ಒಂದೇ ಒಂದು ಸೊಳ್ಳೆ ಕಚ್ಚಿದರೂ ಡೆಂಗ್ಯೂ ಬರುತ್ತಾ? ಇಲ್ಲಿದೆ ಉತ್ತರ

ಅಯ್ಯೋ, ಒಂದು ಸೊಳ್ಳೆ ಇದೆ, ಇರಲಿ ಬಿಡು ಅಂತ ಹೊದಿಕೆಯನ್ನು ತಲೆ ತನಕ ಹೊದ್ದು ಮಲಗುವವರು ಇದ್ದಾರೆ. ಆದರೆ, ಒಂದೇ ಒಂದು ಸೊಳ್ಳೆ ಸಹ ಮಾರಾಣಾಂತಿಕ ರೋಗವಾದ ಡೆಂಗ್ಯೂನಂಥ ಕಾಯಿಲೆಯನ್ನು ತರಬಹುದು. ಅದಕ್ಕೆ ಹೇಳುವುದು ಯಾವುದರ ನಿರ್ಲಕ್ಷ್ಯವೂ ಸಲ್ಲದು ಅಂತ.

Can a single mosquito bite cause dengue Hear the answer from experts

ಡೆಂಗ್ಯೂ ಎಂಬುವುದೊಂದು ಅಪಾಯಕಾರಿ ವೈರಲ್ ಸೋಂಕು ಎಂಬುವುದರಲ್ಲಿ ಅನುಮಾನವೇ ಇಲ್ಲ. ಡೆಂಗ್ಯೂ ಅನುಭವಿಸಿದವರ ಅನುಭವ ಕೇಳಿದರೆ ಈ ರೋಗ ಬಂದರೆ ಸಿಕ್ಕಾಪಟ್ಟೆ ನೋವು ಹಾಗೂ ಬಹಳ ದಿನ ಅನುಭವಿಸಬೇಕೆಂಬುವುದು ಸ್ಪಷ್ಟ. '23 ವರ್ಷ ಆಗಿದ್ದಾಗ ನಂಗೆ ಡೆಂಗ್ಯೂ ಬಂದಿತ್ತು. ವಾಸಿಯಾಗಲು ಸುಮಾರು ಆರು ತಿಂಗಳು ತೆಗೆದುಕೊಂಡಿತ್ತು. ಮೊದ ಮೊದಲು ತಾಳಲಾರದಷ್ಟು ಸಂಧಿ ನೋವು ಮತ್ತು ಜ್ವರವಿದ್ದಿದ್ದರಿಂದ ವೈದ್ಯರು ನನಗೆ ಡೆಂಗ್ಯೂ ಇದೆ ಎಂಬುದನ್ನು ಬಹುಬೇಗ ಪತ್ತೆ ಹಚ್ಚಿದರು. ನಿರಂತರವಾಗಿ ನೀಡಿದ ಔಷಧಿಯಿಂದ ಎರಡೇ ವಾರಗಳಲ್ಲಿ ಡೆಂಗ್ಯೂ ವಾಸಿಯಾಯಿತು. ಆದರೆ, ನಾನು ಮೊದಲಿನಂತಾಗಲು, ಕಳೆದುಕೊಂಡ ಶಕ್ತಿಯನ್ನು  ಮರು ಸಂಪಾದಿಸಲು ಸುಮಾರು 6 ತಿಂಗಳ ಕಾಲ ತೆಗೆದುಕೊಂಡೆ. ಆ ನಂತರವೇ ಸಂಧಿ ನೋವು ಹಾಗೂ ತಲೆಸುತ್ತುವಿಕೆಯಿಂದ ಮುಕ್ತಳಾಗಿದ್ದು. ಆ ಆರು ತಿಂಗಳು ತ್ರಾಸದಾಯಿಕವಾಗಿತ್ತು. ಆಮೇಲೆ ನನಗನ್ನಿಸಿದ್ದು ಒಂದೇ ಒಂದು ಸೊಳ್ಳೆಯೂ ಅಪಾಯಕಾರಿ ಎಂದು,' ಎನ್ನುತ್ತಾರೆ ಡೆಂಗ್ಯೂನಿಂದ ವಾಸಿಯಾದ ಅಲ್ಕಾ ಗುಪ್ತಾ.

ಮತ್ತಷ್ಟು ಡೆಂಗ್ಯೂ ಸಂತ್ರಸ್ತರು ಇಂಥದ್ದೇ ಅನುಭವವನ್ನು ಹಂಚಿಕೊಂಡಿದ್ದು, ಪ್ರತಿಯೊಬ್ಬರಿಗೂ ಕಾಡುವ ಅನುಮಾನವೆಂದರೆ ಒಂದೇ ಒಂದು ಸೊಳ್ಳೆ ಸಹ ಡೆಂಗ್ಯೂ ಹರಡಬಹುದಾ? ಎಂದು. ಇದಕ್ಕೆ ತಜ್ಞರು ಸ್ಪಷ್ಟವಾಗಿ ನೀಡುವ ಉತ್ತರವೇ ಹೌದು.

ಡೆಂಗ್ಯೂ ಮರುಕಳಿಸಿದರೆ ಅಪಾಯ ಹೆಚ್ಚು

ಈ ಡೆಂಗ್ಯೂ ವೈರಸ್ ಮನುಷ್ಯ-ಸೊಳ್ಳೆ-ಮನುಷ್ಯನಿಗೆ ಹರಡುತ್ತದೆ. ಏಡೇಸ್ ಏಜೇಪ್ಟಿ ಸೊಳ್ಳೆಯಿಂದ ಕಚ್ಚಿಸಿಕೊಂಡ ನಾಲ್ಕೈದು ದಿನಗಳ ನಂತರ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಈ ಘಟ್ಟವನ್ನು ವರೇಮಿಯ ಎನ್ನುತ್ತಾರೆ. ಈ ಸಮಯದಲ್ಲಿ ಸೊಳ್ಳೆಯಿಂದ ಕಚ್ಚಲ್ಪಟ್ಟ ಮನುಷ್ಯನ ರಕ್ತದಲ್ಲಿ ಡೆಂಗ್ಯೂ ವೈರಸ್ ಗರಿಷ್ಠವಾಗಿರುತ್ತದೆ. ಮೊದಲೆರಡು ದಿನ ರೋಗಿಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ನಂತರ ತಕ್ಷಣವೇ ಜ್ವರ ಕಾಣಿಸಿಕೊಳ್ಳಲು ಶುರುವಾಗುತ್ತದೆ. ನಿರಂತರವಾಗಿ ಕಾಡುವ ಈ ಜ್ವರ ವಾರಕ್ಕಿಂತಲೂ ಹೆಚ್ಚು ದಿನ ಕಾಡಬಹುದು.

ಈ ಡೆಂಗ್ಯೂ ಮನುಷ್ಯ-ಮನುಷ್ಯನ ಸಂಪರ್ಕದಿಂದ ಹರಡಲು ಸಾಧ್ಯವೇ ಇಲ್ಲ. ಕೇವಲ ಸೊಳ್ಳೆಯಿಂದ ಮಾತ್ರ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಲ್ಲದು. ಮನೆಯನ್ನು ಸೊಳ್ಳೆಯಿಂದ ಮುಕ್ತವಾಗಿಸುವುದು ಎಲ್ಲರೂ ಮಾಡಬೇಕಾದ ಮೊದಲ ಕೆಲಸ. ಮನೆಗೆ ಗೋದ್ರೇಜ್ ಕಾಲ್ ಹಿಟ್‌ನಂಥ ಮಸ್ಕಿಟೋ ಕಿಲ್ಲರ್ಸ್ ಬಳಸಿ, ಸೊಳ್ಳೆಯಿಂದ ಮುಕ್ತವಾಗಿ. ಹೊರ ಹೋಗುವಾಗ ಉದ್ದ ತೋಳು ಹಾಗೂ ಕಾಲು ಮುಚ್ಚುವ ಬಟ್ಟೆ ಧರಿಸಿ, ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಎಚ್ಚರವಹಿಸಿ.

Can a single mosquito bite cause dengue Hear the answer from experts

ಕೋವಿಡ್ ರೋಗ ಲಕ್ಷಣಗಳೂ ಸಾಮಾನ್ಯವಾಗಿ ಡೆಂಗ್ಯೂ ಲಕ್ಷಣಗಳನ್ನೇ ಹೋಲುವುದರಿಂದ ಯಾವ ಜ್ವರವೆಂದು ಪತ್ತೆ ಹಚ್ಚುವುದು ಇದೀಗ ಅಷ್ಟು ಸುಲಭವಾದ ಕಾರ್ಯವಲ್ಲ. ರೋಗ ಲಕ್ಷಣಗಳ ಅರಿವು ಹಾಗೂ ಅವನ್ನು ಗುರುತಿಸುವುದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಗೋದ್ರೆಜ್ ಕಾಲಾ ಹಿಟ್‌ನಿಂದ ಸೊಳ್ಳೆಗಳನ್ನು ಸಾಯಿಸುವುದೇ ಈ ಸಮಸ್ಯೆಗೆ ಇರುವ ಅತ್ಯುತ್ತಮವಾದ ಪರಿಹಾರ.

Latest Videos
Follow Us:
Download App:
  • android
  • ios