ಬೆಂಗಳೂರು: ನಗರ ಸೇರಿ ರಾಜ್ಯದ ಹಲವೆಡೆ ಮಾರಾಣಾಂತಿಕ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜನವರಿ 2019ರಿಂದ ಇಲ್ಲೀವರೆಗೂ 3 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈ ರೋಗದಿಂದ ಬಳಲುತ್ತಿರುವವರನ್ನು ಅದ್ಹೇಗೆ ರಕ್ಷಿಸಬಹುದು ಎಂಬ ಪ್ರಶ್ನೆ ಕಾಡಬಹುದು. 7878782020ಕ್ಕೆ ಕರೆ ಮಾಡಿದರೆ ಡೆಂಗ್ಯೂ ವಿರುದ್ಧ ಹೋರಾಡಲು ಯಾವ ರೀತಿಯ ಅಗತ್ಯವಿದೆಯೋ ಆ ನೆರವನ್ನು ನೀಡಲಾಗುತ್ತದೆ. 

ಸರಕಾರಿ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳು ಡೆಂಗ್ಯೂ ವಿರುದ್ಧ ಈಗಾಗಲೇ ಸಮರ ಸಾರಿದ್ದು, ಸೊಳ್ಳೆ ನಾಶ ಹಾಗೂ ಡೆಂಗ್ಯೂಗೆ ಸಂಬಂಧಿಸಿದಂತೆ ಜನರಲ್ಲಿ ಅಗತ್ಯ ಅರಿವು ಮೂಡಿಸುತ್ತಿದೆ. ಗೋದ್ರೆಜ್ ಕಂಪನಿಯ ಸೊಳ್ಳೆ ನಿವಾರಕ ಹಿಟ್ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದ್ದು, ಪ್ಲೇಟ್‌ಲೆಟ್ ಹೆಲ್ಪ್‌ಲೈನ್ ಆರಂಭಿಸಿದೆ. 24X7 ಗಂಟೆಗಳೂ ಈ ಹೆಲ್ಪ್‌ಲೈನ್ ಕಾರ್ಯ ನಿರ್ವಹಿಸಲಿದ್ದು, ಮುಂಬೈ, ದಿಲ್ಲಿ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಅಹ್ಮದಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದೆ. 

ನೈಜ ಘಟನೆಗಳನ್ನಾಧರಿಸಿ ಗೋದ್ರೆಜ್ ಹಿಟ್ ಇತ್ತೀಚೆಗೆ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಹೆಲ್ಪ್‌ಲೈನ್ ಜನರ ಜೀವ ಉಳಿಸುತ್ತಿದೆ. 

ಕಾಳ್ಗಿಚ್ಚಿನಂತೆ ಈ ಡೆಂಗ್ಯೂ ವೈರಸ್ ಹರಡುತ್ತದೆ. ಕರ್ನಾಟಕದಲ್ಲಿಯೇ ಈ ರೋಗಕ್ಕೆ 2017ರಲ್ಲಿ ಸುಮಾರು 17,265 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಈ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.  National Vector Borne Disease Control Programme (NVBDCP) ವರದಿಯನ್ವಯ 2018ರಲ್ಲಿ 3,161 ಪ್ರಕರಣಗಳಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದಾರೆ. 

ಮಹಾರಾಷ್ಟ್ರ, ಒಡಿಶಾ, ಆಂದ್ರಪ್ರದೇಶ, ಕರ್ನಾಟಕ ಮತ್ತು ಕೇರಳ ಸೇ ರಿ ಹಲವೆಡೆ ಪ್ರವಾಹದ ಪರಿಣಾಮ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಹಿಟ್ ಪ್ಲೇಟ್‌ಲೆಟ್ಸ್ ಹೆಲ್ಪ್‌ಲೈನ್‌ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೊಳೆತ ನೀರಿನಲ್ಲಿ ಸೊಳ್ಳೆ ಸಂಖ್ಯೆಯಲ್ಲಿ ವೃದ್ಧಿಸಿ, ಡೆಂಗ್ಯೂ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ. 

ಪ್ಲೇಟ್‌ಲೆಟ್ಸ್ ತುರ್ತಾಗಿ ಅಗತ್ಯವಿದ್ದಲ್ಲಿ 7878782020 ಕರೆ ಮಾಡಿ, ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.