ನಿಮ್ಮ ವಾಹನದ ಮೇಲಿದೆಯಾ ಟ್ರಾಫಿಕ್ ಫೈನ್, ಇಂದು ಪಾವತಿಸಿದರೆ ಡಿಸ್ಕೌಂಟ್ ಆಫರ್ ಸಿಗಲಿದೆ. ಭರ್ಜರಿ ಶೇಕಡಾ 50 ರಷ್ಟು ಡಿಸ್ಕೌಂಟ್ ಸಿಗಲಿದೆ. ಭರ್ಜರಿ ಆಫರ್ ಇಂದು ಅಂತ್ಯಗೊಳ್ಳುತ್ತಿದೆ.
ಬೆಂಗಳೂರು (ಸೆ.12) ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ದಂಡಕ್ಕೆ ಶೇಕಡಾ 50 ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಇಂದು (ಸೆ.12) ಈ ಆಫರ್‌ಗೆ ಕೊನೆಯ ದಿನ. ಹಳೇ ಪ್ರಕರಣಗಳ ಇತ್ಯರ್ಥಗೊಳಿಸಲು ಸರ್ಕಾರ ಶೇಕಡಾ 50 ರಷ್ಟು ಡಿಸ್ಕೌಂಟ್ ಆಫರ್ ನೀಡಲಾಗಿತ್ತು. ಆಗಸ್ಟ್ 23ರಿಂದ ಈ ಡಿಸ್ಕೌಂಟ್ ಆಫರ್ ಆರಂಭಗೊಂಡಿತ್ತು. ಇಂದಿಗೆ ಕೊನೆಗೊಳ್ಳುತ್ತಿದೆ. ನಿಮ್ಮ ವಾಹನದ ಮೇಲಿರುವ ದಂಡದ ಅರ್ಧ ಪಾವತಿಸಿದರೆ ಸಾಕು. ಈ ಅವಕಾಶ ಬಳಸಿಕೊಂಡು ಹಲವರು ದಂಡ ಪಾವತಿಸಿದ್ದಾರೆ. ಇದುವರೆಗೆ ಸರಿಸುಮಾರು 80 ಕೋಟಿ ರೂಪಾಯಿ ಸಂಗ್ರಹವಾಗಿದೆ.
21 ದಿನಗಳ ಕಾಲ ಆಫರ್
ಬೆಂಗಳೂರು ಸಂಚಾರಿ ವ್ಯಾಪ್ತಿಯಲ್ಲಿ ಉಲ್ಲಂಘಿಸಿ ಟ್ರಾಫಿಕ್ ನಿಯಮಗಳ ದಂಡ ಪಾವತಿಗೆ ಸರ್ಕಾರ 21 ದಿನಗಳ ಆಫರ್ ನೀಡಿತ್ತು. ಶೇಕಡಾ 50 ರಷ್ಟು ಪಾವತಿಸುವ ಮೂಲಕ ಟ್ರಾಫಿಕ್ ದಂಡದಿಂದ ಮುಕ್ತರಾಗುವ ಅವಕಾಶ ನೀಡಲಾಗಿತ್ತು. ಇಲ್ಲಿವರೆಗೆ 28.84 ಲಕ್ಷ ಪ್ರಕರಣಗಳು ಇತ್ಯರ್ಥಗೊಳಿಸಿ ಬೆಂಗಳೂರಲ್ಲಿ ಸುಮಾರು 80.78 ಕೋಟಿ ರೂ ದಂಡ ಸಂಗ್ರಹ ಮಾಡಲಾಗಿದೆ.
ಸುರಂಗ ರಸ್ತೆ ಮಾತ್ರವಲ್ಲ ಬೆಂಗಳೂರಿನಲ್ಲಿ ಮುಂದೆ ನಿರ್ಮಾಣ ಮಾಡಲಿರುವ ಎಲ್ಲಾ ರಸ್ತೆ, ಫ್ಲೈಓವರ್‌ಗಳಿಗೂ ಟೋಲ್!
ದುಬಾರಿ ಮೊತ್ತ ಬಾಕಿ ಉಳಿಸಿಕೊಂಡಿದ್ದ ಹಲವರು ನಿರಾಳ
ಸ್ಕೂಟರ್ ಸೇರಿ ಹಲವು ವಾಹನಳ ಮಾಲೀಕರು ದುಬಾರಿ ದಂಡ ಬಾಕಿ ಉಳಿಸಿಕೊಂಡಿದ್ದರು. ಆಫರ್‌ನಿಂದ ಹಲವು ಮಾಲೀಕರು ದಂಡ ಪಾವತಿಸಿದ್ದಾರೆ. ದಾಖಲೆ ಮೊತ್ತದ ದಂಡಗಳು ಪಾವತಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ಹದ್ದಿನ ಕಣ್ಣು
ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಟ್ರಾಫಿಕ್ ನಿಯಮ ಪಾಲಿಸದೆ ವಾಹನ ಚಲಾಯಿಸುವ ಮಾಲೀಕರಿಗೆ ದುಬಾರಿ ದಂಡ ಹಾಕಲಾಗುತ್ತದೆ. ಎಲ್ಲೆಡೆ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಸಣ್ಣ ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚಲಾಗುತ್ತದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದವರಿಗೆ ಚಲನ್ ಜಾರಿಗೊಳಿಸಲಾಗುತ್ತಿದೆ. ಪ್ರತಿ ದಿನ ಬೆಂಗಳೂರಲ್ಲಿ ಸರಾಸರಿ 30 ಸಾವಿರ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗುತ್ತಿದೆ.
ಸಿಗ್ನಲ್, ಒನ್ ವೇ ಸೇರಿದಂತೆ ಹಲವೆಡೆ ಎಐ ಕ್ಯಾಮೆರಾ ಅಳವಡಿಸಲಾಗಿದೆ. ಬೆಂಗಳೂರಿನ ಅತ್ಯಾಧುನಿಕ ಟ್ರಾಫಿಕ್ ಮ್ಯಾನೇಜ್ಮೆಂಟ್ ಕೊಠಡಿಯಲ್ಲಿ ಇಡೀ ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲಾಗುತ್ತದೆ. ಇದೇ ವೇಳೆ ಯಾರೇ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಎಐ ಕ್ಯಾಮೆರಾ ಸೆರೆ ಹಿಡಿದು ವಿವರ ಸಮೇತ ಕಳುಹಿಸಲಿದೆ.
ಸಿಎಂ ಬಳಿಕ ಗೃಹ ಸಚಿವ ಪರಮೇಶ್ವರ್ ಕಾರಿಗೂ ಟ್ರಾಫಿಕ್ ದಂಡ; ರಿಯಾಯಿಯಲ್ಲಿ 4,500 ರೂ. ಪಾವತಿ!
