Asianet Suvarna News Asianet Suvarna News

ಒಮ್ಮೆ ಬಂದ ಡೆಂಗ್ಯೂ ಮತ್ತೆ ಕಾಡೋಲ್ಲ ಎನ್ನುವುದು ಶುದ್ಧ ಸುಳ್ಳು...

ತಪ್ಪು ಕಲ್ಪನೆಗಳು ಡೆಂಗ್ಯೂವನ್ನು ಬಿಟ್ಟಿಲ್ಲ. ಈ ರೋಗ ಒಮ್ಮೆ ಬಂದರೆ ಮತ್ತೊಮ್ಮೆ ಬರೋಲ್ಲವೆಂದೇ ಹಲವರು ನಂಬಿದ್ದಾರೆ. ಆದರೆ, ಡೆಂಗ್ಯೂ ಹರಡುವ ಸೊಳ್ಳೆಯಲ್ಲಿಯ ಜೀನ್‌ನಲ್ಲಿಯೂ ವ್ಯತ್ಯಾಸವಿದ್ದು, ಒಮ್ಮೆ ರೋಗ ಬಂದರೆ ಮತ್ತೆ ಬರೋ ಸಾಧ್ಯತೆಯೂ ಇದೆ.

The Biggest myth about dengue you can only get dengue once
Author
Bengaluru, First Published Oct 17, 2019, 5:43 PM IST
  • Facebook
  • Twitter
  • Whatsapp

ಒಂದು ವಿಷಯದ ಮೇಲೆ ಜ್ಞಾನದ ಕೊರತೆಯಿದ್ದಾಗ ತಪ್ಪು ಪರಿಕಲ್ಪನೆಗಳು ಕಾಡುವುದೇ ಹೆಚ್ಚು. ಇಂಥ ತಪ್ಪು ಕಲ್ಪನೆಗಳಿಂದ ಡೆಂಗ್ಯೂ ಸಹ ಮುಕ್ತವಾಗಿಲ್ಲ. ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಸಾಕಷ್ಟು ಅರಿವು ಮೂಡಿಸುವ ಕೆಲಸವಾಗುತ್ತಿವೆ. ಆದರೂ, ತೊಲಗದ ಕೆಲವು ತಪ್ಪ ಕಲ್ಪನೆಗಳ ಬಗ್ಗೆ ಸ್ಪಷ್ಟ ಮಾಹಿತಿಯ ಅಗತ್ಯವಿದೆ. ಡೆಂಗ್ಯೂ ವೈರಸ್ ಒಮ್ಮೆ ಕಾಡಿದರೆ ಮತ್ತೆ ಮನುಷ್ಯನನ್ನು ಬಾಧಿಸುವುದಿಲ್ಲವೆಂಬುವುದೂ ಅಂಥ ತಪ್ಪು ಕಲ್ಪನೆಗಳಲ್ಲಿ ಒಂದು.

ಡೆಂಗ್ಯೂ ಸೋಂಕು DEN-1, DEN-2, DEN-3, ಮತ್ತು DEN-4 ಹೆಸರಿನ ನಾಲ್ಕು ನಿಕಟ ಸಂಬಂಧಿತ ವೈರಸ್‌ಗಳಿಂದ ಬರುತ್ತದೆ. ಶೇ.65ರಷ್ಟು ಒಂದೇ ರೀತಿಯ ಜಿನೋಮ್ಸ್ ಶೇರ್ ಮಾಡಿಕೊಳ್ಳುವ ಇವು ಒಂದಕ್ಕೊಂದು ತುಸು ಹೋಲುತ್ತವೆ. ಬೇರೆ ಬೇರೆ ರೀತಿ ಜೀನ್ ಇದ್ದರೂ ಈ ಎಲ್ಲವೂ ಡೆಂಗ್ಯೂ ಸೋಂಕು ಹರಡಬಲ್ಲವು.

ಡೆಂಗ್ಯೂವಿನಿಂದ ಬದುಕುಳಿದವರೊಂದಿಗೆ ಮಾತುಕತೆ

ಒಂದು ಸಿರೋಟೈಪ್‌ನಿಂದ ಡೆಂಗ್ಯೂ ಬಂದು ಹುಷಾರಾದ ಬಳಿಕ, ಆ ವೈರಸ್‌ಗೆ ದೇಹ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಆದರೆ, ಇನ್ನುಳಿದ ಮೂರು ವೈರಸ್ ಅಟ್ಯಾಕ್ ಮನುಷ್ಯನ ಮೇಲೆ ಅಟ್ಯಾಕ್ ಮಾಡಬಾರದು ಎಂದೇನಿಲ್ಲ. ಬಹಳ ದಿನಗಳು ತೊಂದರೆ ಇಲ್ಲ ಎನ್ನುವ ಹಾಗೂ ಇಲ್ಲ. ಒಂದು ವೈರಸ್‌ನಿಂದ ಡೆಂಗ್ಯೂ ಬಂದು ಗುಣವಾದ ಕೆಲವೇ ದಿನಗಳಲ್ಲಿ ಮತ್ತೊಂದು ವೈರಸ್ ಅಟ್ಯಾಕ್ ಮಾಡಿ ಬಿಡಬಹುದು. ಈ ಮೊದಲು ಡೆಂಗ್ಯೂ ಅಟ್ಯಾಕ್ ಆದವರಿಗಿಂತ, ಒಮ್ಮೆ ಡೆಂಗ್ಯೂನಿಂದ ಅನುಭವಿಸಿದವರಿಗೆ ಮತ್ತೆ ಮತ್ತೆ ಈ ಸೋಂಕು ತಗುಲಿಕೊಳ್ಳುವುದು ಬೇಗ, ಎಂದು ಸಂಶೋಧಕರ ಅಭಿಪ್ರಾಯ.

ಸರ್ವಕಾಲಕ್ಕೂ ಕಾಡುತ್ತೆ ಡೆಂಗ್ಯೂ

ಅದಕ್ಕೆ ಡೆಂಗ್ಯೂ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಡುವುದು ಎಂಬ ತಪ್ಪು ಕಲ್ಪನೆಗೆ ಬ್ರೇಕ್ ಹಾಕಿ. ಈ ಹಿಂದೆ ಡೆಂಗ್ಯೂ ಬಂದವರಿಗೂ ಮತ್ತೆ ಮತ್ತೆ ಈ ಸೋಂಕು ಸುಲಭವಾಗಿಯೇ ತಗುಲಬಹುದು. ಅದಕ್ಕೆ ಹೇಳುವುದು ಒಂದೇ ಒಂದು ಸೊಳ್ಳೆಯೂ ನಮ್ಮ ಜೀವಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಸೊಳ್ಳೆಯನ್ನು ಮುಕ್ತಗೊಳಿಸುವುದೇ ಮೊದಲ ಕಾಯಕವಾಗಬೇಕು.

Follow Us:
Download App:
  • android
  • ios