South Indian Actresses: ಸ್ಟಾರ್ ಹೀರೋಯಿನ್ಸ್ ಇಮೇಜ್ ಉಳಿಸಿಕೊಳ್ಳುವುದಕ್ಕಿಂತ ಉತ್ತಮ ಕಥೆ ಹಾಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಈ ನಟಿಯರ ಆಯ್ಕೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡುತ್ತಿದೆ.
ಸಾಮಾನ್ಯವಾಗಿ ನಾಯಕಿಯರಾಗಿ ಮಿಂಚುತ್ತಿರುವ ನಟಿಯರು ಸೈಡ್ ಟ್ರ್ಯಾಕ್‌ನ ಪಾತ್ರಗಳು ಅಥವಾ ಪೋಷಕ ಪಾತ್ರಗಳ ಆಫರ್ ಬಂದಾಗ ಒಂದಲ್ಲ, ಹತ್ತಾರು ಬಾರಿ ಯೋಚಿಸುತ್ತಾರೆ. ಎಲ್ಲಿ ತಮ್ಮ ಹೀರೋಯಿನ್ ಇಮೇಜ್‌ಗೆ ಧಕ್ಕೆಯಾಗುತ್ತದೆಯೋ, ಮುಂದೆ ನಾಯಕಿಯ ಅವಕಾಶಗಳು ಕಡಿಮೆಯಾಗುತ್ತವೆಯೋ ಎಂಬ ಆತಂಕ ಸಹಜ. ಆದರೆ ಈಗಿನ ಕೆಲ ಸ್ಟಾರ್ ಬ್ಯೂಟೀಸ್ ಮಾತ್ರ ಈ ಇಮೇಜ್ ಲೆಕ್ಕಾಚಾರಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ.
ನಾಯಕಿಯರಾಗಿ ಬ್ಯುಸಿಯಾಗಿದ್ದರೂ, ಕಥೆ ಇಷ್ಟವಾದರೆ ಮಗಳು, ಅಕ್ಕ, ತಂಗಿ ಸೇರಿದಂತೆ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರದ ಉದ್ದಕ್ಕಿಂತ ಕಥೆ ಮತ್ತು ತಮ್ಮ ಕ್ಯಾರೆಕ್ಟರ್‌ಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಈ ನಟಿಯರ ನಿರ್ಧಾರ ಸದ್ಯ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಅನಸ್ವರ ರಾಜನ್: ನಾಯಕಿಯಾಗಿದ್ದರೂ ಚಿರು ಮಗಳಾದ ಚೆಲುವೆ!
ಹೀರೋಯಿನ್ ಆಗಿ ಉತ್ತಮ ಅವಕಾಶಗಳನ್ನು ಪಡೆಯುತ್ತಿರುವ ನಟಿ ಅನಸ್ವರ ರಾಜನ್, ಇಮೇಜ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ‘ಕಾಕಾ’ ಸಿನಿಮಾದಲ್ಲಿ ಚಿರಂಜೀವಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಮತ್ತೊಂದೆಡೆ ಸಂಗೀತ್ ಶೋಭನ್ ಅಭಿನಯದ ಸಿನಿಮಾ ಹಾಗೂ ‘ಇಟ್ಲು ಅರ್ಜುನ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅಂದರೆ ಒಂದೆಡೆ ನಾಯಕಿಯಾಗಿ ಮಿಂಚುತ್ತಲೇ, ಮತ್ತೊಂದೆಡೆ ತಂದೆ-ಮಗಳ ಬಾಂಧವ್ಯದ ಪಾತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೇ ಅವರ ಆಯ್ಕೆಯಲ್ಲಿರುವ ವಿಭಿನ್ನತೆಯನ್ನು ತೋರಿಸುತ್ತದೆ.
ನಯನತಾರಾ ಕೂಡ ಇಮೇಜ್ ಬಗ್ಗೆ ಯೋಚಿಸಲಿಲ್ಲ!
ಈ ಲಿಸ್ಟ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಇದ್ದಾರೆ. ಸ್ಟಾರ್ ಹೀರೋಯಿನ್ ಆಗಿ ದೊಡ್ಡ ಮಟ್ಟದ ಇಮೇಜ್ ಹೊಂದಿರುವ ನಯನ್, ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಗಾಡ್‌ಫಾದರ್’ ಸಿನಿಮಾದಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ಅಕ್ಕನ ಪಾತ್ರದಲ್ಲಿ ನಟಿಸಿದ್ದಾರೆ. ಕೇವಲ ಪೋಷಕ ಪಾತ್ರವಲ್ಲ, ಚಿತ್ರದಲ್ಲಿ ನಯನತಾರಾ ಅವರದ್ದು ಸಾಕಷ್ಟು ಪವರ್‌ಫುಲ್ ಕ್ಯಾರೆಕ್ಟರ್ ಎನ್ನಲಾಗುತ್ತಿದೆ. ನಾಯಕಿಯಾಗಿ ತಮ್ಮದೇ ಆದ ಸ್ಟಾರ್‌ಡಮ್ ಹೊಂದಿದ್ದರೂ ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರುವುದು ವಿಶೇಷ.
ಕೀರ್ತಿ ಸುರೇಶ್ ಕೂಡ ಮಾಡಿದ್ದರು ಇದೇ ರಿಸ್ಕ್!
ಮಹಾನಟಿ ಕೀರ್ತಿ ಸುರೇಶ್ ಕೂಡ ನಾಯಕಿಯಾಗಿ ಬ್ಯುಸಿಯಾಗಿದ್ದ ಸಮಯದಲ್ಲೇ ಚಿರಂಜೀವಿ ಅಭಿನಯದ ‘ಭೋಳಾ ಶಂಕರ್’ ಸಿನಿಮಾದಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಾಯಕಿ ಇಮೇಜ್‌ಗಿಂತ ಕಥೆಗೆ ಮತ್ತು ಪಾತ್ರಕ್ಕೆ ಆದ್ಯತೆ ನೀಡುವ ನಟಿಯರ ಸಾಲಿನಲ್ಲಿ ಕೀರ್ತಿ ಕೂಡ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಮಗಳಾದ ಪ್ರೀತಿ ಮುಕುಂದನ್!
‘ಬ್ಲಾಸ್ಟ್’ ಸಿನಿಮಾದ ಯಶಸ್ಸಿನ ಬಳಿಕ ಗಮನ ಸೆಳೆದಿರುವ ಪ್ರೀತಿ ಮುಕುಂದನ್ ಕೂಡ ವಿಭಿನ್ನ ಪಾತ್ರಗಳತ್ತ ಹೆಜ್ಜೆ ಇಡುತ್ತಿದ್ದಾರೆ. ನಾಯಕಿಯಾಗಿ ಮಾತ್ರ ಸೀಮಿತವಾಗದೆ, ಅರ್ಜುನ್ ಅವರ ಮಗಳ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ವಿಜಯ್ ಮಗಳಾಗಿ ಮಮಿತಾ ಬೈಜು!
ಇನ್ನು ಸದ್ಯ ಟ್ರೆಂಡಿಂಗ್‌ನಲ್ಲಿರುವ ನಟಿ ಮಮಿತಾ ಬೈಜು ಕೂಡ ಇದೇ ಹಾದಿಯಲ್ಲಿದ್ದಾರೆ. ‘ವಿಶ್ವನಾಥ್ ಅಂಡ್ ಸನ್ಸ್’, ‘ಬೆತ್ಲಹಂ ಕುಡುಂಬಂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅವರು, ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ಹೀರೋಯಿನ್ ಇಮೇಜ್ ಕಳೆದುಕೊಳ್ಳುವ ಭಯಕ್ಕಿಂತ ಕಥೆ ಮತ್ತು ಪಾತ್ರಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಸ್ಟಾರ್ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಾಯಕಿ, ಅಕ್ಕ, ತಂಗಿ ಅಥವಾ ಮಗಳು-ಪಾತ್ರ ಯಾವುದೇ ಆಗಿರಲಿ, ಅದು ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸುವ ಅವಕಾಶವಾಗಿದ್ದರೆ ಸಾಕು ಎನ್ನುವ ಈ ಬ್ಯೂಟಿಸ್ ಹೊಸ ರೀತಿಯ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ.


