- Home
- Entertainment
- Sandalwood
- ತಾಯಿ ಪ್ರಮೀಳಾ ಜೋಷಾಯ್‌ಗೋಸ್ಕರ ಕ್ರೇಜಿನೈಟ್ ಅರೇಂಜ್ ಮಾಡಿದ Meghana Sarja; ಫೋಟೋಗಳಿವು!
ತಾಯಿ ಪ್ರಮೀಳಾ ಜೋಷಾಯ್‌ಗೋಸ್ಕರ ಕ್ರೇಜಿನೈಟ್ ಅರೇಂಜ್ ಮಾಡಿದ Meghana Sarja; ಫೋಟೋಗಳಿವು!
ನಟಿ ಮೇಘನಾ ಸರ್ಜಾ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಅವರು ತಾಯಿ ಪ್ರಮೀಳಾ ಜೋಷಾಯ್‌ಗೋಸ್ಕರ ವಿಶೇಷ ಜನ್ಮದಿನದ ಪ್ಲ್ಯಾನ್ ಮಾಡಿ ಆಚರಿಸಿದ್ದಾರೆ. ಜೋಷಾಯ್ ಅವರಿಗೆ ಆತ್ಮೀಯವಾಗಿರುವ ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್ ಅವರು ತಾಯಿ ಪ್ರಮೀಳಾ ಜೋಷಾಯ್ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಇದಕ್ಕಾಗಿ ಅವರು ಚಿತ್ರರಂಗದ ಕೆಲ ಗಣ್ಯರಿಗೆ ಆಹ್ವಾನ ನೀಡಿದ್ದರು.
ಭಾರತಿ ವಿಷ್ಣುವರ್ಧನ್ ಅವರು ಮನೆಗೆ ಬಂದಿದ್ದು ಮೇಘನಾ ರಾಜ್‌ಗೆ ತುಂಬ ಖುಷಿ ನೀಡಿದೆಯಂತೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಮೇಘನಾ ರಾಜ್ ಅವರು ತಾಯಿ ಜನ್ಮದಿನದಲ್ಲಿ ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳದಿ, ಗುಲಾಬಿ ಬಣ್ಣದ ಶರ್ಟ್, ಪ್ಯಾಂಟ್ ಧರಿಸಿ ಅವರು ಮಿಂಚಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ, ಸುಧಾರಾಣಿ, ಮಾಳವಿಕಾ, ಅಮೂಲ್ಯ, ಮಾಲಾಶ್ರೀ, ಆರಾಧನಾ ಸೇರಿ ಈ ಪಾರ್ಟಿಯಲ್ಲಿ ಮಹಿಳಾ ಮಣಿಗಳೇ ತುಂಬಿದ್ದರು.
ಹಿರಿಯ ನಟಿ ಉಮಾಶ್ರೀ, ಮಾಲಾಶ್ರೀ ಜೊತೆಯಲ್ಲಿ ಪ್ರಮೀಳಾ ಜೋಶಾಯ್, ಸುಂದರ್ ರಾಜ್ ಅವರು ಕ್ಯಾಮರಾಕ್ಕೆ ಪೋಸ್ ನೀಡಿದ್ದು ಹೀಗೆ.
ನಟಿ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಅವರ ತಾಯಿ ಮಮತಾ ರಾವ್ ಕೂಡ ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ಮೂಲಕ ಈ ಪಾರ್ಟಿ ಕಳೆ ಹೆಚ್ಚಿದೆ.
ಮೇಘನಾ ರಾಜ್ ಅವರು ತಾಯಿ ಜನ್ಮದಿನವನ್ನು ಬಹಳ ವಿಶೇಷವಾಗಿಸಿದ್ದಾರೆ. ಈ ಮೂಲಕ ತಾಯಿಗೆ ನೆನಪಿಡುವಂಥಹ ಗಿಫ್ಟ್ ಕೊಟ್ಟಿದ್ದಾರೆ. ಇವರ ಹೊಸ ಮನೆಯಲ್ಲಿ ಜನ್ಮದಿನದ ಆಚರಣೆ ನಡೆದಿದೆ.
ಪ್ರಮೀಳಾ ಜೋಶಾಯ್ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಅವರು ಸುಂದರ್ ರಾಜ್ ಅವರನ್ನು ಪ್ರೀತಿಸಿ ಮದುವೆಯಾದರು.
ನಟಿ ಶ್ರುತಿ ಹಾಗೂ ಮಾಲಾಶ್ರೀ ಅವರು ಮೇಘನಾ ರಾಜ್ ಜೊತೆಗೆ ಕಾಣಿಸಿದ್ದು ಹೀಗೆ. ಈ ಖುಷಿ ಗಳಿಗೆಯಲ್ಲಿ ಎಲ್ಲರೂ ಒಂದಾಗಿರೋದನ್ನು ನೋಡಲು ಚೆನ್ನ.
ಅಮೂಲ್ಯ ಅವರು ಕೆಲ ವರ್ಷಗಳಿಂದ ಸಿನಿಮಾ ಮಾಡದೆ ಇದ್ದರೂ ಕೂಡ ಚಿತ್ರರಂದವರ ಜೊತೆ ಉತ್ತಮ ಸ್ನೇಹ ಸಂಬಂಧ ಕಾಯ್ದುಕೊಂಡಿದ್ದಾರೆ.
ಭಾರತಿ ವಿಷ್ಣುವರ್ಧನ್ ಅವರು ಚಿತ್ರರಂಗದವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಚಿತ್ರರಂಗದಲ್ಲಿ ನಟ, ನಟಿಯರ ಮನೆಯ ಕಾರ್ಯಕ್ರಮಗಳಲ್ಲಿ ಅವರ ಹಾಜರಿ ಇದ್ದೇ ಇರುತ್ತದೆ.