Asianet Suvarna News Asianet Suvarna News

ಸಟ್ಟಾ ಬಜಾರ್ ಬೆಟ್ಟಿಂಗ್ ಜಗತ್ತಿಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಯಾರಿಗೆ ಎಷ್ಟೆಷ್ಟು ಸ್ಥಾನ?

ಲೋಕಸಭಾ ಚುನಾವಣೆಯಲ್ಲಿಸಟ್ಟಾ ಬಜಾರ್ ಬೆಟ್ಟಿಂಗ್‌ನಲ್ಲಿ 15 ಸಾವಿರ ಕೋಟಿ ರೂಪಾಯಿ ವ್ಯವಹಾರ , ರೇವಣ್ಣ ಪ್ರಕರಣ ನಾಳೆ ವಿಚಾರಣೆಗೆ, ಎಡವಿತಾ ಎಸ್ಐಟಿ, ಮುಂದಿನ ಪ್ರಧಾನಿ ಅಮಿತ್ ಶಾ, ಮತ್ತೆ ಕೇಜ್ರಿವಾಲ್ ಗುಡುಗು ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಈ ಬಾರಿ ಲೋಕಸಭಾ ಚುನಾವಣೆಗೆ ಸಟ್ಟಾ ಬಜಾರ್ ಬೆಟ್ಟಿಂಗ್‌ನಲ್ಲಿ 15 ಸಾವಿರ ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ವರದಿಗಳು ಹೇಳುತ್ತಿದೆ. ಇದೀಗ ಸಟ್ಟಾ ಬಜಾರ್ ಯಾರು ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಅನ್ನೋದನ್ನು ಬಹಿರಂಗಪಡಿಸಿದೆ. ಚುನಾವಣಾ ಘೋಷಣೆಯಾದಾಗ ಬಿಜೆಪಿ 330 ಸ್ಥಾನದಲ್ಲಿತ್ತು ಎಂದು ಸಟ್ಟಾ ಬಜಾರ್ ಹೇಳಿತ್ತು. ಆದರೆ ಮೊದಲೆರಡು ಹಂತದ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆ ಗಣನೀಯ ಕುಸಿತ ಕಂಡಿತ್ತು. ಮೂರನೇ ಹಂತದ ಮತದಾನದ ಬಳಿಕ ಬಿಜೆಪಿ ಸಂಖ್ಯೆ 290 ರಿಂದ 295ಕ್ಕೆ ಸಟ್ಟಾ ಬಜಾರ್ ಇಳಿಸಿದೆ. ಇದೇ ವೇಳೆ ಕಾಂಗ್ರೆಸ್ 58 ರಿಂದ 62 ಸ್ಥಾನ ಗೆಲ್ಲಲಿದೆ ಎಂದು ಸಟ್ಟಾ ಬಜಾರ್ ಭವಿಷ್ಯ ನುಡಿದಿದೆ.