ಮೈಸೂರಿನಲ್ಲಿ ಸೆಟ್ ಹಾಕಿ ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಲಿದೆ ಚಿತ್ರತಂಡ. ಮಾರ್ಚ್ 12 ರಿಂದ 15 ತನಕ ಶೂಟಿಂಗ್ ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಮೈಸೂರು ಶೆಡ್ಯೂಲ್ ಮುಗಿಸಿ ರಾಜಸ್ಥಾನಕ್ಕೆ ಶೂಟಿಂಗ್...
ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಮತ್ತೆ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ದರ್ಶನ್ ಚಿತ್ರೀಕರಣಕ್ಕೆ ದರ್ಶನ್ ತೆರಳಲು ಕೌಂಟ್‌ಡೌನ್ ಶುರುವಾಗಿದೆ. ಮಾರ್ಚ್ 8ನೇ ತಾರೀಖಿನಿಂದ ಬೆಂಗಳೂರಲ್ಲಿ ಶುರುವಾಗಲಿದೆ ಡೆವಿಲ್ (Devil) ಚಿತ್ರೀಕರಣ. ಮಾರ್ಚ್ 12 ರಿಂದ ಡೆವಿಲ್ ಚಿತ್ರೀಕರಣ ಮೈಸೂರಿಗೆ ಶಿಫ್ಟ್ ಆಗುವ ಎಲ್ಲಾ ಸಂಬವ ಇದೆ ಎನ್ನಲಾಗಿದೆ. ಡೆವಿಲ್ ಶೂಟಿಂಗ್ ನಲ್ಲಿ ಭಾಗಿ ಆಗಲು ದರ್ಶನ್ ರೆಡಿ ಅಗಿದ್ದಾರೆ ಎನ್ನಲಾಗಿದೆ.
ಅಚ್ಚರಿ ಎಂದರೆ, ಜೂನ್ 11ಕ್ಕೆ ಮೈಸೂರಲ್ಲಿ ಡೆವಿಲ್ ಚಿತ್ರೀಕರಣ ನಡೆಯುತ್ತಿರುವಾಗಲೇ ದರ್ಶನ್ ಬಂಧನವಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿದ್ರು. ಅಂದಿನಿಂದ ಸತತ 8 ತಿಂಗಳಿನಿಂದ ದರ್ಶನ್ ಮುಖಕ್ಕೆ ಬಣ್ಣ ಹಚ್ಚಿರಲಿಲ್ಲ. ಮಿಲನಾ ಪ್ರಕಾಶ್ ನಿರ್ದೆಶನದ ಡೆವಿಲ್ ಸಿನಿಮಾ ಮತ್ತೆ ಶೂಟಿಂಗ್ ಶುರು ಮಾಡಲಿದೆ. ನಿರ್ದೇಶಕ ಪ್ರಕಾಶ್ ಮೈಸೂರಿನಲ್ಲಿ ಡೆವಿಲ್ ಚಿತ್ರದ ಮೂರನೇ ಶೆಡ್ಯೂಲ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಲೈಫ್‌ನಲ್ಲಿ ಈಗ ಪವಿತ್ರಾ ಗೌಡಗೆ ಸ್ಥಾನ ಇಲ್ಲ, ವಿಜಯಲಕ್ಷ್ಮಿ, ದಿನಕರ್ ಕೈಯಲ್ಲಿ ಕಂಪ್ಲೀಟ್ ಕೀ..
ಇಂದು ಮೈಸೂರಿಗೆ ಚಿತ್ರತಂಡ ಶೂಟಿಂಗ್ ಪರ್ಮಿಶನ್ ಗೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ಸೆಟ್ ಹಾಕಿ ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಲಿದೆ ಚಿತ್ರತಂಡ. ಮಾರ್ಚ್ 12 ರಿಂದ 15 ತನಕ ಶೂಟಿಂಗ್ ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಮೈಸೂರು ಶೆಡ್ಯೂಲ್ ಮುಗಿಸಿ ರಾಜಸ್ಥಾನಕ್ಕೆ ಶೂಟಿಂಗ್ ಪ್ಲಾನ್ ಮಾಡಿರುವ ನಿರ್ದೇಶಕ ಪ್ರಕಾಶ್. ಬಳಿಕ ಬೇರೆ ಬೇರೆ ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆಯಲಿದೆ.
ನಿರ್ದೇಶಕ ಮಿಲನಾ ಪ್ರಕಾಶ್ ಅವರು ಡೆವಿಲ್ ಚಿತ್ರಕ್ಕೆ ನಿರ್ಮಾಪಕರೂ ಸಹ ಆಗಿದ್ದಾರೆ. ಈ ಚಿತ್ರವು ಅರ್ಧಕ್ಕೆ ನಿಂತಾಗ ಸಹಜವಾಗಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದ ಮಿಲನಾ ಪ್ರಕಾಶ್ ಅವರಿಗೆ ನೋವಿನ ಜೊತೆ ಶಾಕ್ ಕೂಡ ಆಗಿತ್ತು. ಆದರೆ, ಇದೀಗ ಎಲ್ಲವೂ ಸುಖಾಂತ್ಯ ಆಗುವ ಸಮಯ ಕೂಡಿ ಬಂದಿದೆ. ಡೆವಿಲ್ ಚಿತ್ರದ ಶೂಟಿಂಗ್ ಮತ್ತೆ ಶುರುವಾಗಿದೆ.
Actor Avinash: ನಾನು ಊರಲ್ಲಿ ಎಮ್ಮೆ ಕಾಯ್ತಾ ಇದ್ದೆ ಅಂತ ಅಣ್ಣಾವ್ರೇ ಹೇಳಿದ್ರಲ್ಲಾ..!
ಡೆವಿಲ್ ಚಿತ್ರದಲ್ಲಿ ನಟ ದರ್ಶನ್ ಜೋಡಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡದಲ್ಲಿ ಮಾತ್ರ ಸಿದ್ಧವಾಗುತ್ತಿದೆ. ಆದರೆ, ಈ ಚಿತ್ರವು ಬೇರೆ ಭಾಷೆಗಳಲ್ಲಿ ಡಬ್ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ನಟ ದರ್ಶನ್ ಕನ್ನಡದಲ್ಲಿ ಮಾತ್ರ ನಟಿಸಲು ಸ್ಟಿಕ್ ಆಗಿದ್ದು, ಈ ಕಾರಣಕ್ಕೆ ಈ ಚಿತ್ರವು ಒಂದೇ ಸಮಯದಲ್ಲಿ ಹಲವು ಭಾಷೆಗಳಲ್ಲಿ ತಯಾರಾಗುತ್ತಿಲ್ಲ.
