Asianet Suvarna News Asianet Suvarna News

ಪ್ರಸ್ತುತ ಭಾರತವನ್ನು ಭಾದಿಸುತ್ತಿದೆ ಈ ಕೀಟ..

ಮಲೇರಿಯಾ, ಡೆಂಗ್ಯೂನಂಥ ರೋಗಗಳಿಗೆ ಕಾರಣವಾಗುವ ಸೊಳ್ಳೆಯಿಂದ ಜನರು ರೋಸಿ ಹೋಗಿದ್ದಾರೆ. ಈ ಸಣ್ಣ ಕೀಟ ತರುವ ಸಂಕಷ್ಟ ಒಂದೆರಡಲ್ಲ. ಹಗಲು, ರಾತ್ರಿ ಎನ್ನದೇ ಸಕ್ರಿಯವಾಗಿರುವ ಈ ಸೊಳ್ಳೆ ಕೊಲ್ಲಲು ಮುಂದಾಗುವುದೇ ಬೆಸ್ಟ್ ಪರಿಹಾರ.

Home to dangerous insects that currenlty plague to India
Author
Bengaluru, First Published Oct 17, 2019, 2:09 PM IST

ಭಾರತವನ್ನು ಪ್ರಸ್ತುತ ಕಾಡುತ್ತಿರುವ ಮಾರಣಾಂತಿಕ ಕೀಟಗಳಲ್ಲಿ ಹೋಮೆಟೊ ಸಹ ಒಂದು. ಸಾಮಾನ್ಯವಾಗಿ ಡೆಂಗ್ಯೂ ಕಾಡುವ ಏಡಿಸ್ ಏಜೆಪ್ಟಿ ಬಗ್ಗೆ ಎಲ್ಲರಿಗೂ ಗೊತ್ತು. ಅದೂ ಅಲ್ಲದೇ ಈ ಸೊಳ್ಳೆ ಹೇಗೆ ಹುಟ್ಟಿಕೊಳ್ಳುತ್ತೆ, ಎಲ್ಲಿರುತ್ತೆ ಎಂಬುದನ್ನೂ ಎಲ್ಲರೂ ಬಲ್ಲರು. ಬೆಂಗಳೂರು ಒಂದರಲ್ಲಿಯೇ ಸುಮಾರು ಆರು ಸಾವಿರ ಮಂದಿ ಹಾಗೂ ಕರ್ನಾಟಕದಲ್ಲಿ 9300 ಜನ ಡೆಂಗ್ಯೂವಿನಿಂದ ಬಳಲುತ್ತಿರುವ ಕಾರಣ ಎಲ್ಲರೂ ಈ ಸೊಳ್ಳೆಗೆ ಭಯಭೀತರಾಗಿದ್ದಾರೆ. ಜನರು ಹೆಚ್ಚಿರುವ ಸ್ಥಳದಲ್ಲಿಯೇ ಈ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ ಎಂಬುವುದು ಭಯ ಪಡಬೇಕಾದ ವಿಷಯ.

ನೀರು ಸಾಗಿಸಲು ಪೈಪ್‌ಗಳಿಲ್ಲದ ಪ್ರದೇಶಗಳಲ್ಲಿ ಸೊಳ್ಳೆ ಉತ್ಪಾದನೆ ಹೆಚ್ಚು. ಅಲ್ಲಿಯೇ ಮೊಟ್ಟೆ ಇಟ್ಟು, ಸೊಳ್ಳೆಯಾಗುತ್ತದೆ. ಅಲ್ಲಲ್ಲಿ ನೀರು ನಿಂತ ಜಾಗದಲ್ಲಂತೂ ಸೊಳ್ಳೆ ಹೆಚ್ಚಾಗೋದು ಸಹಜ. ದೇಶದ ಎಲ್ಲ ನಗರ, ಪಟ್ಟಣಗಳಲ್ಲಿ ಸೂಕ್ತ ಪೈಪಿಂಗ್ ವ್ಯವಸ್ಥೆಗಳಿಲ್ಲ. ಬಹುತೇಕರು ಬಾವಿ, ಕೊಳ ಹಾಗೂ ಕೆರೆಗಳನ್ನೇ ನೀರಿಗಾಗಿ ಅವಲಂಬಿಸಿದ್ದಾರೆ. ಅಲ್ಲದೇ ನೀರನ್ನು ಶೇಖರಿಸಿಕೊಳ್ಳಲು ಕೃತಕ ಪಾತ್ರೆಗಳನ್ನು ಬಳಸುತ್ತಾರೆ. ಗಿಡ ಬೆಳೆಸಲು ಹೂವಿನ ಕುಡಿಕೆಗಳಿರುತ್ತವೆ. ಬೇಡವಾದ ಟೈರ್‌ಗಳನ್ನು ಅಲ್ಲಲ್ಲಿ ಎಸೆದಿರುತ್ತಾರೆ. ಒಡೆದ ಬಕೆಟ್, ತಂಬಿಗೆಗಳು, ಕಾಯಿ ಗರಟ, ಅಲಂಕಾರಿಕ ಕಾರಂಜಿ, ಮುಚ್ಚಳವಿಲ್ಲದ ನೀರಿನ ಟ್ಯಾಂಕ್‌ಗಳು, ಸರಾಗವಾಗಿ ನೀರು ಹರಿಯದ ಚರಂಡಿಗಳು...ಒಂದಾ, ಎರಡಾ? ಇವೆಲ್ಲವೂ ಸೊಳ್ಳೆ ಉತ್ಪತ್ತಿಯಾಗಲು ಹೇಳಿ ಮಾಡಿಸಿದಂತಿರುತ್ತವೆ. ಆದ್ದರಿಂದ ಎಲ್ಲಿ ನೋಡಿದರೂ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ.

ಸೊಳ್ಳೆಯಿಂದ ಮುತ್ತು ಕೊಡುವ ಮುನ್ನು ಅರಿತಿಕೊಳ್ಳಿ ಈ ಅಂಶವನ್ನು

ಸೂಕ್ತ ಪರಿಸರವಿದ್ದಾಗ ಸಹಜವಾಗಿಯೇ ಒಂದಿದ್ದ ಸೊಳ್ಳೆ ದ್ವಿಗುಣಗೊಳ್ಳುತ್ತವೆ. ಅದಕ್ಕೆ ಹೇಳುವುದು ಸುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡೆಂಗ್ಯೂ ಹಾಗೂ ಸೊಳ್ಳೆಯಿಂದ ಹರಡುವ ಇತರೆ ರೋಗಗಳ ಬಗ್ಗೆ ಜನರು ಜಾಗೃತರಾಗುವುದು ಬಹಳ ಮುಖ್ಯ.

ಪ್ರತಿಯೊಂದೂ ಸೊಳ್ಳೆಯೂ ಅಪಾಯಕಾರಿ. ಅದಕ್ಕೆ ಅದು ಅರಳುವ ಮುನ್ನವೇ ಮುಗಿಸಿ ಬಿಡಬೇಕು. ಸಮಯಕ್ಕೆ ಸರಿಯಾಗಿ ಸೊಳ್ಳೆಗಳನ್ನು ಕೊಲ್ಲದಿದ್ದರೆ, ಚಿಕನ್‌ಗುನ್ಯದಂಥ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡುವಂಥ ಮಾರಕ ರೋಗಗಳಿಗೂ ಕಾರಣವಾಗಬಲ್ಲದು. ಈ ರೋಗಗಳಿಂದ ವೈದ್ಯಕೀಯವಾಗಿ 15-20 ದಿನಗಳೊಳಗೆ ಮುಕ್ತರಾಗಬಹುದು. ಆದರೆ, ಸಂಪೂರ್ಣ ಸಹಜ ಜೀವನ ನಡೆಸಲು ಕಮ್ಮಿ ಎಂದರೆ ಮೂರು ತಿಂಗಳೇ ಬೇಕು.

ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ?

ಅದಕ್ಕೆ ಹೇಳುವುದು ಸೊಳ್ಳೆಗಳು ನಮ್ಮನ್ನು ಕೊಲ್ಲುವ ಮೊದಲು, ಅವನ್ನೇ ಮೊದಲು ನಾವು ಕೊಲ್ಲಬೇಕೆಂದು.

Follow Us:
Download App:
  • android
  • ios