ಅಕ್ಟೋಬರ್ 2ರ ವಿಜಯದಶಮಿ ದಿನ ಈ ಶುಭ ಮುಹೂರ್ತದಲ್ಲಿ ವಾಹನ ಖರೀದಿಸಿ
ಅಕ್ಟೋಬರ್ 2ರ ವಿಜಯದಶಮಿ ದಿನ ಈ ಶುಭ ಮುಹೂರ್ತದಲ್ಲಿ ವಾಹನ ಖರೀದಿಸಿ, ಕಾರು ಬೈಕ್, ಸ್ಕೂಟರ್ ಸೇರಿದಂತೆ ವಾಹನ ಖರೀದಿಸಲು ಉತ್ತಮ ಸಮಯ ಮಿಸ್ ಮಾಡಿಕೊಳ್ಳಬೇಡಿ. ಈ ಸಮಯದಲ್ಲಿ ವಾಹನ ಖರೀದಿಸಿದರೆ ಜೀವನದಲ್ಲಿ ಎಲ್ಲವೂ ಶುಭವಾಗಲಿದೆ ಅನ್ನೋ ನಂಬಿಕೆ ಇದೆ.

ವಿಜಯದಶಮಿಗೆ ಇದೆ ಶುಭ ಮುಹೂರ್ತ
ವಿಜಯದಶಮಿಗೆ ಇದೆ ಶುಭ ಮುಹೂರ್ತ
ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅಕ್ಟೋಬರ್ 2ರಂದು ವಿಜಯದಶಮಿ. ದಸರಾ ಹಬ್ಬದ ಕೊನೆಯ ದಿನ. ಈ ಬಾರಿ ವಿಜಯದಶಮಿ ಹಲವು ವಿಶೇಷತೆಗಳಿವೆ. ಕರ್ನಾಟಕದಲ್ಲಿ ದಸರಾ ಹಬ್ಬವನ್ನು ಅತೀವ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶ ವಿದೇಶಗಳಲ್ಲೂ ದಸರಾ ಹಬ್ಬದ ಸಂಬ್ರಮ ಕಳೆಗಟ್ಟಿದೆ. ಈ ವಿಶೇಷ ಸಂದರ್ಭದಲ್ಲಿ ಹೊಸ ವಾಹನ ಖರೀದಿಸಲು, ವಾಹನ ಡೆಲಿವರಿ ಪಡೆದುಕೊಳ್ಳಲು ಉತ್ತಮ ಸಮಯವಾಗಿದೆ.
ಹಲವು ಆಫರ್, ಜಿಎಸ್‌ಟಿ ಕಡಿತ, ಶುಭ ಮುಹೂರ್ತ
ಹಲವು ಆಫರ್, ಜಿಎಸ್‌ಟಿ ಕಡಿತ, ಶುಭ ಮುಹೂರ್ತ
ಈ ಬಾರಿಯ ನವರಾತ್ರಿಗೆ ವಾಹನ ಖರೀದಿ ಬಲು ಜೋರಾಗಿದೆ. ಹಲವು ಬ್ರ್ಯಾಂಡ್ ದಾಖಲೆ ಬರೆದಿದೆ. ಶುಭ ಮುಹೂರ್ತ, ಜಿಎಸ್‌ಟಿ ಕಡಿತ, ಹಬ್ಬದ ಆಫರ್ ಸೇರಿದಂತೆ ಹಲವು ಕಾರಣಗಳಿಂದ ವಾಹನ ಖರೀದಿ ದಾಖಲೆ ಬರೆದಿದೆ. ಅಕ್ಟೋಬರ್ 2 ರಂದು ವಾಹನ ಖರೀದಿ ಅಥವಾ ಡೆಲಿವರಿ ಪಡೆದುಕೊಳ್ಳುವುದಿದ್ದರೆ ಶುಭ ಮುಹೂರ್ತದಲ್ಲಿ ಮಾಡಿ.
ಅಕ್ಟೋಬರ್ 2ರ ಶುಭ ಘಳಿಗೆ
ಅಕ್ಟೋಬರ್ 2ರ ಶುಭ ಘಳಿಗೆ
ಅಕ್ಟೋಬರ್ 2ರ ವಿಜಯದಶಮಿ ದಿನ ವಾಹನ ಖರೀದಿ, ಡೆಲಿವರಿ, ಬುಕಿಂಗ್ ಮಾಡಲು ಬೆಳಗ್ಗೆ 9.13ರಿಂದ ಮರು ದಿನ ಬೆಳಗ್ಗೆ ಅಂದರೆ ಅಕ್ಟೋಬರ್ 2ರ ಬೆಳಗ್ಗೆ 6.15ರ ವರೆಗೆ ಉತ್ತಮ ಸಮಯವಿದೆ. ನಿಮ್ಮ ನಕ್ಷತ್ರ, ಪಂಚಾಂಗಕ್ಕೆ ಅನುಗುಣವಾಗಿ ಉತ್ತಮ ಸಮಯದಲ್ಲಿ ವಾಹನ ಖರೀದಿ ಮಾಡಬಹುದು.
ಅಕ್ಟೋಬರ್ ತಿಂಗಳಲ್ಲಿದೆ ಇದೆ ಹಲವು ಮುಹೂರ್ತ
ಅಕ್ಟೋಬರ್ ತಿಂಗಳಲ್ಲಿದೆ ಇದೆ ಹಲವು ಮುಹೂರ್ತ
ಅಕ್ಟೋಬರ್ ತಿಂಗಳಲ್ಲಿ ವಿಜಯದಶಮಿ ದಿನ ವಾಹನ ಖರೀದಿ ವಿಶೇಷ ಹಾಗೂ ಉತ್ತಮವಾಗಿದೆ. ಇದರ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಹಲವು ಶುಭ ಘಳಿಕೆಗಳಿವೆ. ಅಕ್ಟೋಬರ್ 3ರ ಶುಕ್ರವಾರ ಬೆಳಗ್ಗೆ 6.15ರಿಂದ ಸಂಜೆ 6.32ರ ವರೆಗೆ ಉತ್ತಮ ಸಮಯವಾಗಿದೆ. ಅಕ್ಟೋಬರ್ 4ರಂದು ಬೆಳಗ್ಗೆ 6.16ರಿಂದ ಬೆಳಗ್ಗೆ 8.01ರ ವರೆಗೆ ಶುಭ ಘಳಿಗೆ ಇದೆ. ಅಕ್ಟೋಬರ್ 31ರ ವರೆಗೂ ಹಲವು ದಿನಗಳು ವಾಹನ ಖರೀದಿಗೆ ಉತ್ತಮವಾಗಿದೆ.
ಹಬ್ಬದ ಆಫರ್
ಹಬ್ಬದ ಆಫರ್
ಈ ಬಾರಿಯ ನವರಾತ್ರಿ ಹಬ್ಬ ವಾಹನ ಖರೀದಿ ಭಾರಿ ವಿಶೇಷವಾಗಿತ್ತು. ಪ್ರಮುಖವಾಗಿ ಜಿಎಸ್‌ಟಿ ಕಡಿತದಿಂದ ಕಡಿಮೆ ಬೆಲೆಗೆ ವಾಹನಗಳು ಲಭ್ಯವಿತ್ತು. ಇತ್ತ ಹಬ್ಬದ ಆಫರ್ ಸೇರಿದಂತೆ ಹಲವು ಆಫರ್ ಕೂಡ ಲಭ್ಯವಿತ್ತು. ಹೀಗಾಗಿ ಜನರು ವಾಹನ ಖರೀದಿಗೆ ಮುಗಿಬಿದ್ದಿದ್ದಾರೆ. ಉತ್ತಮ ಆಫರ್ ಮೂಲಕ ವಾಹನ ಖರೀದಿಸುತ್ತಿದ್ದಾರೆ.
ದೀಪಾವಳಿ ಆಫರ್
ದೀಪಾವಳಿ ಆಫರ್
ದೀಪಾವಳಿ ಹಬ್ಬಕ್ಕೂ ವಾಹನ ಮಾರಾಟದಲ್ಲಿ ದಾಖಲೆ ಬರೆಯುವ ಸಾಧ್ಯತೆ ಇದೆ. ಪ್ರಮುಖವಾಗಿ ಕಂಪನಿಗಳು ಹಲವು ಆಫರ್ ಘೋಷಿಸುವ ಸಾಧ್ಯತೆ ಇದೆ. ಜೊತೆಗೆ ಜಿಎಸ್‌ಟಿ ಲಾಭವೂ ಗ್ರಾಹಕರಿಗೆ ಸಿಗುವ ಕಾರಣ ಕಾರುಗಳ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಕಡಿಮೆ ಬೆಲೆಯಲ್ಲಿ ಕಾರು ಖರೀದಿ ಸಾಧ್ಯವಾಗಲಿದೆ.