Asianet Suvarna News Asianet Suvarna News

ಗನ್‌ ಇಟ್ಟು ದರ್ಶನ್‌ ನನಗೆ ಹೆದರಿಸಿದ್ದರು, ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು: ಉಮಾಪತಿಗೌಡ

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಹತ್ಯೆ ಆರೋಪ ಎದುರಿಸುತ್ತಿರುವ ನಟ ದರ್ಶನ್‌, ಹಿಂದೊಮ್ಮೆ ತಮಗೆ ಗನ್‌ ತೋರಿಸಿ ಬೆದರಿಸಿದ್ದರು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಗಂಭೀರ ಆರೋಪ ಮಾಡಿದ್ದಾರೆ. 

sandalwood producer umapathy gowda reaction to actor darshan arrest case gvd
Author
First Published Jun 19, 2024, 8:04 AM IST

ಬೆಂಗಳೂರು (ಜೂ.19): ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಹತ್ಯೆ ಆರೋಪ ಎದುರಿಸುತ್ತಿರುವಎಮೋಷನಲ್ ಆಗಿಬಿಟ್ಟೆ. ಇದಕ್ಕೆ ನಾನು ದೊಡ್ಡದಾಗಿ ತಿರುಗೇಟು ಕೊಡಲೇಬೇಕು ಅಂತ ನಿರ್ಧರಿಸಿದ್ದೆ. ಆದರೆ, ನನಗೆ ಒಂದು ಕುಟುಂಬ ಇದೆ, ಗುರುಗಳು ಇದ್ದಾರೆ. ಅವರೆಲ್ಲರ ಮಾತು ಕೇಳಿ ಸುಮ್ಮನಾದೆ. ಆದರೆ, ಅವತ್ತು ನನ್ನ ಮಕ್ಕಳು ಹಾಕಿದ ಕಣ್ಣೀರಿಗೆ ಇವತ್ತು ಬೆಲೆ ಸಿಕ್ಕಿದೆ’ ಎಂದು ಹೇಳಿದ್ದಾರೆ.

ದರ್ಶನ್‌ ಜತೆ ಸೆಲ್ಫಿ ಕ್ಲಿಕ್ಕಿಸಿ ಕಿಡ್ನಾಪ್‌ ಆರೋಪಿಗಳ ಸಂಭ್ರಮ: ರೇಣುಕಾಸ್ವಾಮಿ ಕರೆತಂದಿದ್ದೆ ಈ ಮೂವರು!

ಭಂಡ ಧೈರ್ಯ: ‘ಏನು ತಿಂದರೂ ಅರಗಿಸಿಕೊಳ್ಳುತ್ತೇನೆಂಬ ಭಂಡ ಧೈರ್ಯ ಇದ್ದಾಗ ಇಂಥ ಘಟನೆ ನಡೆಯಲು ಸಾಧ್ಯ. ನಾವು ಎತ್ತರಕ್ಕೆ ಬೆಳೆದಷ್ಟು ತಗ್ಗಿಬಗ್ಗಿ ನಡೆಯಬೇಕು. ಇವತ್ತು ಅವರ ಕೈಯಾರೆ ಅವರ ತಿನ್ನೋ ಅನ್ನಕ್ಕೆ ಮಣ್ಣು ಹಾಕಿಕೊಂಡಿದ್ದಾರೆ. ಅವರ ಗುಂಡಿ ಅವರೇ ತೋಡಿಕೊಂಡು ಹೋಗಿದ್ದಾರಲ್ಲ?’ ಎಂದು ಹೇಳಿದರು.

 

ಹಿಂಸಿಸಿ ಹತ್ಯೆ ಘೋರ ಅಪರಾಧ: ‘ಅವರೇ ಕೊಲೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನೂ ಕೂಡ ಮಾಧ್ಯಮಗಳಲ್ಲೇ ನೋಡಿ ತಿಳಿದುಕೊಳ್ಳುತ್ತಿದ್ದೇನೆ. ಸಾಯಿಸೋದೆ ಮಹಾ ಅಪರಾಧ. ಅಂಥದ್ದರಲ್ಲಿ ಹಿಂಸಿಸಿ ಸಾಯಿಸೋದು ಘೋರ ಅಪರಾಧ. ಯಾರೇ ಈ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ. ಈ ಘಟನೆ ನಂತರ ದರ್ಶನ್‌ ಅವರ ಹಿಂದೆ- ಮುಂದೆ ಇರುವ ಸ್ನೇಹಿತರು ಬೆಂಬಲಕ್ಕೆ ಬರಲಿಲ್ಲ, ಹೇಗೆ ಬರೋದಿಕ್ಕೆ ಸಾಧ್ಯ, ಸ್ನೇಹಿತರು ಎಲ್ಲಿಯವರೆಗೂ ಇರುತ್ತಾರೆ ಹೇಳಿ’ ಎಂದು ಉಮಾಪತಿ ಪ್ರಶ್ನಿಸಿದ್ದಾರೆ.

ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್‌ ಮನೆ ತೆರವು: ಡಿಕೆಶಿ

‘ಜಗ್ಗೇಶ್‌, ರವಿವರ್ಮ, ಸುದೀಪ್‌, ಪುನೀತ್‌, ಧ್ರುವ ಸರ್ಜಾ ವಿಚಾರದಲ್ಲಿ ಇವರು ತೋರಿದ ವರ್ತನೆ ಸಹಿಸಿಕೊಂಡು ಸುಮ್ಮನಿದ್ದರು. ಅವತ್ತೇ ಇವರ ವರ್ತನೆಯನ್ನು ಚಿವುಟಿ ಹಾಕಿದ್ದರೆ ನನ್ನವರೆಗೂ ಬರುತ್ತಿರಲ್ಲ. ಆ ತಪ್ಪುಗಳನ್ನು ಸರಿ ಮಾಡಿಬೇಕಿತ್ತು. ಈಗ ನೋಡಿ ಏನಾಗಿದೆ’ ಎಂದು ಹೇಳಿದರು. ‘ನಾನು ಒಬ್ಬ ನಿರ್ಮಾಪಕ. ನನಗೆ ಗೊತ್ತಿರುವುದು ನಿರ್ಮಾಣ. ವ್ಯಾಪಾರ ಆಗೋ ಕಡೆ ಸಿನಿಮಾ ಮಾಡುತ್ತೇನೆ. ಇಬ್ಬರು ಸ್ಟಾರ್‌ಗಳ ಜತೆಗೂ ಸಿನಿಮಾ ನಿರ್ಮಿಸಿದ್ದೇನೆ. ಅವರಿಂದಲೂ ಕಲಿತಿದ್ದೇನೆ, ಇವರಿಂದಲೂ ಕಲಿತಿದ್ದೇನೆ. ಆದರೆ, ಚಿತ್ರರಂಗದಲ್ಲಿ ನನ್ನದೂ ಅಂತ ಏನಾದರೂ ಕೊಡುಗೆ ಇದ್ದರೆ ಅದರಲ್ಲಿ ಹೆಚ್ಚಿನ ಪಾಲು ಸುದೀಪ್‌ ಅವರದ್ದೇ’ ಎಂದರು.

Latest Videos
Follow Us:
Download App:
  • android
  • ios