ಯಾರನ್ನೂ ಟ್ರೋಲ್ ಮಾಡಬಾರದು.. ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರೋದಿಲ್ಲ.. ಅವ್ರ ಮೆಂಟಲ್ ಹೆಲ್ತ್ ಬಗ್ಗೆ ಇಮಾಜಿನ್ ಮಾಡ್ಕೊಳ್ಳಿ.. ಅವ್ರು ಎಷ್ಟು ಅಂತ ಸಹಿಸಿಕೊಳ್ತಾರೆ ಹೇಳಿ? ನೀವೆಲ್ವೇಲೋ ಕೂತ್ಕೊಂಡು ಯಾರೋ ಒಬ್ರನ್ನ ಟ್ರೋಲ್ ಮಾಡ್ತೀರಾ.. ಫುಲ್ ಸ್ಟೋರಿ ನೋಡಿ..
- Home
- Entertainment
- Kannada Entertainment Live: ಮುಂದುವರಿದ ಕಲಾವಿದರ ಅಸಮಾಧಾನ; ನಟಿ ರನ್ಯಾ ಹಿಂದಿರುವವರಿಗಾಗಿ ಹುಡುಕಾಟ
Kannada Entertainment Live: ಮುಂದುವರಿದ ಕಲಾವಿದರ ಅಸಮಾಧಾನ; ನಟಿ ರನ್ಯಾ ಹಿಂದಿರುವವರಿಗಾಗಿ ಹುಡುಕಾಟ

ಬೆಂಗಳೂರು: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನನ್ನನ್ನು ಹಿಂದೆಯೂ ಆಹ್ವಾನಿಸಿಲ್ಲ. ಈ ಬಾರಿಯೂ ಕರೆದಿಲ್ಲ. ನಾನೇ ಪಾಸ್ ಕೇಳಿದರೆ ಯಾರದೋ ಹೆಸರು ಹೇಳ್ತಾರೆ. ಅವರು ನೀವು ಹೋಗಿ ಸಾಧುಕೋಕಿಲ ಹತ್ರ ಪಾಸ್ ಕೇಳಿ ಅಂತಾರೆ. ಅವರನ್ನು ನಾನೆಲ್ಲಿ ಹುಡುಕಲಿ. ಅವರ ನಂಬರಿಲ್ಲ ನನ್ನ ಹತ್ರ. ಫೋಟೋ ಕಳಿಸಿದ್ದೇನೆ. ಫೋನ್ ಮಾಡಿದ್ದೇನೆ. ಅವರತ್ರ ಇದೆ, ಇವರತ್ರ ಇದೆ ಎಂದು ಹೇಳುತ್ತಾರೆಯೇ ಹೊರತು ಪಾಸ್ ಅಂತೂ ಕೈ ಸೇರಿಲ್ಲ’ ಎಂದು ಹಿರಿಯ ನಟ ಟೆನ್ನಿಸ್ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14.8 ಕೆ.ಜಿ. ಚಿನ್ನ ಸಾಗಿಸಿದ್ದಾರೆ. ದುಬೈನಲ್ಲಿ 1 ಕೆ.ಜಿ. ಚಿನ್ನದ ದರ ₹81 ಲಕ್ಷ ಇದ್ದರೆ, ಬೆಂಗಳೂರಿನಲ್ಲಿ ₹89 ಲಕ್ಷ ಇದೆ. ಅಂದರೆ, ರನ್ಯಾ ರಾವ್ಗೆ ₹1.20 ಕೋಟಿ ಲಾಭವಾಗಿದೆ. ವಿದೇಶದಿಂದ ಚಿನ್ನ ಅಮದು ಮಾಡಿಕೊಳ್ಳಲು ಅವಕಾಶವಿದೆ. ಶೇ.6ರಷ್ಟು ತೆರಿಗೆ ಪಾವತಿಸಬೇಕು. ರನ್ಯಾ ರಾವ್ ಇಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ಇಷ್ಟು ಮಾತ್ರವಲ್ಲ ರನ್ಯಾ ಜೊತೆ ಯಾರಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು: ನಟಿ ರಮ್ಯಾ ಖಡಕ್ ಮಾತು..!
ಎರಡನೇ ಬಾರಿ ಅಮ್ಮನಾಗ್ತಿದ್ದಾರೆ ಆಲಿಯಾ ಭಟ್? ಮಗುವಿನ ಹೆಸರು ಫಿಕ್ಸ್ !
ರಾಹಾಗೆ ಎರಡು ವರ್ಷ ತುಂಬ್ತಿದ್ದಂತೆ ಮತ್ತೆ ಫ್ಯಾನ್ಸ್ಗೆ ಖುಷಿ ಸುದ್ದಿ ನೀಡಲು ಆಲಿಯಾ ಮುಂದಾದಂತಿದೆ. ಸಂದರ್ಶನವೊಂದರಲ್ಲಿ ಮಗುವಿನ ಬಗ್ಗೆ ಸುಳಿವು ನೀಡಿದ್ದಾರೆ.
ದರ್ಶನ್ ಬಗ್ಗೆ ರಮ್ಯಾ 'ನೋ ಕಾಮೆಂಟ್ಸ್'.. ಹಳೆಯ ಟ್ವೀಟ್ ಮರೆಯದ ನೆಟ್ಟಿಗರ ಟ್ರೋಲ್ ರಗಳೆ..!?
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ರಕ್ಷಿತಾ, ಪ್ರೇಮ್, ಸುಮಲತಾ ಅಂಬರೀಷ್ ಸೇರಿದಂತೆ ಹಲವರು ಭೇಟಿಯಾಗಿ ಬಂದಿದ್ದರು. ಆದರೆ ನಟಿ ರಮ್ಯಾ ನಟ ದರ್ಶನ್ ಅವರನ್ನು ಭೇಟಿಯಾಗುವುದು ಹಾಗಿರಲಿ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪ ಹೊತ್ತಿರುವ ನಟ ದರ್ಶನ್‌ಗೆ ತನಿಖೆ ಆಗುವ ಮೊದಲೇ ಕಠಿಣ ಶಿಕ್ಷೆ..
ಶಿವರಾಜ್‌ಕುಮಾರ್ ಎದುರೇ ಡಾ ರಾಜ್‌ಕುಮಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?!
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟ ಶಿವರಾಜ್‌ಕುಮಾರ್ ಎದುರೇ ಅವರ ತಂದೆ ಡಾ ರಾಜ್‌ಕುಮಾರ್ ಬಗ್ಗೆ ಮಾತನ್ನಾಡಿದ್ದಾರೆ. ಹೌದು, ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಅಣ್ಣಾವ್ರ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. ರಿಯಲೀ...
ಬಿಕಿನಿ ಧರಿಸಲು ಹಿಂದೇಟು ಹಾಕಿ ಮಿಸ್ ವರ್ಲ್ಡ್ ಗೆದ್ದ ಏಕೈಕ ಬಾಲಿವುಡ್ ನಟಿ ಈಕೆ: ಅಮ್ಮ ಹೇಳಿದ ಸ್ಟೋರಿ ಕೇಳಿ...
2001ರಲ್ಲಿ ಮಿಸ್ ವರ್ಲ್ಡ್ ಕಿರೀಟ ಗೆದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆ ಸಮಯದಲ್ಲಿ ಬಿಕಿನಿ ಧರಿಸಲು ಹಿಂದೇಟು ಹಾಕಿರುವ ಸುದ್ದಿಯನ್ನು ಈಗ ಅವರಮ್ಮ ಬಹಿರಂಗಗೊಳಿಸಿದ್ದಾರೆ!
ಪೂರ್ತಿ ಓದಿರಶ್ಮಿಕಾ ಮಂದಣ್ಣ ತಲೆ ಬೋಳಿಸಿ ಮ್ಯಾಜಿಕ್ ಶೋ; ಉಡುಪಿಯಲ್ಲಿ ಅಪಹಾಸ್ಯ ಮಾಡಿದ್ದು ಎಷ್ಟು ಸರಿ?
ಮ್ಯಾಜಿಕ್ ಮಾಡಲು ಹೋಗಿ ಇಲ್ಲಿ ಟ್ರೋಲ್ ಆಗಿದ್ದು ಕುದ್ರೋಳಿ ಗಣೇಶ್. ಹೆಣ್ಣು ಅನ್ನೋದನ್ನು ಯೋಜಿಸಿ ಈ ಕೆಲಸ ಮಾಡಿ ಎಂದ ನೆಟ್ಟಿಗರು...
ಪೂರ್ತಿ ಓದಿPHOTOS: ವೈಭವದಿಂದ ನಡೆದ ʼಬಿಗ್ ಬಾಸ್ʼ ರಂಜಿತ್, ಮಾನಸಾ ಗೌಡ ನಿಶ್ಚಿತಾರ್ಥ!
ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿ, ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಭಾಗವಹಿಸಿದ್ದ ರಂಜಿತ್ ಅವರು ಪ್ರೀತಿಸಿದ ಹುಡುಗಿ ಮಾನಸಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಎಂಗೇಜ್‌ಮೆಂಟ್ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿಮೀ ಟೂ ಸಮಯದಲ್ಲಿ ಸ್ವಲ್ಪ ಬೇರೆ ರೀತಿ ಹ್ಯಾಂಡಲ್ ಮಾಡ್ಬೇಕಿತ್ತು, ಆಗ ಇಂಡಸ್ಟ್ರಿ ಕೊಳಕು ಅಂತಿದ್ರು: ಶ್ರುತಿ ಹರಿಹರನ್
ಮೀಟೂ ಸಮಯ ಹೇಗಿತ್ತು? ಈಗ ಇಂಡಸ್ಟ್ರಿಯಲ್ಲಿ ಯಾವ ಮಟ್ಟಕ್ಕೆ ಬದಲಾವಣೆ ಆಗಿದೆ ಎಂದು ನಟಿ ಶ್ರುತಿ ಹರಿಹರನ್ ಮಾತನಾಡಿದ್ದಾರೆ. ಅಲ್ಲದೆ ಆ ಸಮಯವನ್ನು ಹೇಗೆ ಹ್ಯಾಂಡಲ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಪೂರ್ತಿ ಓದಿಪ್ರೀತಿಸಿದ ಹುಡುಗಿ ಜೊತೆ ಉಂಗುರ ಬದಲಾಯಿಸಿಕೊಂಡ ʼBigg Boss kannada 11ʼ ಸ್ಪರ್ಧಿ ರಂಜಿತ್!
ನಟ, ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಸ್ಪರ್ಧಿ ರಂಜಿತ್ ಹಾಗೂ ಮಾನಸಾ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹಳ ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ. ರಂಜಿತ್ ಎಂಗೇಜ್ ಆಗಿರುವ ಹುಡುಗಿ ಯಾರು?
ಪೂರ್ತಿ ಓದಿಶೂಟಿಂಗ್ ಅಖಾಡಕ್ಕೆ ನಟ ದರ್ಶನ್ ಮತ್ತೆ ಎಂಟ್ರಿ, ಚಿತ್ರೀಕರಣಕ್ಕೆ ಕೌಂಟ್‌ಡೌನ್..!
ಮೈಸೂರಿನಲ್ಲಿ ಸೆಟ್ ಹಾಕಿ ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಲಿದೆ ಚಿತ್ರತಂಡ. ಮಾರ್ಚ್ 12 ರಿಂದ 15 ತನಕ ಶೂಟಿಂಗ್ ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಮೈಸೂರು ಶೆಡ್ಯೂಲ್ ಮುಗಿಸಿ ರಾಜಸ್ಥಾನಕ್ಕೆ ಶೂಟಿಂಗ್...
ಚೈತ್ರಾ ವಾಸುದೇವ್ 2ನೇ ಮದುವೆ ಮಾಡಿಕೊಂಡ ಸ್ಥಳದಲ್ಲೇ ಮಾಜಿ ಪತಿಯ 2ನೇ ಮದುವೆ; ತಲೆ ಕೆಡಿಸಿಕೊಂಡ ನೆಟ್ಟಿಗರು
ಒಂದೇ ಜಾಗ ಒಂದೇ ದಿನಾಂಕ....ಏನಿದು ಚೈತ್ರಾ ವಾಸುದೇವನ್ ಮದುವೆ ಬಗ್ಗೆ ಇಷ್ಟೋಂದು ಸುದ್ದಿಯಾಗುತ್ತಿದೆ?
ಪೂರ್ತಿ ಓದಿಕಮರ್ಷಿಯಲ್ ಕೋರ್ಟ್‌ಗೆ ಬಂದ ನಟಿ ರಮ್ಯಾ, 'ಹಾಸ್ಟೆಲ್ ಹುಡುಗರ' ಬಗ್ಗೆ ಏನ್ ಹೇಳಿದ್ರು ನೋಡಿ..!
ಅಕಾಡೆಮಿ ಯಾರನ್ನ ಕರೆದಿದ್ದಾರೆ ಯಾರನ್ನ ಕರೆದಿಲ್ಲ ಅಂತ ನನಗೆ ಗೊತ್ತಿಲ್ಲ.. ಸಾಧುಕೋಕಿಲಾ ಅವರೇ ಈ ವಿಷಯಕ್ಕೆ ಉತ್ತರಿಸಬೇಕು... ನನಗೆ ಕರೆದಿದ್ದಾರೆ, ಇವತ್ತು ನಾನು ಹೋಗುತ್ತಿದ್ದೇನೆ. ಈ ನಟ್ಟು ಬೋಲ್ಟು ಹೇಳಿಕೆ ಬಗ್ಗೆ..
ಅರೆರೆ.. ಫಿಲ್ಮ್ ಫೆಸ್ಟಿವಲ್‌ಗೆ ಬಂದ ನಟಿ ರಮ್ಯಾ.. ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಕೆಲ್ಸ ಮಾಡ್ತಿದೆ..!?
'ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ' ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ, ಕಮರ್ಷಿಯಲ್ ಕೋರ್ಟ್ ಗೂ ಕೂಡ ಇಂದು ನಟಿ ರಮ್ಯಾ ಆಗಮಿಸಿದ್ದಾರೆ. ಕೋರ್ಟ್ ಗೆ ದಾಖಲೆಗಳನ್ನು ಸಲ್ಲಿಸಲು ಆಗಮಿಸಿದ ರಮ್ಯಾ, ವಕೀಲರ ಸಮೇತ..
ಪೂರ್ತಿ ಓದಿಮಾಧ್ಯಮದ ಮುಂದೆ ನಟಿ ಲಿಪ್ ಲಾಕ್ ! ವೈರಲ್ ಆಯ್ತು ವಿಡಿಯೋ
ನಟಿ ಶ್ರಿಯಾ ಶರಣ್ ಲಿಪ್ ಲಾಕ್ ವಿಡಿಯೋ ವೈರಲ್ ಆಗಿದೆ. ಮಾಧ್ಯಮದ ಮುಂದೆ ಶ್ರಿಯಾ ಪತಿಗೆ ಮುತ್ತಿಟ್ಟಿದ್ದಾರೆ.
'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್ ನೋಡ್ಲೇ ಇಲ್ಲ- ಡಬ್ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್
1966ರಲ್ಲಿ ಬಿಡುಗಡೆಯಾದ ತಮ್ಮದೇ ಮಂತ್ರಾಲಯ ಮಹಾತ್ಮೆ ಚಿತ್ರವನ್ನು ಡಾ.ರಾಜ್‌ಕುಮಾರ್ ಕೊನೆಗೂ ನೋಡಲೇ ಇಲ್ವಂತೆ. ಅದಕ್ಕಿರುವ ಕುತೂಹಲದ ಕಾರಣ ಈಗ ರಿವೀಲ್
ತಾಯಿ ಪ್ರಮೀಳಾ ಜೋಷಾಯ್‌ಗೋಸ್ಕರ ಕ್ರೇಜಿನೈಟ್ ಅರೇಂಜ್ ಮಾಡಿದ Meghana Sarja; ಫೋಟೋಗಳಿವು!
ನಟಿ ಮೇಘನಾ ಸರ್ಜಾ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಅವರು ತಾಯಿ ಪ್ರಮೀಳಾ ಜೋಷಾಯ್‌ಗೋಸ್ಕರ ವಿಶೇಷ ಜನ್ಮದಿನದ ಪ್ಲ್ಯಾನ್ ಮಾಡಿ ಆಚರಿಸಿದ್ದಾರೆ. ಜೋಷಾಯ್ ಅವರಿಗೆ ಆತ್ಮೀಯವಾಗಿರುವ ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿಫಸ್ಟ್ನೈಟ್ನಲ್ಲಿ ಮಂಚ ಮುರಿದ ಮಗನಿಗೆ ಅಪ್ಪನ ಶಹಬ್ಬಾಸ್‌ಗಿರಿ! ಸೀನ್-ಗುಂಡಮ್ಮನ ರಾದ್ಧಾಂತದ ಮೊದಲ ರಾತ್ರಿ !
Annayya Serial: ಅಣ್ಣಯ್ಯ ಸೀರಿಯಲ್‌ನಲ್ಲಿ ಸೀನ ಮತ್ತು ಗುಂಡಮ್ಮನ ಮೊದಲ ರಾತ್ರಿಯಲ್ಲಿ ಮಂಚ ಮುರಿಯುತ್ತದೆ. ಮಂಚ ಮುರಿದದ್ದನ್ನು ನೋಡಿದ ಸೀನನ ತಂದೆ ಮಾದಪ್ಪ ಮಗನಿಗೆ ಶಹಬ್ಬಾಸ್‌ಗಿರಿ ನೀಡುತ್ತಾನೆ.
ಪೂರ್ತಿ ಓದಿನನ್ನ ಜಗತ್ತು ಬದಲಾಯಿಸಿದ ಸುಂದರಿ ನೀನು; ಆನಿವರ್ಸರಿ ಪ್ರಯುಕ್ತ ಪತ್ನಿಗೆ ಪತ್ರ ಬರೆದ ಮನೋಜ್ ಮಂಚು
ಎರಡನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ಮೌನಿಕಾಗೆ ಪತ್ರ ಬರೆದ ಮನೋಜ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.
ಪೂರ್ತಿ ಓದಿDrone Prathap, ನೀವು ಸಾಮಾನ್ಯದವರಲ್ಲ.. ಗಗನಾಗೆ 1000 ಅಡಿ ಎತ್ತರದಿಂದ ಗಿಫ್ಟ್ ಕೊಟ್ಟ ʼಭರ್ಜರಿ ಬ್ಯಾಚುಲರ್ಸ್ʼ
Zee Kannada Bharjari Bachelors Drone Prathap and Gagana: ʼಬಿಗ್ ಬಾಸ್ ಕನ್ನಡ ಸೀಸನ್ 10ʼ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ʼಭರ್ಜರಿ ಬ್ಯಾಚುಲರ್ಸ್ ಶೋʼನಲ್ಲಿ ಎಲ್ಲರೂ ಅಚ್ಚರಿ ಆಗುವಂತೆ ಮಾಡಿದ್ದಾರೆ. ʼಮಹಾನಟಿʼ ಖ್ಯಾತಿಯ ಗಗನಾಗೆ ಅವರು ನೀಡಿದ ಸರ್ಪ್ರೈಸ್ ಎಲ್ಲರಿಗೂ ಸರ್ಪ್ರೈಸ್ ಉಂಟುಮಾಡಿತ್ತು.
ಪೂರ್ತಿ ಓದಿನೋಡಲು ಚೆನ್ನಾಗಿಲ್ಲ, ಕಲರ್ ಇಲ್ಲ ಎಂದು ತುಂಬಾ ಫೀಲಿಂಗ್ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್!
ಡಬ್ಬಿಂಗ್ ಭಯದ ಜೊತೆಗೆ ತಮ್ಮ ಬಣ್ಣದ ಕುರಿತು ಮಾತನಾಡಿದ್ದ ಪುನೀತ್ ರಾಜ್‌ಕುಮಾರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.