- Home
- Entertainment
- TV Talk
- Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
ಕರ್ಣ ಮತ್ತು ನಿಧಿಯ ಸಂಬಂಧದ ಸತ್ಯವನ್ನು ಹೇಳಲು ಕರ್ಣ ಪ್ರಯತ್ನಿಸುತ್ತಿರುವಾಗ, ನಿಧಿ ತನ್ನ ಪ್ರೀತಿ ಮುಗಿದುಹೋದ ಕಥೆ ಎಂದು ಮನೆಯವರಿಗೆ ಸುಳ್ಳು ಹೇಳುತ್ತಾಳೆ. ನಿತ್ಯಾಳ ಗರ್ಭದ ಸತ್ಯ ತಿಳಿದಿರುವ ನಿಧಿ, ಎಲ್ಲವೂ ಸರಿಯಾಗುವ ಹೊತ್ತಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಾಳೆ.

ಸತ್ಯ ಇನ್ನೂ ಗುಟ್ಟು
ಕರ್ಣ ನಿತ್ಯಾ ಹತ್ತಿರ ಎಲ್ಲಾ ಸತ್ಯವನ್ನು ಹೇಳುವ ನಿರ್ಧಾರ ಮಾಡಿದ್ದಾನೆ. ತನ್ನ ಮತ್ತು ನಿಧಿಯ ಸಂಬಂಧದ ಬಗ್ಗೆ ಹೇಳುವ ಅಂದುಕೊಂಡಿದ್ದಾರೆ. ಆದರೆ ಈ ನಿರ್ಧಾರ ಮಾಡಿದಾಗಲೆಲ್ಲಾ ಏನೇನೋ ಅಡ್ಡಿ ಬಂದು ಅದನ್ನು ಅವನು ಹೇಳಲು ಆಗುತ್ತಿಲ್ಲ.
ನಿತ್ಯಾಳ ಸತ್ಯ
ಅದೇ ಇನ್ನೊಂದೆಡೆ, ನಿತ್ಯಾ ಗರ್ಭಿಣಿ ಎನ್ನುವ ಸತ್ಯ ನಿಧಿಗೆ ತಿಳಿದಿದೆ. ಅದು ತೇಜಸ್ ಮಗು ಎನ್ನುವ ಸತ್ಯ ತಿಳಿಯುತ್ತಲೇ ಕರ್ಣನ ಬಗ್ಗೆ ಇದ್ದ ಮುನಿಸು ದೂರವಾಗಿದೆ. ಅಕ್ಕನಿಗೆ ಕರ್ಣ ಸಹಾಯ ಮಾಡುತ್ತಿರುವುದಕ್ಕೆ ಆಕೆ ಋಣಿಯಾಗಿದ್ದಾಳೆ.
ನಿಧಿ ಲವ್ಸ್ಟೋರಿ
ಇದರ ನಡುವೆಯೇ, ಮನೆಯವರಿಗೆ ಎಲ್ಲರಿಗೂ ನಿಧಿ ಯಾರನ್ನೋ ಲವ್ ಮಾಡ್ತಿರೋ ವಿಷಯ ತಿಳಿದುಬಿಟ್ಟಿದೆ. ಆದರೆ ಅದು ಕರ್ಣನೇ ಎನ್ನುವ ಸತ್ಯ ಮಾತ್ರ ಗೊತ್ತಿಲ್ಲ.
ನಿತ್ಯಾ-ಶಾಂತಿ ಒತ್ತಾಯ
ಇದೀಗ ಶಾಂತಿ ಮತ್ತು ನಿತ್ಯಾ ಬಂದು ನಿಧಿಗೆ ಒತ್ತಾಯ ಮಾಡುತ್ತಿದ್ದಾರೆ. ಆ ಹುಡುಗ ಯಾರು ಎಂದು ಹೇಳು ಎನ್ನುತ್ತಿದ್ದಾರೆ. ನಿಧಿಗೆ ಏನು ಮಾಡುವುದು ಎಂದೇ ತಿಳಿಯುತ್ತಿಲ್ಲ.
ಬ್ರೇಕ್ ಆಗಿದೆ
ಕೊನೆಗೆ ಗಟ್ಟಿ ಮನಸ್ಸು ಮಾಡಿದ ನಿಧಿ, ಅವನ ಬಗ್ಗೆ ಹೇಳುವುದಿಲ್ಲ. ನನಗೂ ಅವನಿಗೂ ಈಗ ಸಂಬಂಧವೇ ಇಲ್ಲ. ಅದು ಮುಗಿದು ಹೋಗಿರುವ ಕಥೆ. ಆತ ನನ್ನ ನಡುವೆ ಬ್ರೇಕ್ ಆಗಿದೆ ಎಂದು ಸುಳ್ಳು ಹೇಳುತ್ತಾಳೆ.
ಸರಿ ಮಾಡ್ತೇನೆ
ಶಾಂತಿ ತುಂಬಾ ನೊಂದುಕೊಂಡು, ಹೇಳಮ್ಮಾ ನಾನು ಎಲ್ಲಾ ಸರಿ ಮಾಡುತ್ತೇನೆ. ಯಾರು ಎಂದು ಒಮ್ಮೆ ಪರಿಚಯ ಮಾಡಿಸು ಎನ್ನುತ್ತಾಳೆ. ನಿತ್ಯಾ ಕೂಡ ಹಾಗೆಯೇ ಹೇಳುತ್ತಾಳೆ.
ಸರಿಯಾಗತ್ತೆ ಅಂದುಕೊಂಡಾಗಲೇ..
ಆದರೆ, ಕರ್ಣನ ಹೆಸರನ್ನು ಹೇಗೆ ಹೇಳಿಯಾಳು ನಿಧಿ? ಹಾಗೇನಾದ್ರೂ ಬೇಕಾದ್ರೆ ನಾನೇ ಹೇಳುತ್ತೇನೆ ಎಂದು ಅಲ್ಲಿಗೆ ಆ ವಿಷಯದ ಬಗ್ಗೆ ಮಾತನಾಡಬೇಡಿ ಎಂದಿದ್ದಾಳೆ. ನಿತ್ಯಾಗೆ ಎಲ್ಲಾ ಸತ್ಯ ಗೊತ್ತಾಗತ್ತೆ, ನಿಧಿ ಮತ್ತು ಕರ್ಣ ಒಂದಾಗುತ್ತಾರೆ ಎನ್ನುವ ಹೊತ್ತಲ್ಲಿ ಹೀಗೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

