Kannada Entertainment Live: ಹಿಂದಿ ಬಾಕ್ಸ್ ಆಫೀಸ್ ಗಳಿಕೆಯಲ್ಲೂ 'ಛಾವಾ' ಕಮಾಲ್ .. ರಶ್ಮಿಕಾ-ವಿಕ್ಕಿ ಜೋಡಿಗೆ ಜೈ!
ಬೆಂಗಳೂರು: ಚಿತ್ರವೊಂದರ ಕ್ಲೈಮ್ಯಾಕ್ಸ್ನಲ್ಲಿ ಇವರಿಬ್ಬರು ಲಿಪ್ಲಾಕ್ ಮಾಡುವ ಸನ್ನಿವೇಶವನ್ನು ನಿರ್ದೇಶಕರು ಹೇಳಿದ್ದರು. ತ್ರಿಶಾ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ವಿಜಯ ಸೇತುಪತಿ (Vijay Setupathi) ಮಾತ್ರ ತಮ್ಮಿಂದ ಇದು ಸಾಧ್ಯವೇ ಇಲ್ಲ ಎಂದುಬಿಟ್ಟಿದ್ದರು. ಈ ಚಿತ್ರದ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅತ್ಯಂತ ಹೃದಯಸ್ಪರ್ಶಿ ದೃಶ್ಯವನ್ನು ಹೊಂದಿದೆ. ಇಬ್ಬರೂ ಒಬ್ಬರಿಗೊಬ್ಬರು ವಿದಾಯ ಹೇಳಿದ ದೃಶ್ಯವಿದು. ಇದು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ವಿಮಾನ ನಿಲ್ದಾಣದಲ್ಲಿ ಈ ಜೋಡಿ ವಿದಾಯ ಹೇಳಬೇಕಿತ್ತು. ಈ ಸನ್ನಿವೇಶದಲ್ಲಿ ತ್ರಿಶಾ (Trisha) ಮತ್ತು ವಿಜಯ್ ಸೇತುಪತಿ ಚುಂಬನ ಮಾಡಬೇಕಿತ್ತು. ಆದರೆ ವಿಜಯ್ ಅವರು ಒಪ್ಪದ ಕಾರಣ, ಚುಂಬನದ ದೃಶ್ಯವಿಲ್ಲದೆ ಶೂಟಿಂಗ್ ಮಾಡಲಾಗಿತ್ತು. ಇದರ ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.