ಡೆಂಗ್ಯೂ ವಿರುದ್ಧ ಸಮರ, ಇದು ಈ ಕ್ಷಣದ ಕರ್ತವ್ಯ

ಹಿಂದೆಂದೂ ಕೇಳರಿಯದಷ್ಟು ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ಈ ಬಾರಿ ದಾಖಲಾಗಿದೆ. 2019 ಸೆಪ್ಟೆಂಬರ್ 1 ರವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಸುಮಾರು9300 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರಿನಲ್ಲೇ ಸುಮಾರು ಆರು ಸಾವಿರ [5,832] ಪ್ರಕರಣಗಳು ದಾಖಲಾಗಿವೆ. ಕಳೆದ ಮೇ ತಿಂಗಳಿನಲ್ಲಿ 1000+ ಇದ್ದ ಈ ಸಂಖ್ಯೆಬರೇ ಮೂರು ತಿಂಗಳಿನಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ! ಡೆಂಗ್ಯೂ ವಿರುದ್ಧ ಹೋರಾಟದಲ್ಲಿ ನಾಗರಿಕರ ಪಾತ್ರ ಬಲು ದೊಡ್ಡದು. ಡೆಂಗ್ಯೂ ನಿಯಂತ್ರಿಸಲು ಏನು ಮಾಡಬಹುದು? ಇಲ್ಲಿದೆ ಸಮಗ್ರ ಮಾಹಿತಿ....

ಕಾಯಿಲೆ-ಕಸಾಲೆ, ರೋಗ-ರುಜಿನಗಳಿಗೆ ಯಾವುದೇ ಜಾತಿ-ಮತವಾಗಲಿ, ಗಡಿಯಾಗಲಿ ಇಲ್ಲ. ಅದನ್ನು ಹರಡುವ ಸೊಳ್ಳೆ ಅಥವಾ ಕೀಟಾಣುಗಳಿಗೂ ಬಡವ-ಬಲ್ಲಿದೆನೆಂಬ ಭೇದವಿಲ್ಲ. ಹಳ್ಳಿಯಿಂದ ಹಿಡಿದು ಡೆಲ್ಲಿವರೆಗೂ ಈಗ ಡೆಂಗ್ಯೂ ಎಂಬ ಮಹಾಮಾರಿದ್ದೇ ಕಾಟ. ಡೆಂಗ್ಯೂ ವಿರುದ್ಧ ಸಮರ ಈ ಕ್ಷಣದ ಅನಿವಾರ್ಯತೆ, ಮತ್ತು ನಮ್ಮೆಲ್ಲರ ಹೊಣೆಗಾರಿಕೆ. ಬನ್ನಿ, ಈವಿಡಿಯೋಗಳ ಮೂಲಕ ನಾವು ನಮ್ಮ ಅರಿವನ್ನು ಹೆಚ್ಚಿಸೋಣ, ಡೆಂಗ್ಯೂವನ್ನು ಹೊಡೆದೋಡಿಸೋಣ.