ಬೆಂಗಳೂರಿಗೆ ಬಂದಿದ್ದ ನಟಿ ಸನ್ನಿ ಲಿಯೋನ್ , ದರ್ಶನ್ ಬಂಧನದ ಕುರಿತು ಕೇಳಲಾದ  ಪ್ರಶ್ನೆಗೆ ಉತ್ತರಿಸಿದ್ದು ಹೀಗೆ

ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಅವರಿಗೆ ನಟ ದರ್ಶನ್ ಬಂಧನದ (Actor Darshan Arrest) ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ತಮ್ಮದೇ ಶೈಲಯಲ್ಲಿ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಹೊಸದಾಗಿ ಆರಂಭವಾಗ್ತಿರುವ ನ್ಯಾಚುರಲ್ಸ್ ನ ಬ್ಯೂಟಿ ಆ್ಯಂಡ್ ಎಕ್ಸ್ಪಿರಿಯನ್ಸ್ ಉದ್ಘಾಟನೆಗಾಗಿ ಪತಿ ಡೇನಿಯಲ್ ವೇಬರ್ ಜೊತೆ ಆಗಮಿಸಿದ್ದ ಸನ್ನಿ ಲಿಯೋನ್ ಅಂದವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಸನ್ನಿ ಲಿಯೋನ್ ಕಾರ್‌ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಶಿಳ್ಳೆ, ಚಪ್ಪಾಳೆ ಹಾಕುತ್ತಾ ಮಾದಕ ಚೆಲುವೆಯನ್ನು ಸಿಲಿಕಾನ್ ಸಿಟಿಗೆ ಸ್ವಾಗತಿಸಿಕೊಂಡರು. ದೂರದಿಂದಲೇ ಸನ್ನಿ ಫೋಟೋ ಸೆರೆ ಹಿಡಿದು, ಅಲ್ಲಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಒಳಗೊಳಗೆ ಖುಷಿಯಿಂದ ಕುಣಿದಾಡಿದರು.

Add Asianetnews Kannada as a Preferred SourcegooglePreferred

ದರ್ಶನ್‌ ವಿರುದ್ಧ ಅಕ್ರಮವಾಗಿ ಬಾತುಕೋಳಿ ಸಾಕಿದ ಕೇಸ್‌: ಶೀಘ್ರ ಚಾರ್ಜ್‌ಶೀಟ್

ಶಾಪ್ ಉದ್ಘಾಟನೆ ಬಳಿ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಬೆಂಗಳೂರು ಎಂದು ಜೋರಾಗಿ ಹೇಳಿದರು. ನನಗೆ ಸ್ಪಲ್ಪ ಸ್ವಲ್ಪ ಕನ್ನಡ ಬರುತ್ತದೆ. ಇನ್ನು ಕಲಿಯುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಪ್ರೀತಿ ಪಾತ್ರರಾದರು. ಇದೇ ವೇಳೆ ದರ್ಶನ್ ಬಂಧನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸನ್ನಿ ಲಿಯೋನ್‌ ನಿರಾಕರಿಸಿದರು. ಇದು ತುಂಬಾ ಕಷ್ಟವಾದ ಪ್ರಶ್ನೆ ಆಗಿದೆ ಎಂದು ಹೇಳಿದರು. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು ಸನ್ನಿ ಕೊಂಚ ಗರಂ ಆದರು.

ಮಂಗಳವಾರ ದರ್ಶನ್ ಬಂಧನದ ಕುರಿತು ಪ್ರತಿಕ್ರಿಯಿಸಿದ್ದ ನಟಿ ರಚಿತಾ ರಾಮ್, ಮೊದಲನೇಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ ಎಂದು ಹೇಳಿದ್ದರು. ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್ ತಾರೆಯರು ದರ್ಶನ್ ಬಂಧನದ ಕುರಿತು ಮಾತನಾಡುತ್ತಿದ್ದಾರೆ. ನಟ ಸುದೀಪ್, ನಟಿ ರಮ್ಯಾ ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಗನ್‌ ಇಟ್ಟು ದರ್ಶನ್‌ ನನಗೆ ಹೆದರಿಸಿದ್ದರು, ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು: ಉಮಾಪತಿಗೌಡ