ಟಾಟಾ ಮೋಟಾರ್ಸ್‌ನಿಂದ ಜಿಎಸ್‌ಟಿ ಜೊತೆ ಹಬ್ಬದ ಆಫರ್, ಏಸ್ ಪ್ರೋ ಆರಂಭಿಕ ಬೆಲೆ 3.67 ಲಕ್ಷ ಸಾಲು ಸಾಲು ಹಬ್ಬದ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್ ಭರ್ಜರಿ ಆಫರ್ ಘೋಷಿಸುತ್ತಿದೆ.   ಇದರ ಪರಿಣಾಮ ಕೇವಲ 3.67 ಲಕ್ಷ ರೂಗೆ ಏಸ್ ಪ್ರೋ ಲಭ್ಯವಿದೆ.

ಬೆಂಗಳೂರು (ಸೆ.14) ಕೇಂದ್ರ ಸರ್ಕಾರ ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಕಡಿತ ಮಾಡುತ್ತಿದೆ. ಇದರಿಂದ ಕಾರು, ಬೈಕ್ ಸೇರಿದಂತೆ ಹಲುವ ವಸ್ತುಗಳ ಬೆಲೆ ಭಾರಿ ಇಳಿಕೆಯಾಗಲಿದೆ. ಶೇಕಡಾ 28 ರಿಂದ 18 ಹಾಗೂ ಶೇಕಡಾ 5 ಕ್ಕೆ ಇಳಿಕೆಯಾಗುತ್ತಿದೆ. ಕೇಂದ್ರದ ಈ ನಿರ್ಧಾರದ ಬೆನ್ನಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಕಾರು, ಬೈಕ್ ಬೆಲೆ ಇಳಿಕೆ ಮಾಡಿದೆ. ಇದೀಗ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಹಬ್ಬದ ಪ್ರಯುಕ್ತ ಜಿಎಸ್‌ಟಿ ಪ್ರಯೋಜವನ್ನು ಗ್ರಾಹಕರಿಗೆ ಮುಂಚಿವಾಗಿ ಟಾಟಾ ಮೋಟಾರ್ಸ್ ನೀಡುತ್ತಿದೆ. ಇದರ ಪರಿಣಾಮ ಟಾಟಾ ಎಸ್ ಪ್ರೋ ಬೆಲೆ ಕೇವಲ 3.67 ಲಕ್ಷ ರೂಪಾಯಿ ಮಾತ್ರ (ಆರಂಭಿಕ ಬೆಲೆ )

ಪೂರ್ಣ ಜಿಎಸ್‌ಟಿ ಲಾಭ ಗ್ರಾಹಕರಿಗೆ

ಪೂರ್ಣ ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದರ ಜೊತೆಗೆ ಕಂಪನಿಯು ಈಗ ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಏಸ್, ಏಸ್ ಪ್ರೊ, ಇಂಟ್ರಾ ಮತ್ತು ಯೋಧಾದ ಡೀಸೆಲ್, ಪೆಟ್ರೋಲ್ ಮತ್ತು ದ್ವಿ-ಇಂಧನ ರೂಪಾಂತರಗಳ ಮೇಲೆ 32 ಇಂಚಿನ ಎಲ್‌ಇಡಿ ಟಿವಿ ಉಡುಗೊರೆ ಮತ್ತು ₹65,000 ವರೆಗಿನ ಹೆಚ್ಚುವರಿ ಗ್ರಾಹಕ ಲಾಭಗಳನ್ನು ಒದಗಿಸಲು ಮುಂದಾಗಿದೆ. ಈ ಆಫರ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಿದೆ.

ಹ್ಯುಂಡೈ ಕಾರು ಬೆಲೆ ಭಾರಿ ಇಳಿಕೆ; ಕ್ರೆಟಾ ಸೇರಿ ವಾಹನ ಬೆಲೆ ಗರಿಷ್ಠ 2.4 ಲಕ್ಷ ರೂ ಕಡಿತ

ಈ ಸೀಮಿತ ಅವಧಿಯ ಆಫರ್ 22 ಸೆಪ್ಟೆಂಬರ್ 2025 ರವರೆಗೆ ಬುಕಿಂಗ್ ಮಾಡಿದವರಿಗೆ ಮತ್ತು 30 ಸೆಪ್ಟೆಂಬರ್ 2025 ರೊಳಗೆ ವಾಹನ ಡೆಲಿವರಿ ದೊರೆತವರಿಗೆ ಮಾತ್ರ ಲಭ್ಯವಿರುತ್ತದೆ. ಇದರ ಜೊತೆಗೆ, ಹೊಸದಾಗಿ ಬಿಡುಗಡೆಯಾದ ಏಸ್ ಪ್ರೊ ಈಗ ಕೇವಲ ₹3.67 ಲಕ್ಷ ಆರಂಭಿಕ ಬೆಲೆಯಲ್ಲಿ ದೊರೆಯಲಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಈ ಮೂಲಕ ಸಂಸ್ಥೆಯು ಉದ್ಯಮಿಗಳಿಗೆ ಟಾಟಾ ವಾಹನದೊಂದಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಸುಲಭವಾಗಿಸುತ್ತದೆ.

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಬೆಲೆ

* ಗ್ರಾಹಕರು ತಮ್ಮ ಆಯ್ಕೆಯ ವಾಹನ ರೂಪಾಂತರದ ನಿಖರ ಬೆಲೆಯನ್ನು ಅಧಿಕೃತ ಟಾಟಾ ಮೋಟಾರ್ಸ್ ಶೋರೂಮ್‌ನಿಂದ ಖಚಿತಪಡಿಸಿಕೊಂಡು, ಆಫರ್ ಅವಧಿಯಲ್ಲಿ ಡೆಲಿವರಿ ಪಡೆಯಲು ಮುಂಚಿತವಾಗಿ ಬುಕ್ ಮಾಡಬಹುದು.

ಟಾಟಾ ವಾಣಿಜ್ಯ ವಾಹನ ಬೆಲೆ (ಸೆಪ್ಟೆಂಬರ್ 22 ರಿಂದ) ಎಕ್ಸ್ ಶೋ ರೂಂ

  • ಏಸ್ ಪ್ರೋ : 3,67,000 ರೂಪಾಯಿ ( ಆರಂಭಿಕ ಬೆಲೆ)
  • ಏಸ್ : 4,42,000 ರೂಪಾಯಿ( ಆರಂಭಿಕ ಬೆಲೆ)
  • ಇಂಟ್ರಾ: 7,41,00 ರೂಪಾಯಿ( ಆರಂಭಿಕ ಬೆಲೆ)
  • ಯೋಧಾ : 9,16,00 ರೂಪಾಯಿ ( ಆರಂಭಿಕ ಬೆಲೆ)

ಸ್ವಿಫ್ಟ್ ನಿಂದ ವರ್ಟಸ್, Brezza, XUV700, ಇನ್ನೋವಾ ವರೆಗೆ: ಎಷ್ಟು ಅಗ್ಗದಲ್ಲಿ ಈ ಕಾರ್‌ಗಳು ಸಿಗುತ್ತವೆ ಅನ್ನೋದನ್ನ ನೋಡಿ!