ನಟಿ ಆಲಿಯಾ ಭಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಸಂದರ್ಶನದಲ್ಲಿ ಗಂಡು ಮಗುವಿನ ಹೆಸರನ್ನು ಮೊದಲೇ ನಿರ್ಧರಿಸಿರುವುದಾಗಿ ಹೇಳಿದ್ದಾರೆ, ಆದರೆ ಹೆಸರನ್ನು ಬಹಿರಂಗಪಡಿಸಿಲ್ಲ. ಕುಟುಂಬದ ಗ್ರೂಪ್‌ನಲ್ಲಿ ಚರ್ಚಿಸಿ ಗಂಡು ಮಗುವಿನ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಹಾ ಹೆಸರನ್ನು ಅತ್ತೆ ನೀತು ಕಪೂರ್ ಸೂಚಿಸಿದರು ಎಂದು ಆಲಿಯಾ ಹೇಳಿದ್ದಾರೆ.
ಬಾಲಿವುಡ್ ಪ್ರಸಿದ್ಧ ನಟಿ ಆಲಿಯಾ ಭಟ್ (Bollywood famous actress Alia Bhatt) ಎರಡನೇ ಮಗುವಿಗೆ ಅಮ್ಮನಾಗುವ ಪ್ಲಾನ್ ನಲ್ಲಿದ್ದಂತಿದೆ. ಈಗಾಗ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಆಲಿಯಾ, ಗಂಡು ಮಗುವಿನ ಆಸೆಯಲ್ಲಿ ಇದ್ದಂತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಆಲಿಯಾ ತಮ್ಮ ಭಾವನೆಯನ್ನು ಬಿಚ್ಚಿಟ್ಟಿದ್ದಾರೆ. ಆಲಿಯಾ ಹುಟ್ಟಲಿರುವ ಮಗುವಿಗೆ ಹೆಸರನ್ನೂ ನಿರ್ಧರಿಸಿದ್ದಾರೆ. ಆದ್ರೆ ಹೆಸರು ಯಾವ್ದು ಎಂಬುದನ್ನು ಬಹಿರಂಗಪಡಿಸಿಲ್ಲ.
ಬಾಲಿವುಡ್ ನಲ್ಲಿ ಅತಿ ಬೇಗ ತಮ್ಮ ಸ್ಥಾನವನ್ನು ಖಾಯಂ ಮಾಡಿಕೊಂಡವರಲ್ಲಿ ನಟಿ ಆಲಿಯಾ ಭಟ್ ಕೂಡ ಒಬ್ಬರು. ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿ ಗಳಿಸಿರುವ ಆಲಿಯಾ, ರಣಬೀರ್ ಕಪೂರ್ ಕೈ ಹಿಡಿದು ಕಪೂರ್ ಕುಟುಂಬದ ಸೊಸೆಯಾಗಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ, ಮಗಳಿಗೆ ರಾಹಾ ಅಂತ ಹೆಸರಿಟ್ಟಿದ್ದಾರೆ. ಈ ಹೆಸ್ರಿನ ಬಗ್ಗೆ ಚರ್ಚೆ ನಡೆಯುವಾಗ್ಲೇ ಆಲಿಯಾ ಇನ್ನೊಂದು ಮಗುವಿನ ಬಗ್ಗೆ ಸುಳಿವು ನೀಡಿದ್ದಾರೆ. ರಾಹಾಗೆ ಈಗಾಗಲೇ ಎರಡು ವರ್ಷ ತುಂಬಿದೆ. ಹಾಗಾಗಿ ಆಲಿಯಾ ಹಾಗೂ ರಣಬೀರ್ ಕಪೂರ್ (Ranbir Kapoor) ಇನ್ನೊಂದು ಮಗುವಿಗೆ ಪ್ಲಾನ್ ಮಾಡಿದಂತಿದೆ. ಇದನ್ನು ನೇರವಾಗಿ ಹೇಳದೆ ಹೋದ್ರೂ ಆಲಿಯಾ, ಹೆಸರಿನ ಮೂಲಕ ಸುಳಿವು ನೀಡ್ತಾ, ನಾಚಿಕೊಂಡಿದ್ದಾರೆ.
ಮುಗಿಲ್‌ಪೇಟೆ ಸಿನಿಮಾ ನಟಿ ಕಯಾದು ಲೋಹರ್, ಹೃದಯ ಕದ್ದ ನಟ ಯಾರು?
ಸದ್ಯ ಆಲಿಯಾ ಭಟ್, ಜೇ ಶೆಟ್ಟಿ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದು ಏಕೆ ಎಂದು ಆಲಿಯಾ ವಿವರಿಸಿದ್ದಾರೆ. ಪಾಲಕರಾಗಲು ಉತ್ಸುಕರಾಗಿದ್ದ ಆಲಿಯಾ ಮತ್ತು ರಣಬೀರ್, ಫ್ಯಾಮಿಲಿ ಗ್ರೂಪ್ನಲ್ಲಿ ಮಗುವಿನ ಹೆಸರ ಬಗ್ಗೆ ಗಂಭೀರ ಚರ್ಚೆ ಮಾಡಿದ್ರು. ಈ ಸಮಯದಲ್ಲಿ ಅನೇಕರು ಮಗುವಿನ ಹೆಸರುಗಳನ್ನು ಕಳುಹಿಸಿದ್ದರು. ಆಗಿನ್ನೂ ಆಲಿಯಾ ಗರ್ಭಿಣಿ, ಹುಟ್ಟುವ ಮಗು ಯಾವುದು ಎಂಬ ಸುಳಿವು ಅವರಿಗೆ ಇರಲಿಲ್ಲ. ಆದ್ರೂ ಮಗುವಿನ ಹೆಸರಿನ ಬಗ್ಗೆ ಚರ್ಚೆ ನಡೆದಿತ್ತು. ಗಂಡು ಹಾಗೂ ಹೆಣ್ಣು ಎರಡೂ ಮಕ್ಕಳ ಹೆಸರನ್ನು ಕಳುಹಿಸಲು ಆಲಿಯಾ ಸೂಚಿಸಿದ್ರು. ಕೊನೆ ಟೈಂನಲ್ಲಿ ತೊಂದ್ರೆ ಆಗ್ಬಾರದು, ಸಮಯ ಬಂದಾಗ ಹೆಸರನ್ನು ಡಿಸೈಡ್ ಮಾಡಿದ್ರೆ ಆಯ್ತು ಎನ್ನುವ ಆಲೋಚನೆಯಲ್ಲೇ ಆಲಿಯಾ ಹಾಗೂ ರಣಬೀರ್ ಒಳ್ಳೆ ಹೆಸರುಗಳನ್ನು ಸಂಗ್ರಹಿಸಲು ಶುರು ಮಾಡಿದ್ದರು.
ಫ್ಯಾಮಿಲಿ ಗ್ರೂಪ್ ನಲ್ಲಿ ಅನೇಕ ಹೆಸರುಗಳ ಪಟ್ಟಿ ಬಂದಿತ್ತು. ಆದರೆ ಆಲಿಯಾ ಮತ್ತು ರಣಬೀರ್ಗೆ ಗಂಡು ಮಗುವಿನ ಹೆಸರುಗಳು ಹೆಚ್ಚು ಇಷ್ಟವಾದವು. ಒಂದು ತುಂಬಾ ಒಳ್ಳೆಯ ಹೆಸರು ಅಂತ ಅವರು ಭಾವಿಸಿದ್ದರು. ಆದ್ರೆ ಸಂದರ್ಶನದಲ್ಲಿ ಆಲಿಯಾ ಆ ಹೆಸರು ಯಾವುದು ಎಂಬುದನ್ನು ಹೇಳಿಲ್ಲ. ಹೆಸರು ಹೇಳಲ್ಲ ಎನ್ನುತ್ತಲೇ ನಾಚಿ ಕೆಂಪಾದ ಆಲಿಯಾ ನೋಡಿ, ಫ್ಯಾನ್ಸ್ , ಶೀಘ್ರದಲ್ಲೇ ಆಲಿಯಾ ಗುಡ್ ನ್ಯೂಸ್ ನೀಡ್ತಾರೆ ಅಂತ ಖುಷಿಯಾಗಿದ್ದಾರೆ.
ಬಿಕಿನಿ ಧರಿಸಲು ಹಿಂದೇಟು ಹಾಕಿ ಮಿಸ್ ವರ್ಲ್ಡ್ ಗೆದ್ದ ಏಕೈಕ ಬಾಲಿವುಡ್ ನಟಿ ಈಕೆ: ಅಮ್ಮ ಹೇಳಿದ
ಮಾತು ಮುಂದುವರೆಸಿದ ಆಲಿಯಾ, ರಾಹಾ ಹೆಸರನ್ನು ಯಾರು ಆಯ್ಕೆ ಮಾಡಿದ್ರು ಎಂಬುದನ್ನು ಹೇಳಿದ್ದಾರೆ. ಆಲಿಯಾ ಅತ್ತೆ ನೀತು ಕಪೂರ್ ರಾಹಾ ಹೆಸರನ್ನು ಸೂಚಿಸಿದ್ದರು. ಹೆಣ್ಣು ಮಗು ಆಗ್ಲಿ ಇಲ್ಲ ಗಂಡು ಮಗು ಆಗ್ಲಿ ರಾಹಾ ಹೆಸರು ಇಬ್ಬರಿಗೂ ಸೂಟ್ ಆಗುತ್ತೆ ಅಂತ ರೀತು ಕಪೂರ್ ಹೇಳಿದ್ದರು. ರಾಹಾ ಹೆಸರು ನನಗೂ ಇಷ್ಟವಾಗಿತ್ತು. ರಾಹಾ ಎಂದರೆ ಶಾಂತಿ ಮತ್ತು ಸಂತೋಷ ಎಂದು ಆಲಿಯಾ ಭಟ್ ಹೇಳಿದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇರುವ ಆಲಿಯಾ ಹಾಗೂ ರಣಬೀರ್ ಕಪೂರ್, ಆಗಾಗ ಮಗಳ ಜೊತೆ ಕಾಣಿಸಿಕೊಳ್ತಿರುತ್ತಾರೆ. ರಾಹಾ ನೋಡಲು ಫ್ಯಾನ್ಸ್ ಕಣ್ಣುಗಳು ಸದಾ ಕಾಯ್ತಿರುತ್ವೆ.
