, ಭರ್ತಿಗೆ ಒಂದು ಅಡಿ ಮಾತ್ರ ಬಾಕಿ ಇದೆ.

57
ಕಾವೇರಿ ಜಲಾಶಯಗಳಿಂದ 20 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
Image Credit : Asianet News

ಕಾವೇರಿ ಜಲಾಶಯಗಳಿಂದ 20 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಕಾವೇರಿ ಜಲಾಯನ ಪ್ರದೇಶದ ನಾಲ್ಕು ಜಲಾಶಯದಗಳಿಂದ 20,094 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಣೆಕಟ್ಟುಗಳಿಗೆ ಒಳಹರಿವು 12,733 ಕ್ಯೂಸೆಕ್ ಇದೆ. ತುಂಗಾಭದ್ರ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಇದ್ದರೂ, ಒಳಹರಿವು ಮುಂದುವರೆದಿದ್ದು, ಹೊಸಪೇಟೆ ಬಳಿಯ ಅಣೆಕಟ್ಟಿನ ಸಂಗ್ರಹ 94 ಟಿಎಂಸಿ ಅಡಿ ತುಂಬಿದ್ದು, ಶೇಕಡಾ 89ರಷ್ಟು ಭರ್ತಿಯಾಗಿದೆ.

67
ಮಾನ್ಸೂನ್ ಮಾರುತಗಳ ವಿಸ್ತರಣೆ
Image Credit : Asianet News

ಮಾನ್ಸೂನ್ ಮಾರುತಗಳ ವಿಸ್ತರಣೆ

ಉಳಿದಂತೆ ಪೂರ್ವ ಭಾರತ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಜೂನ್ 01ರಿಂದ ಆಗಸ್ಟ್ 18ರ ನಡುವೆ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 13ರಷ್ಟು ಕಡಿಮೆ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರೆ, ಕೆಲವು ಪ್ರದೇಶದಲ್ಲಿ ಮಳೆಯ ಪ್ರಮಾಣ ಭಾರೀ ಕಡಿಮೆಯಾಗಿ ಬರದ ಛಾಯೆ ಆವರಿಸಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆ, ಕೃಷಿಗೆ ನೀರಿನ ಕೊರತೆ ಎದುರಾಗಲಿದೆ. ಮಾನ್ಸೂನ್ ಮಾರುತಗಳ ವಿಸ್ತರಣೆಯಲ್ಲಿ ಎದುರಾದ ಅಸಮಾನತೆಯೇ ಬರಕ್ಕೆ ಪ್ರಮುಖ ಕಾರಣ ಎಂದು ಐಎಂಡಿ ಹೇಳಿದೆ.

77
ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತ
Image Credit : X

ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತ

ಎನ್‌ ನಿನೋ ಎಫೆಕ್ಟ್ ಎಷ್ಟಿದೆ? ಭಾರತದಲ್ಲಿ ಮಳೆಯ ಪ್ರಮಾಣದ ಕೊರತೆ 13 ರಷ್ಟು ಕಡಿಮೆ ದಾಖಲಾಗಿದ್ದು, ಜೂನ್‌ನಲ್ಲಿ ಎದುರಾದ ತೀವ್ರ ಮಳೆಯ ಕೊರತೆ, ಆ ಬಳಿಕ ಜುಲೈ, ಆಗಸ್ಟ್‌ನಲ್ಲಿ ಅಸ್ಥಿರ ಮಳೆಯೇ ಕಾರಣವಾಗಿದೆ. ಮತ್ತೊಮ್ಮೆ ಎಲ್‌ ನಿನೋ ಬಲಗೊಂಡರೆ ಮಾನ್ಸೂನ್ ಮಾರುತಗಳು ಬಲಹೀನಾಗೊಂಡು, ಸೆಪ್ಟೆಂಬರ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ಮುಂದಿನ 3-4 ವಾರಗಳ ವಾತಾವರಣ ಪ್ರಮುಖವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಒಂದೊಂಮ್ಮೆ ಮಾನ್ಸೂನ್ ಮಾರುತಗಳು ಬಲಹೀನವಾದರೆ ಈ ಸೀಸನ್‌ನಲ್ಲಿ ಮಳೆ ಮತ್ತಷ್ಟು ಕಡಿಮೆಯಾಗಬಹುದು.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಮಳೆ
ಕರ್ನಾಟಕ ಮಳೆ
ಬೆಂಗಳೂರು ನಗರ
ಬೆಳಗಾವಿ
ಮಂಗಳೂರು

Latest Videos
Recommended Stories
Recommended image1
ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು
Recommended image2
ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ
Recommended image3
Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!
Related Stories
Recommended image1
e-KYC Deadline: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ; ಈಗಲಾದರೂ ಎಚ್ಚೆತ್ತುಕೊಳ್ಳಿ!
Recommended image2
Bengaluru Metro: ಜಸ್ಟ್ ಒಂದು ವರ್ಷ, 3.8 ಕೋಟಿಗೂ ಅಧಿಕ ಪ್ರಯಾಣಿಕರು; ನಮ್ಮ ಮೆಟ್ರೋ ಮತ್ತೊಂದು ದಾಖಲೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved