ಕಾಲೇಜು ಆಡಳಿತ ಮಂಡಳಿ ಕಿರುಕುಳ ಆರೋಪ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!
ಕಾಲೇಜು ಆಡಳಿತ ಮಂಡಳಿ ಕಿರುಕುಳ ಆರೋಪ; ಹಾಸನ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳುರಿನ ಹೊರವಲಯದ ಆನೇಕಲ್ ಬಳಿಯ ಬೆಂಗಳೂರು ಕಾಲೇಜು ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆನೇಕಲ್ (ಮೇ.17): ದಿನೇದಿನೆ ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ನಿನ್ನೆಯಷ್ಟೇ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಹಾಸ್ಟೆಲ್‌ನಲ್ಲಿ ಮತ್ತೊಬ್ಬಳು ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ಮೂಲದ ಹರ್ಷಿತಾ ನೇಣಿಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಆನೇಕಲ್ ತಾಲೂಕಿನ ಹಿಲೀಲಗೆ ಬಳಿಯಿರುವ 'ಬೆಂಗಳೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿನಿಯಾಗಿದ್ದ ಹರ್ಷಿತಾ. ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಹಪಾಠಿಗಳು ಆರೋಪಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸಾಕಷ್ಟು ದಿನದಿಂದ ವಿದ್ಯಾರ್ಥಿನಿ ಹರ್ಷಿತಾಗೆ ಕಿರುಕುಳ ನೀಡುತ್ತಿದ್ದರಂತೆ. ಹೀಗಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಲ್ಲದೇ ಆಡಳಿತ ಮಂಡಳಿ ವಿರುದ್ಧ ಕಾಲೇಜಿನ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ನರ್ಸಿಂಗ್ ಕೋರ್ಸ್ ಸೇರಿ ಫೋನಲ್ಲಿ ಬಿಝಿಯಾದ ಪತ್ನಿ: ಸಾಯ್ತಿನಿ ಅಂತ ಹೆದ್ರಿಸಕ್ಕೆ ಹೋಗಿ ಸತ್ತೇ ಹೋದ ಪತಿ
ವಿದ್ಯಾರ್ಥಿನಿಯರ ಆತ್ಮಹತ್ಯೆ ಹೆಚ್ಚಳ:
ಕಳೆದ ತಿಂಗಳಷ್ಟೇಎ ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಳು, ಎರಡು ದಿನಗಳ ಹಿಂದೆ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಪಿಇಎಸ್ ಕಾಲೇಜಿನಲ್ಲಿ ಐದನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಇದೀಗ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹರ್ಷಿತಾ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಆಡಳಿತ ಮಂಡಳಿ ವ್ಯವಸ್ಥೆ ಸರಿಯಿಲ್ಲ:
ಕಾಲೇಜಿನ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಚಕಾರ ಎತ್ತುವಂತಿಲ್ಲ. ಏನಾದರೂ ಪ್ರಶ್ನೆ ಮಾಡಿದ್ರೆ ಅಂದಿನಿಂದಲೇ ಆ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡ್ತಾರೆ. ಕುಡಿಯುವ ನೀರು, ಊಟ, ತಿಂಡಿ ಯಾವುದೂ ಸಮಯಕ್ಕೆ ಸರಿಯಾಗಿ ಸಿಗೋದಿಲ್ಲ. ಸ್ವಚ್ಛತೆ ಬಗ್ಗೆ ಯಾರೂ ಮಾತಾಡುವಂತಿಲ್ಲ, ಕೇಳುವಂತಿಲ್ಲ. ಅವರು ಕೊಟ್ಟಿದ್ದು ತಿಂದು ತೆಪ್ಪಗಿರಬೇಕು. ಇದು ಹೈಸ್ಕೂಲ್ ಪರಿಸ್ಥಿತಿಯಾದ್ರೆ, ಕಾಲೇಜಿನ ಪರಿಸ್ಥಿತಿ ಬೇರೆ ಇದೆ. ಸಬ್ಜೆಕ್ಟ್‌ವೈಸ್ ಲೆಕ್ಚರ್ಸ್ ಇಲ್ಲ, ಮೂರುನಾಲ್ಕು ಸಬ್ಜೆಕ್ಟ್‌ಗೆ ಒಬ್ಬರೇ ಲೆಕ್ಚರ್, ಶೇಕಡಾ 75% ಹಾಜರಾತಿ ಇದ್ದರೂ ಹೆಚ್‌ಓಡಿ ಕಿರಿಕ್ ಮಾಡ್ತಾರೆ. ವಿದ್ಯಾರ್ಥಿಗಳಿಗೆ ಬೈದು ಕಿರುಕುಳ ನೀಡ್ತಾರೆ. ಹಾಗಾಗಿ ಹೆಚ್‌ಓಡಿ ಭಾರತಿ ಎತ್ತಂಗಡಿ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ಹರ್ಷಿತಾಗೆ ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ರಾತ್ರಿ ಹರ್ಷಿತ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು. ಪಕ್ಕದ ಕೊಠಡಿಯಲ್ಲಿ ಪ್ರಗತಿ ಎಂಬ ವಿದ್ಯಾರ್ಥಿನಿ ಬಾಗಿಲು ತೆರೆದು ನೋಡಿದ್ದಾಳೆ. ಈ ಸಂದರ್ಭ ಹರ್ಷಿತಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ಕೊಠಡಿಯ ಬಾಗಿಲು ತೆರೆದು ರಕ್ಷಣೆ ಮಾಡಲು ಮುಂದಾಗಿದ್ದ ವಿದ್ಯಾರ್ಥಿನಿ. ಆದರೆ ಕೊಠಡಿ ಬಾಗಿಲು ತೆರೆದಿದ್ದು ಯಾಕೆ ಎಂದು ಹೆಚ್ಓಡಿ ಪ್ರಶ್ನೆ ಮಾಡಿದ್ದಾರೆ. ಹೆಚ್‌ಒಡಿ ಭಾರತಿ ಎಂಬಾಕೆ ವಿದ್ಯಾರ್ಥಿನಿ ಪ್ರಗತಿಗೆ ಅವಾಚ್ಯವಾಗಿ ಬೈದಿದ್ದಾಳೆ. ವಿದ್ಯಾರ್ಥಿನಿ ರಕ್ಷಣೆಗೆ ಹೋಗಿದ್ದೇ ತಪ್ಪಾಯ್ತಾ? ಎಂದು ವಿದ್ಯಾರ್ಥಿಗಳು ಭಾರತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹರ್ಷಿತಾ ಮೃತಪಟ್ಟ ವೇಳೆ ರಕ್ಷಣೆಗೆ ಹಾಸ್ಟೆಲ್‌ನಲ್ಲಿ ಯಾರೂ ಇರಲಿಲ್ಲ. ಕುಡಿಯುವ ನೀರು, ವಾರ್ಡನ್, ಆಯಾ ಯಾರೂ ಇರಲಿಲ್ಲ. ಹಾಸ್ಟೆಲ್ ಆಡಳಿತ ಮಂಡಳಿ ವ್ಯವಸ್ಥೆಯೇ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ಮಕ್ಕಳ ಜೀವದ ಜೊತೆಗೆ ಚೆಲ್ಲಾಟ
ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಮಾತುಕತೆ:
ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಮಣಿದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗಿರುವ ಸಿಸಿ ಕ್ಯಾಮೆರಾ ಸೌಲಭ್ಯ, ವಾರ್ಡನ್ ನೇಮಕಾತಿ, ಕುಡಿಯುವ ನೀರು ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ಒದಗಿಸಲು ಮತ್ತ HOD ಭಾರತಿ ಬದಲಾವಣೆಗೆ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಅಲ್ಲದೇ ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸುವ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡುವುದಿಲ್ಲ ಎಂದು ತಿಳಿಸಿದೆ. ಸದ್ಯ ಹರ್ಷಿತಾ ಆತ್ಮಹತ್ಯೆಗೆ ನಿಖರ ಕಾರಣಕ್ಕಾಗಿ ಸೂರ್ಯಸಿಟಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.