ನಟಿ ರಶ್ಮಿಕಾ ಮಂದಣ್ಣ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಉಡುಪಿಯಲ್ಲಿ ಜಾದೂಗಾರರೊಬ್ಬರು ರಶ್ಮಿಕಾ ಅವರ ಫೋಟೋವನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ. ಜನರು ರಶ್ಮಿಕಾ ಪರವಾಗಿ ನಿಂತಿದ್ದಾರೆ, ನಟಿ ರಮ್ಯಾ ಕೂಡ ಬೆಂಬಲಿಸಿದ್ದಾರೆ. ರಶ್ಮಿಕಾ ಟ್ರೋಲ್‌ಗಳನ್ನು ನಿರ್ಲಕ್ಷಿಸಿ ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ.

ಕೊಡಗಿನ ಸುಂದರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟಲ್ಲಿ ಹೆಸರು ಮಾಡುತ್ತಿದ್ದಂತೆ ಅವರ ಹಿಂದೆ ಮುಂದೆ ಮಾತನಾಡಿಕೊಂಡು ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಸಿನಿಮಾ ಜರ್ನಿ ಆರಂಭಿಸಿದ ದಿನದಿಂದ ಟ್ರೋಲ್ ಎದುರಿಸುತ್ತಿರುವ ರಶ್ಮಿಕಾ ಮಂದಣ್ಣ ನೆಗೆಟಿವಿಟಿ ಹೇಗೆ ತಡೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಆದರೆ ಇತ್ತೀಚಿಗೆ ಉಡುಪಿಯಲ್ಲಿ ನಡೆದ ಮ್ಯಾಜಿಕ್ ಶೋ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಆದರೆ ಈ ಸಲ ಎಲ್ಲರೂ ರಶ್ಮಿಕಾ ಪರ ನಿಂತಿದ್ದಾರೆ.

ಹೌದು! ಉಡುಪಿಯಲ್ಲಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಜನರನ್ನು ಮನೋರಂಜಿಸಲು ರಶ್ಮಿಕಾ ಮಂದಣ್ಣ ಫೋಟೋ ಬಳಸಿಕೊಂಡಿದ್ದಾರೆ. ಪುಷ್ಪ ಚಿತ್ರದ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿರುವ ರಶ್ಮಿಕಾ ಮಂದಣ್ಣ ಫೋಟೋ ಹಿಡಿದುಕೊಂಡಿದ್ದಾರೆ. ಮ್ಯಾಜಿಕ್ ಮಾಡುವುದಾಗಿ ತಲೆ ಬೋಳಿಸಿದ್ದಾರೆ. ಫೋಟೋ ಹಿಡಿದವರ ಕೈಯಲ್ಲಿ ವಿಗ್ ಇತ್ತು. ಇದನ್ನು ನೋಡಿ ಅಲ್ಲಿದ್ದ ಜನರು ಸಖತ್ ಎಂಜಾಯ್ ಮಾಡಿದ್ದಾರೆ ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜಾದೂಗಾರನಿಗೂ ಟ್ರೋಲಿಗರಿಗೂ ವ್ಯತ್ಯಾಸ ಇಲ್ವಾ? ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟದಲ್ಲಿ ಬೆಳೆದಾಗಿ ಆಕೆಯನ್ನು ಬಳಸಿಕೊಂಡು ನೀವು ಬೆಳೆಯುವುದು ಬೇಡ ಬೇರೆ ಏನಾದರೂ ಮಾಡಿ. ನಟಿ ಅನ್ನೋದನ್ನು ಪಕ್ಕಕ್ಕಿ ಬಿಡಿ ಆಕೆ ಹೆಣ್ಣು ಅನ್ನೋದು ಮರೆಯಬೇಡಿ, ನಿಮ್ಮ ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಫೋಟೋ ಬಳಸಿ ಎಂದು ಜನರು ಬೈಯುತ್ತಿದ್ದಾರೆ. 

ಮೀ ಟೂ ಸಮಯದಲ್ಲಿ ಸ್ವಲ್ಪ ಬೇರೆ ರೀತಿ ಹ್ಯಾಂಡಲ್ ಮಾಡ್ಬೇಕಿತ್ತು, ಆಗ ಇಂಡಸ್ಟ್ರಿ ಕೊಳಕು ಅಂತಿದ್ರು: ಶ್ರುತಿ ಹರಿಹರನ್

ಈ ವಿಚಾರದಲ್ಲಿ ಜನರು ರಶ್ಮಿಕಾ ಮಂದಣ್ಣನ ಪರ ನಿಂತಿದ್ದಾರೆ. ಅಲ್ಲದೆ ನಟಿ ರಮ್ಯಾ ಕೂಡ ರಶ್ಮಿಕಾ ಬಗ್ಗೆ ಮಾತನಾಡುವವರಿಗೆ ಉತ್ತರಿಸಿದರು. 'ಪದೇ ಪದೇ ಯಾಕೆ ಆ ಹುಡುಗಿಯನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತೀರಾ? ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ' ಎಂದು ಹೇಳಿದ್ದರು. ಅದಾದ ಮೇಲೆ ಈ ಮ್ಯಾಜಿಕ್ ಶೋ ನಡೆದಿರುವ ಕಾರಣ ರಶ್ಮಿಕಾ ಪರ ಮಾತನಾಡಲು ಶುರು ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಜೊತೆ ಸಿನಿಮಾ ಮಾಡಿಕೊಂಡು ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದ್ಯಾವುದಕ್ಕೂ ಕೇರ್ ಮಾಡುವುದಿಲ್ಲ. ಸಖತ್ ಕೂಲ್ ಆಗಿ ಟ್ರೋಲ್‌ಗಳನ್ನು ಸ್ವೀಕರಿಸಿ ಜೀವನ ಮುಂದೆ ಸಾಗಿಸುತ್ತಿದ್ದಾರೆ. ಏಕೆಂದರೆ ನನ್ನ ಗುರು ಸಿನಿಮಾ ಮತ್ತು ಯಶಸ್ಸು ಮಾತ್ರ ಎಂದು ಈ ಹಿಂದೆ ಹೇಳಿದ್ದರು.. 

ಚೈತ್ರಾ ವಾಸುದೇವ್ 2ನೇ ಮದುವೆ ಮಾಡಿಕೊಂಡ ಸ್ಥಳದಲ್ಲೇ ಮಾಜಿ ಪತಿಯ 2ನೇ ಮದುವೆ; ತಲೆ ಕೆಡಿಸಿಕೊಂಡ ನೆಟ್ಟಿಗರು

View post on Instagram