userpic
user icon
0 Min read

ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!

Puneeth Rajkumar talked about his fear of dubbing and his color old video gone viral suc
Puneeth Raj

Synopsis

ಡಬ್ಬಿಂಗ್​ ಭಯದ ಜೊತೆಗೆ ತಮ್ಮ ಬಣ್ಣದ ಕುರಿತು ಮಾತನಾಡಿದ್ದ ಪುನೀತ್​ ರಾಜ್​ಕುಮಾರ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ.
 

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ನಡುವೆಯೇ ಪುನೀತ್‌ ರಾಜ್ ಅವರಿಗೆ ಸೇರಿರುವ ವಿಡಿಯೋಗಳನ್ನು ಅಭಿಮಾನಿಗಳು ಶೇರ್‍‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ಪುನೀತ್​ ಅವರು ತಮಗೆ ಡಬ್ಬಿಂಗ್​ ಸಮಯದಲ್ಲಿನ ಭಯದ ಬಗ್ಗೆ ಮಾತನಾಡಿರುವ ವಿಡಿಯೊ ಒಂದು ವೈರಲ್​ ಆಗಿದೆ. ಸಿಬ್ಲಿಂಗ್ಸ್​ ಕ್ರಿಯೇಷನ್​ ಈ ವಿಡಿಯೋ ಶೇರ್​ ಮಾಡಿದೆ. ಇದರಲ್ಲಿ ಅಪ್ಪು ಅವರು ನನಗೆ ಡಬ್ಬಿಂಗ್​ ಅಂದ್ರೆ ಭಯ ಇತ್ತು. ನನ್ನ ಸಿನಿಮಾ ನೋಡುವಾಗ ನನಗೇ ಎಷ್ಟೊಂದು ತಪ್ಪು ಕಾಣಿಸ್ತಿತ್ತು. ಅಷ್ಟೇ ಅಲ್ಲದೇ ರಾಜ್​ಕುಮಾರ್​ ಹೆಸರು ಕೂಡ ನನ್ನ ಜೊತೆ ಇತ್ತು. ಆದ್ದರಿಂದ ಚೆನ್ನಾಗಿ ಮಾಡಬೇಕಿತ್ತು. ಇದೇ ಕಾರಣಕ್ಕೆ ತಪ್ಪುಗಳೇ ಕಾಣಿಸ್ತಿದ್ದರಿಂದ ಅದನ್ನು ನೋಡೋಕೇ ಭಯ ಆಗ್ತಿತ್ತು ಎಂದಿದ್ದಾರೆ. ಅದೇ ವೇಳೆ ಇನ್ನೊಂದು ಕಾರಣವನ್ನೂ ಅವರು ಕೊಟ್ಟಿದ್ದಾರೆ. ಅದೇನೆಂದರೆ ಡಬ್ಬಿಂಗ್​ ನೋಡದೇ ಇರಲು ಇನ್ನೊಂದು ಕಾರಣ ಎಂದ್ರೆ, ಚಿಕ್ಕಂದಿನಿಂದಲೂ ನಾನು ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎನ್ನುವ ಫೀಲಿಂಗ್​ ಇತ್ತು. ಇದರಿಂದಲೂ ಯಾಕೋ ಮುಜುಗರ ಆಗುತ್ತಿತ್ತು ಎಂಬುದಾಗಿ ಪುನೀತ್​ ರಾಜ್​ ಹೇಳಿದ್ದಾರೆ. 

ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್‌ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್‌

ಈ ಹಿಂದೆ ಪುನೀತ್​ ಅವರ  ಬಣ್ಣದ ಕುರಿತು ಅವರ ಅಮ್ಮ ಪಾರ್ವತಮ್ಮಾ ರಾಜ್‌ಕುಮಾರ್‍‌ ಅವರು ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ ಮಾತನಾಡಿದ್ದರು.  ಇದರಲ್ಲಿ ಅಪ್ಪು ಬಣ್ಣ ಕಪ್ಪು ಎಂದು ಪದೇಪದೇ ಕೆಲವರು ಹೇಳುತ್ತಿದ್ದ ಬಗ್ಗೆ ಪಾರ್ವತಮ್ಮ ಅವರು ತಿಳಿಸಿದ್ದರು. ಪುನೀತ್‌ ಬಣ್ಣದ ಬಗ್ಗೆ ಕೆಲವರು ಹೇಳುತ್ತಲೇ ಇದ್ದರು. ಆಗ ಕೆಲವೊಮ್ಮೆ ಅಪ್ಪು ಕೂಡ ಬೇಸರ ಮಾಡಿಕೊಂಡದ್ದು ಇದೆ. ಅದಕ್ಕೆ ನಾನು ಯಾವಾಗಲೂ ಹೇಳುತ್ತಿದ್ದೆ.  ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅಪ್ಪುನೂ ಕಪ್ಪು ಎಂದು ಸಮಾಧಾನ ಮಾಡುತ್ತಿದ್ದೆ. ಅಪ್ಪು ದೇವರ ಸಮಾನ. ಅದಕ್ಕೇ ಆತನಿಗೆ ದೇವರ ಬಣ್ಣ ಬಂದಿದೆ ಎಂದು ಹೇಳುತ್ತಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದರು.

ಇದೇ ವೇಳೆ ಡಾ.ರಾಜ್‌ಕುಮಾರ್‍‌ ಅವರು, ಅಪ್ಪುವಿನ ಬಣ್ಣದ ಬಗ್ಗೆ ಮಾತನಾಡುವವರಿಗೆ ತಮಾಷೆಯಾಗಿಯೇ ತಿರುಗೇಟು ಕೊಡುತ್ತಿದ್ದ ಬಗೆಯನ್ನೂ ಈ ವಿಡಿಯೋದಲ್ಲಿ ಪಾರ್ವತಮ್ಮ ಹೇಳಿದ್ದನ್ನು ನೋಡಬಹುದು.  ‘ಕಪ್ಪು ಕಸ್ತೂರಿ ಕಣ್ರೋ, ಕೆಂಪು ಕಿಸ್ಬಾಯಿ. ನನಗಂತೂ ನನ್ನ  ಮಗನ ಬಣ್ಣ ತುಂಬಾ ಇಷ್ಟ ಆಯ್ತು’ ಎಂದು ಅವರಪ್ಪ ಹೇಳುತ್ತಿದ್ದರು ಎಂದು ಪಾರ್ವತಮ್ಮ ನೆನಪಿಸಿಕೊಂಡಿದ್ದಾರೆ. ಅಂದಹಾಗೆ,  ಅಪ್ಪು ಅಂತ ಮೊದಲು ಹೆಸರಿಟ್ಟಿದ್ದು ಡಾ.ರಾಜ್‌ ಕುಮಾರ್‍‌ ಅವರ ತಾಯಿ.  ಆರಂಭದಲ್ಲಿ ಲೋಹಿತ್‌ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಲೋಹಿತ್‌ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ, ಪುನೀತ್‌ ಎಂದು ಬದಲಾಯಿಸಲಾಗಿತ್ತು. ಆದರೂ ಪುನೀತ್‌ ಅವರು ಅಲ್ಪಾಯುವಿನಲ್ಲಿಯೇ ತೀರಿಕೊಂಡದ್ದು ಮಾತ್ರ ಬಹುದೊಡ್ಡ ದುರಂತ. 
 

ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

Latest Videos