ಜಮ್ಮು ಕಾಶ್ಮೀರ ವಿವಾದದ ಬಗ್ಗೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅಶಾಂತಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಅಲ್ಲಿನ ಜನರು ಭಾರತ ಸೇರಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ಪಾಕ್‌ ಆಘಾತ

ಜಮ್ಮು ಕಾಶ್ಮೀರ ವಿವಾದ ಕುರಿತು ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸೆರ್ಗಿಯೊ ಹೇಳಿಕೆಗೆ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದೆ.

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ 'ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ(PoK)ದಲ್ಲಿ ಇಂದು ನಡೆಯುತ್ತಿರುವ ಅಶಾಂತಿಗೆ ಪಾಕಿಸ್ತಾನ ಕಾರಣ. ಹೀಗಾಗಿ ಇಲ್ಲಿನ ಜನರು ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ ಬದಲಾಗಿ ಭಾರತಕ್ಕೆ ಸೇರಲು ಬಯಸುತ್ತಾರೆ ಎಂಬ ಧ್ವನಿಗಳು ಕೇಳಿಬರುತ್ತಿವೆ..' ಎಂಬ ಮಾತನ್ನು ಹೇಳಿದ್ರು.

ಪಾಕ್ ಅಕ್ರಮಿತ ಕಾಶ್ಮೀರ ಕುರಿತು ರಾಯಭಾರಿ ಸೆರ್ಗಿಯೋ ಹೇಳಿಕೆಯಿಂದ ಕಂಗಲಾಗಿರುವ ಪಾಕಿಸ್ತಾನ ಇದೀಗ ಅಮೆರಿಕವೇ ವಿರುದ್ಧವೇ ಕೆರಳಿದೆ. ಬುಧವಾರ ಪಾಕಿಸ್ತಾನದಲ್ಲಿರುವ ಯುಎಸ್ ರಾಯಭಾರಿ ನಟಾಲಿ ಬೇಕರ್ ಅವರನ್ನು ಕರೆಯಿಸಿ, ಸೆರ್ಗಿಯೊ ಗೋರ್ ಅವರು ಜಮ್ಮು ಕಾಶ್ಮೀರ ಕುರಿತು ನೀಡಿರುವ ಹೇಳಿಕೆಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

ಈ ಹೇಳಿಕೆ ಮೊದಲೇ ಬರಬೇಕಿತ್ತು..

ಈ ಬಗ್ಗೆ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಪ್ರತಿಕ್ರಿಯಿಸಿದ್ದು, ಅಮೆರಿಕದ ಈ ಹೇಳಿಕೆ ಮೊದಲೇ ಬರಬೇಕಿತ್ತು ಎಂದಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಯ ಕುರಿತು ಸೆರ್ಗಿಯೊ ಗೋರ್ ಅವರ ಹೇಳಿಕೆ ತುಂಬಾ ಒಳ್ಳೆಯ ಬೆಳವಣಿಗೆ, ಬಹುಶಃ ಬಹಳ ಮೊದಲೇ ಈ ಹೇಳಿಕೆ ಬರಬೇಕಿತ್ತು. ಅಲ್ಲದೆ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರಿ ಇದನ್ನು ಪುನರುಚ್ಚರಿಸಿದರೆ ಅಂಥ ಹೇಳಿಕೆಯಿಂದ ಭಾರತದಲ್ಲಿ ಅಮೆರಿಕದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.

ಪಿಒಕೆ ಜನ ಬಡತನ, ದಬ್ಬಾಳಿಕೆಯಿಂದ ನರಳುತ್ತಿದ್ದಾರೆ

ಪಾಕಿಸ್ತಾನದ ಜೊತೆಗಿನ ಮೈತ್ರಿಯಿಂದಾಗಿ ಪಿಒಕೆ ಬಗ್ಗೆ ಅಮೆರಿಕ ಹಿಂದಿನಿಂದಲೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತ ಮಾತನಾಡುತ್ತಿತ್ತು. ಸೆರ್ಗಿಯೋ ಅವರ ಹೇಳಿಕೆಯಿಂದ ಅಂತಹ ಅಭ್ಯಾಸಕ್ಕೆ ಬ್ರೇಕ್ ಹಾಕಿದೆ. ಪಾಕಿಸ್ತಾನ ಪಿಒಕೆಯನ್ನು ಯಾವತ್ತೂ ತನ್ನ ನೆಲ ಎಂಬಂತೆ ನೋಡಿಲ್ಲ. ಅದೊಂದು ವಸಾಹತುಶಾಹಿಯಂತೆ ನಡೆಸಿಕೊಂಡಿದ್ದರಿಂದಲೇ ಅಲ್ಲಿನ ಜನರು ಬಡತನ, ದಬ್ಬಾಳಿಕೆಯಿಂದ ನರಳುವಂತಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ವಾಸ್ತವವನ್ನು ಪಾಕಿಸ್ತಾನದ ಅತ್ಯಂತ ವಿಶ್ವಾಸಾರ್ಹ ಮಿತ್ರ ರಾಷ್ಟ್ರ ಅಮೆರಿಕಕ್ಕೂ ಈಗ ಪಿಒಕೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಕಣ್ಣೀಗೆ ರಾಚಿದೆ.

ಜಮ್ಮು ಮತ್ತು ಕಾಶ್ಮೀರದ ಸೌಂದರ್ಯಕ್ಕೆ ಫಿದಾ

ಸೆರ್ಗಿಯೋ ಗೋರ್ ಜಮ್ಮು ಕಾಶ್ಮೀರದ ನೈಸರ್ಗಿಕ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. 'ಜಮ್ಮು ಮತ್ತು ಕಾಶ್ಮೀರವು ಒಂದು ಸುಂದರವಾದ ಪ್ರದೇಶವಾಗಿದ್ದು, ಅದರ ನೈಸರ್ಗಿಕ ಸೌಂದರ್ಯ ಮತ್ತು ಅದು ನೀಡುವ ಅವಕಾಶಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ಭೇಟಿ ನೀಡಲು ಬಯಸುತ್ತಾರೆ ಎಂದು ಗೋರ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಸುಧಾರಿಸಲು ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಆಧಾರದ ಮೇಲೆ ಪ್ರಯಾಣ ಎಚ್ಚರಿಕೆಯನ್ನು ಬದಲಾಯಿಸುವ ಸಾಧ್ಯತೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.