Asianet Suvarna News Asianet Suvarna News

ಮೊದಲ ಋತುಸ್ರಾವವನ್ನ ತಪ್ಪಾಗಿ ತಿಳಿದ ಅಣ್ಣನಿಂದ ತಂಗಿಯ ಭೀಕರ ಹತ್ಯೆ

ಮುಟ್ಟಿನ ಬಗ್ಗೆ ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ತಿಳಿದಿರಬೇಕಾದುದು ಅಗತ್ಯವಾಗಿದೆ. ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲದ ಕಾರಣ, ಮುಂಬೈನಲ್ಲಿ ಒಂದೆಡೆ ಅಣ್ಣನೊಬ್ಬ ತನ್ನ ತಂಗಿಯನ್ನೇ ಕೊಂದಿದ್ದಾನೆ.

Mumbai Youth Kills Sister After Mistaking Blood Stains of Her First Period Vin
Author
First Published May 10, 2023, 11:14 AM IST

ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ 30 ವರ್ಷದ ಯುವಕನೊಬ್ಬ ತನ್ನ 12 ವರ್ಷದ ಸಹೋದರಿ ಯಾರೊಂದಿಗೋ  ದೈಹಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಕೊಲೆ ಮಾಡಿದ್ದಾನೆ. ಸಹೋದರಿಯ ಡ್ರೆಸ್‌ನಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ನಂತರ ಆಕೆ ಯಾರೊಂದಿಗೋ ದೈಹಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಕೊಂದಿದ್ದಾನೆ. ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಉಲ್ಲಾಸನಗರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಹುಡುಗಿಗೆ (Girl) ಕೆಲವು ದಿನಗಳ ಹಿಂದೆ ಋತುಸ್ರಾವ ಆರಂಭವಾಗಿದೆ. ಆದರೆ ಅವಳಿಗೆ ಆ ಬಗ್ಗೆ ಏನೂ ಗೊತ್ತಿರದ ಕಾರಣ ಬಟ್ಟೆಯ ಮೇಲೆ ರಕ್ತದ ಕಲೆಗಳು ಗೋಚರಿಸುತ್ತಿದ್ದವು. ಇದನ್ನು ಗಮನಿಸಿದ ಆಕೆಯ ಅಣ್ಣ ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದಾನೆ. ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದ ಬಾಲಕಿಗೆ ಋತುಚಕ್ರದ (Menstruation) ಬಗ್ಗೆ ತಿಳಿದಿಲ್ಲದ ಕಾರಣ ರಕ್ತಸ್ರಾವ (Bleeding) ಕಾರಣವನ್ನು ವಿವರಿಸಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಿಗೆದ್ದ ಅಣ್ಣ (Brother) ಆಕೆ ಯಾರೊಂದಿಗೋ ಸಂಭೋಗ ನಡೆಸಿದ್ದಾಳೆ ಎಂದು ಆರೋಪಿಸಿದ್ದಾನೆ. ಆಕೆಯ ಬಾಯಿ, ಬೆನ್ನು ಮತ್ತು ದೇಹದ (Body) ಇತರ ಭಾಗಗಳ ಮೇಲೆ ಇಕ್ಕಳದಿಂದ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Women Health: ಮುಟ್ಟಿನ ವೇಳೆ ಐದಕ್ಕಿಂತ ಹೆಚ್ಚು ದಿನ ರಕ್ತಸ್ರಾವವಾಗುತ್ತಾ?

ವಿಪರೀತ ಗಾಯಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಕೆ ಸತ್ತಿದ್ದಾಳೆ ಎಂದು ಅಧಿಕಾರಿಗಳು ಘೋಷಿಸಿದರು. ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಈ ಗುಟ್ಟು!
ಯಾವುದೇ ವಿಷಯದ ಕುರಿತು ಉತ್ತಮ ಮಾಹಿತಿ ಇದ್ದಾಗ ಅದರ ಕುರಿತ ಕೆಟ್ಟ ಕುತೂಹಲ, ಕಲ್ಪನೆಗಳು, ಕಳಂಕಗಳು ದೂರಾಗುತ್ತವೆ. ಹೆಣ್ಣುಮಕ್ಕಳಿಗೆ ಪೀರಿಯಡ್ಸ್‌ಗೆ ಹೇಗೆ ಮಾನಸಿಕವಾಗಿ ತಯಾರು ಮಾಡುತ್ತೀರೋ, ಗಂಡುಮಕ್ಕಳನ್ನು ಕೂಡಾ ಆ ಕುರಿತು ಉತ್ತಮ ರೀತಿಯಲ್ಲಿ ವರ್ತಿಸುವಂತೆ, ತನ್ನ ಗೆಳತಿಯನ್ನು, ಆಕೆಯ ದೇಹದ ಬದಲಾವಣೆಗಳನ್ನು ಗೌರವಿಸುವಂತೆ, ಅದೊಂದು ಸಾಮಾನ್ಯ ಸಂಗತಿಯೆಂಬಂತೆ ಅರಿವು ಮೂಡಿಸಿ ಬೆಳೆಸುವುದು ಅಗತ್ಯ.

ಸಾಮಾನ್ಯವಾಗಿ ಹುಡುಗಿಯರು 10ನೇ ವಯಸ್ಸಿನ ಬಳಿಕ ಯಾವಾಗಾದರೂ ಮೊದಲ ಬಾರಿ ಮುಟ್ಟಾಗಬಹುದು. ಅದೇ ವಯಸ್ಸು ಮಗನಿಗೆ ಈ ವಿಷಯದ ಕುರಿತು ತಿಳಿ ಹೇಳಲು ಸರಿಯಾದ ಸಮಯ. ಏಕೆಂದರೆ, ಆತನ ತರಗತಿಯಲ್ಲಿ ಅವನದೇ ವಯಸ್ಸಿನ ಹುಡುಗಿಯರಿರುತ್ತಾರೆ. ಅವರ ದೇಹದ ಬದಲಾವಣೆಗಳನ್ನು ಈತ ಗೌರವದಿಂದ ಸಾಮಾನ್ಯವೆಂಬಂತೆ ಕಾಣುವ ಅಗತ್ಯ ಇರುತ್ತದೆ. ಇದಕ್ಕಾಗಿ ಮಗ 5 ಅಥವಾ 6ನೇ ತರಗತಿಯಲ್ಲಿರುವಾಗಲೇ ಅವನಿಗೆ ಪೀರಿಯಡ್ಸ್ ಕುರಿತು ತಿಳಿವಳಿಕೆ ನೀಡಲು ಶುರು ಮಾಡಬೇಕು. 

Women Health : ಯಾಕೆ ಕೆಲ ಮಹಿಳೆಯರಿಗೆ ಬೇಗ ಮುಟ್ಟು ನಿಲ್ಲುತ್ತೆ?

ಹೀಗೆ ಮಾಡಬಹುದು: ಮಗನೊಂದಿಗೆ ಟಿವಿ ನೋಡುತ್ತಾ ಕುಳಿತಾಗ ಸ್ಯಾನಿಟರ್ ಪ್ಯಾಡ್ ಕುರಿತ ಜಾಹಿರಾತು ಬರುತ್ತದೆಂದುಕೊಳ್ಳಿ. ವಿಷಯವನ್ನು ಮಾತಿಗೆಳೆಯಲು ಅದೇ ಸರಿಯಾದ ಸಂದರ್ಭ. ಅದು ಏನು, ಏಕೆ ಬಳಸುತ್ತಾರೆ ಕೇಳಿ. ಆತ ಉತ್ತರಕ್ಕಾಗಿ ತಡಬಡಿಸುತ್ತಿದ್ದಾಗ ನೀವೇ ವಿವರಿಸಿ. ಈ ಸಂದರ್ಭದಲ್ಲಿ ನೀವೇ ಮುಜುಗರ ಅನುಭವಿಸಿದರೆ, ಮಗನಿಗೆ ಇದೇನೋ ನಿಗೂಢ ವಿಷಯ ಅಥವಾ ಅವಮಾನಕಾರಿ ವಿಷಯ ಎನಿಸಬಹುದು. ಹಾಗಾಗಿ, ಆರಾಮಾಗಿ ಎಲ್ಲವನ್ನೂ ವಿವರಿಸಿ, ಆತ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ ಬನ್ನಿ. 

ಹೀಗೆ ಹೇಳಬಹುದು: ಹುಡುಗರು ಹದಿಹರೆಯ ತಲುಪಿದಾಗ ಹೇಗೆ ಧ್ವನಿ ಬದಲಾಗುತ್ತದೋ, ಹಾಗೆಯೇ ಹುಡುಗಿಯರು ಈ ವಯಸ್ಸಿಗೆ ಬಂದಾಗ ಅವರು ಮುಟ್ಟಾಗುತ್ತಾರೆ. ನಿನ್ನ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುವಂತೆಯೇ ಅವರ ದೇಹದಲ್ಲೂ ಆಗುತ್ತದೆ. ಅವರಿಗೆ ಬ್ಲೀಡಿಂಗ್ ಆಗಬಹುದು. ಮೊದಲ ಬಾರಿ ಹೀಗಾದಾಗ ಅವರ ಬಟ್ಟೆಯಲ್ಲಿ ಕಲೆ ಕಾಣಬಹುದು. ಆಗ ನೀನು ಅವಳನ್ನು ನೋಡಿ ನಗುವುದು, ದೂರವಿಡುವುದು ಮಾಡಕೂಡದು ಎಂದು ತಿಳಿಸಿ, ಆಕೆ ಅನುಭವಿಸುವ ಹೊಟ್ಟೆನೋವಿನಿಂದ ಹಿಡಿದು ಇತರೆ ಸಂಗತಿಗಳನ್ನು ವಿವರಿಸಿ.

Follow Us:
Download App:
  • android
  • ios