ನಾನು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಗೊತ್ತಾಯ್ತಾ? ಹೆಲ್ಮೆಟ್ ಹಾಕಲ್ಲಾರಿ, ಫೈನ್ ಕಟ್ಟಲ್ಲಾರಿ, ನನ್ಗೂ ಗೊತ್ತಿದೆ ರೂಲ್ಸ್ ಎಂದು ಬೆಂಗಳೂರು ಪೊಲೀಸರಿಗೆ ಅವಾಜ್ ಹಾಕಿದ ನವೀನ್ ವಿರುದ್ಧ ದಂಡ ಮಾತ್ರವಲ್ಲ ಎಫ್ಐಆರ್ ಕೂಡ ದಾಖಲಾಗಿದೆ.
ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ.
ಆಗಸ್ಟ್ 15 ರಿಂದ ಹೊಸ ಫಾಸ್ಟ್ಯಾಗ್ ನಿಯಮ ಜಾರಿಯಾಗುತ್ತಿದೆ. ವಿಶೇಷ ಅಂದರೆ ಟೋಲ್ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವವರಿಗೆ ಗುಡ್ ನ್ಯೂಸ್. ವಾರ್ಷಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಹತ್ತು ಹಲವು ಪ್ರಯೋಜನ ನೀಡಲಾಗಿದೆ.
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಯನ್ನು ಹಲವರು ಅವಲಂಬಿಸಿದ್ದಾರೆ. ಆದರೆ ಸೋಮವಾರದಿಂದ ಬೆಂಗಳೂರು, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್ ಆಗಲಿದೆ. ಈ ಕುರಿತು ಸಲ್ಲಿಸಿದ್ದ ಅರ್ಜಿ ತಿರಿಸ್ಕರಿಸಿದ ಹೈಕೋರ್ಟ್, ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ಫಾಸ್ಟ್ಯಾಗ್ ಕಡ್ಡಾಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಫಾಸ್ಟ್ಯಾಗ್ ಕೆಲ ನಿಯಮಗಳು ಬಹುತೇಕರಿಗೆ ಗೊತ್ತಿಲ್ಲ. ಟೋಲ್ ಪ್ಲಾಜಾ ಬಳಿಕ ಸ್ಕ್ಯಾನ್ ಸಮಯ 10 ಸೆಕೆಂಡ್ ಮೀರುವಂತಿಲ್ಲ, ಇನ್ನು ಕ್ಯೂ ಕಿಲೋಮೀಟರ್ ಗಟ್ಟಲೇ ಇದ್ದರೆ ಪಾವತಿ ಮಾಡಬೇಕಿಲ್ಲ ಸೇರಿದಂತೆ ಹಲವು ಗೊತ್ತಿಲ್ಲದ ನಿಯಮಗಳು ಇಲ್ಲಿವೆ.
ಬೆಂಗಳೂರು ಟ್ರಾಫಿಕ್ ನಿಯಮಗಳು ಕಠಿಣಗೊಳ್ಳುತ್ತಿದೆ. ತಪ್ಪು ಯಾರೇ ಮಾಡಿದರೂ ದಂಡ ಖಚಿತ. ಇದೀಗ ಹೆಲ್ಮೆಟ್ ಧರಿಸದೆ ಬೈಕ್ ಹಿಂಬದಿ ಸವಾರರಾಗಿ ತೆರಳಿದ ಟ್ರಾಫಿಕ್ ಪೊಲೀಸ್ಗೆ ದಂಡ ಹಾಕಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ದಂಡ ವಿಧಿಸಲಾಗಿದೆ.
ದೇಶದ ವಾಹನ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಟಾಟಾ ತನ್ನ ‘ಆಲ್ಟ್ರೋಜ್’ ಮಾದರಿಯ ಕಾರನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ.
ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟಪ್ ಕಂಪನಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ಆಧರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ದೇಶದ ಸಂಚಾರಿ ವ್ಯವಸ್ಥೆಗೆ ಅನುಗುಣವಾಗಿ ಈ ಕಾರು ಓಡುವುದು ವಿಶೇಷ.
ಕಾರ್ಪೋರೇಶನ್ನಿಂದ ಪಾರ್ಕಿಂಗ್ ಸರ್ಟಿಫಿಕೇಟ್ ಮಾಡಿಸಿಕೊಂಡು ನೀಡಿದರೆ ಮಾತ್ರ ಹೊಸ ಕಾರಿನ ರಿಜಿಸ್ಟ್ರೇಶನ್ ಆಗಲಿದೆ. ಪಾರ್ಕಿಂಗ್ ಇಲ್ಲಾ ಅಂದರೆ ಹೊಸ ಕಾರು ಖರೀದಿಸಲು ಸಾಧ್ಯವಿಲ್ಲ. ಟ್ರಾಫಿಕ್ ಸಮಸ್ಯೆ, ರಸ್ತೆಯಲ್ಲಿ ಪಾರ್ಕ್ ಮಾಡುವ ಸಮಸ್ಯೆಗೆ ಅಂತ್ಯಹಾಡಲು ಹೊಸ ನಿಯಮ ಜಾರಿಯಾಗುತ್ತಿದೆ.
ಭಾರತದ ಮೊದಲ ಹೈಡ್ರೋಜನ್ ಟ್ರಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಅದಾನಿ ಗ್ರೂಪ್ ಈ ಟ್ರಕ್ ಬಿಡುಗಡೆ ಮಾಡಿದೆ. ಗಣಿಗಾರಿಕೆ ಸಾಗಣೆಗೆ ಉಪಯೋಗವಾಗಲಿರುವ ಈ ಟ್ರಕ್, ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿ, ದಕ್ಷತೆಯ ಈ ಹೈಡ್ರೋಜನ್ ಟ್ರಕ್ ಹೊಸ ಸಾಧನೆ.