Women Health : ಯಾಕೆ ಕೆಲ ಮಹಿಳೆಯರಿಗೆ ಬೇಗ ಮುಟ್ಟು ನಿಲ್ಲುತ್ತೆ?
ಮುಟ್ಟು ನೈಸರ್ಗಿಕ ಕ್ರಿಯೆ. ತಿಂಗಳಿಗೊಮ್ಮೆ ಮುಟ್ಟಿನ ನೋವು ಅನುಭವಿಸುವ ಮಹಿಳೆಯರು ಮುಟ್ಟು ನಿಲ್ಲುವಾಗ್ಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದೈಹಿಕ ಸಮಸ್ಯೆ ಮಾತ್ರವಲ್ಲ ಮಾನಸಿಕ ಹಿಂಸೆ ಅವರನ್ನು ಕಾಡುತ್ತದೆ.
ಋತುಸ್ರಾವದ ಪ್ರಾರಂಭದ ಹಂತ ಹಾಗೂ ಹೊನೆಯ ಹಂತಗಳೆರಡೂ ಹೆಣ್ಣಿಗೆ ಸತ್ವಪರೀಕ್ಷೆ ಇದ್ದಂತೆಯೇ. ಎರಡೂ ಸಮಯದಲ್ಲಿ ಆಕೆ ಅನುಭವಿಸುವ ನೋವು ಹಾಗೂ ಮಾನಸಿಕ ತೊಂದರೆಗಳು ಆಕೆಗೆ ಮಾತ್ರ ಗೊತ್ತು. ಮುಟ್ಟು ಬಿಡುವ ಸಮಯದಲ್ಲಿ ಮತ್ತೆ ಮತ್ತೆ ಮೂಡ್ ಸ್ವಿಂಗ್ ಆಗುವುದು, ಯೋನಿಯ ಶುಷ್ಕತೆ, ಕಾಮಾಸಕ್ತಿಯ ಕೊರತೆ ಮುಂತಾದ ಸಮಸ್ಯೆಯನ್ನು ಮಹಿಳೆ ಎದುರಿಸುತ್ತಾಳೆ. ಸಾಮಾನ್ಯ 45 ವರ್ಷದ ನಂತರ ಎಲ್ಲ ಮಹಿಳೆಯರೂ ಅನುಭವಿಸಬೇಕಾದ ಅನುಭವಿಸುತ್ತಿರುವ ಪರಿಸ್ಥಿತಿ ಇದಾಗಿದೆ. ಕೆಲವರಿಗೆ ಮೆನೋಪಾಸ್ 40 ವರ್ಷಕ್ಕೂ ಮೊದಲೇ ಸಂಭವಿಸುತ್ತದೆ.
ಮೆನೋಪಾಸ್ (Menopause) ಮೊದಲೇ ಆಗಲು ಕಾರಣವೇನು? : ಇತ್ತೀಚೆಗೆ ಕೆಲವು ಮಹಿಳೆಯರಿಗೆ 40 ವರ್ಷ ಅಥವಾ ಅದಕ್ಕೂ ಮುನ್ನವೇ ರಜೋನಿವೃತ್ತಿ ಉಂಟಾಗುತ್ತಿದೆ. ಇದು ಮಹಿಳೆಯರಿಗೆ ಅಹಿತಕರ ಮತ್ತು ಅನಿರೀಕ್ಷಿತ ಅನುಭವವಾಗಿದೆ. ಹೀಗೆ ಅವಧಿಗೂ ಮುನ್ನವೇ ಋತುಬಂಧ ಸಂಭವಿಸುವುದಕ್ಕೂ ಹಲವು ಕಾರಣಗಳಿವೆ. ಮಹಿಳೆಯರ ಜೆನೆಟಿಕ್ಸ್ (Genetics), ವೈದ್ಯಕೀಯ ಪರಿಸ್ಥಿತಿಗಳಾದ ಕಿಮೊಥೆರಪಿ, ಅಂಡಾಶಯದ ಚಿಕಿತ್ಸೆ, ವಿಕಿರಣ ಎಂಡೊಮೆಟ್ರಿಯೊಸಿಸ್ ಗಳು ಕೂಡ ಮುಂಚಿತ ಮೆನೋಪಾಸ್ ಗೆ ಕಾರಣವಾಗಿದೆ. ಕೆಲವೊಮ್ಮೆ ಕೈಗಾರಿಕೆ, ಉದ್ಯಮಗಳಿಂದ ಹೊರಬರುವ ರಾಸಾಯನಿಕಗಳು ಕೂಡ ಅಕಾಲಿಕ ಋತುಬಂಧಕ್ಕೆ ಕಾರಣವಾಗಿದೆ. ಇದಲ್ಲದೇ ಎಂಡೋಕ್ರೈನ್ ನಂತಹ ಅಂತಃಸ್ರಾವಕ ವ್ಯವಸ್ಥೆಗಳು ಕೆಟ್ಟಾಗಲೂ ಅಕಾಲಿಕ ಮುಂಚಿತವಾಗಿ ಋತುಬಂಧವಾಗುತ್ತದೆ.
ಗರ್ಭಧಾರಣೆಯ ಯಾವ ವಾರದಲ್ಲಿ ಮಗು ತಾಯಿಯ ಧ್ವನಿ ಗುರುತಿಸುತ್ತೆ?
ಯೋನಿ (Vagina)ಯ ಶುಷ್ಕತೆಯ ಜೊತೆ ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಾಗುತ್ತೆ : ಅವಧಿಗೂ ಮುನ್ನ ಮೆನೋಪಾಸ್ ಸಂಭವಿಸುವುದರಿಂದ ಮಹಿಳೆಯರಲ್ಲಿ ಶಾರೀರಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ಮಹಿಳೆಯರಿಗೆ ಹೆಚ್ಚು ಸೆಕೆ, ರಾತ್ರಿಯಲ್ಲಿ ಬೆವರು, ಯೋನಿ ಶುಷ್ಕತೆ ಹಾಗೂ ಮೂಳೆಗಳು ಮುರಿಯುವ ಅಥವಾ ಬಿರುಕು ಬಿಡುವ (ಆಸ್ಟಿಯೊಪೊರೋಸಿಸ್) ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಭಾವನಾತ್ಮಕವಾಗಿ ಮಹಿಳೆಯರಿಗೆ ಚಿಂತೆ, ಡಿಪ್ರೆಶನ್ ಮುಂತಾದ ಅನುಭವಗಳಾಗುತ್ತವೆ.
ಋತುಬಂಧವನ್ನು ಮುಂದೂಡವುದು ಹೇಗೆ? : ಕೆಲವು ವೈದ್ಯರು ಋತುಬಂಧವನ್ನು ಮುಂದೂಡಲು ಯಾವುದೇ ರೀತಿಯ ಚಿಕಿತ್ಸೆ ಅಥವಾ ವೈಜ್ಞಾನಿಕ ವಿಧಾನಗಳಿಲ್ಲ. ಪ್ರಾಕೃತಿಕ ಉಪಾಯಗಳನ್ನು ಬಳಸಿ ಒಂದು ಹಂತದಲ್ಲಿ ರಜೋನಿವೃತ್ತಿಯನ್ನು ಮುಂದೂಡಬಹುದಾಗಿದೆ ಎಂದು ಹೇಳುತ್ತಾರೆ. ಅಂತಹ ಕೆಲವು ನೈಸರ್ಗಿಕ ಉಪಾಯಗಳು ಇಲ್ಲಿವೆ.
ಅತಿಲೋಕ ಸುಂದರಿಯರು ಹೆಚ್ಚಾಗಿ ಈ 5 ರಾಶಿಯಲ್ಲೇ ಒಬ್ಬರಾಗಿರ್ತಾರೆ!
ಸ್ವಚ್ಛ ಮತ್ತು ತಾಜಾ ಆಹಾರ ಸೇವನೆ (Fresh Food) : ಶುಚಿಯಾದ ಮತ್ತು ತಾಜಾ ಆಹಾರವನ್ನು ಸೇವಿಸುವುದರಿಂದ ಮತ್ತು ಆಹಾರದಲ್ಲಿ ಧಾನ್ಯಗಳ ಬಳಕೆಯನ್ನು ಹಾಗೂ ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳುವುದರಿಂದ ಋತುಬಂಧ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು.
ರಾಸಾಯನಿಕಗಳಿಂದ ದೂರವಿರಿ : ಕೈಗಾರಿಕೆಯ ರಾಸಾಯನಿಕಗಳಿಂದ ಹಾಗೂ ಧೂಮಪಾನ, ಒತ್ತಡದ ಜೀವನದಿಂದ ದೂರವಿರಿ. ಸಸ್ಯನಾಶಕ, ಕೀಟನಾಶಕಗಳನ್ನು ಸಾಧ್ಯವಾದಷ್ಟು ಅವೈಡ್ ಮಾಡಿ.
ಪ್ರೋಟೀನ್ ಯುಕ್ತ ಆಹಾರ ಸೇವಿಸಿ : ಕ್ಯಾಲೊರಿ ಮತ್ತು ಪ್ರೊಟೀನ್ ಇರುವ ಹಣ್ಣುಗಳ ಸೇವನೆಯಿಂದ ನೈಸರ್ಗಿಕವಾಗಿ ಮೆನೋಪಾಸ್ ಅನ್ನು ಮುಂದೂಡುವುದು ಸಾಧ್ಯ. ಹೆಚ್ಚು ಕ್ಯಾಲೊರಿ ಮತ್ತು ಫೈಟೊಇಸ್ಟ್ರೋಜೆನ್ ನಿಂದ ಕೂಡಿದ ಆಹಾರ ಹಾಗೂ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
ತೂಕ ನಿಯಂತ್ರಣ : ಅಧಿಕ ತೂಕದಿಂದ ಕೂಡ ಮೆನೋಪಾಸ್ ಬೇಗ ಆಗುತ್ತದೆ. ಹಾಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ನೀರು ಕುಡಿಯುವುದು ಮತ್ತು ಏಡೇಡ್ ಶುಗರ್ ಹಾಗೂ ಪ್ರೊಸೆಸ್ಡ್ ಫುಡ್ ಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಋತುಬಂಧವನ್ನು ಮುಂದೂಡಬಹುದು.
ಅನಿಯಮಿತ ಮುಟ್ಟು : ಮೆನೋಪಾಸ್ ಅವಧಿಯಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಯ ಜೊತೆ ಋತುಸ್ರಾವ ಕೂಡ ಅನಿಯಮಿತವಾಗಿರುತ್ತದೆ. ಕೆಲವರಿಗೆ ಹದಿನೈದು ದಿನಗಳಿಗೊಮ್ಮೆ ಋತುಸ್ರಾವ ಉಂಟಾದರೆ ಕೆಲವರಿಗೆ ಐದಾರು ತಿಂಗಳಾದರೂ ಋತುಸ್ರಾವವಾಗುವುದಿಲ್ಲ. ಅಂತಹ ಸಮಯದಲ್ಲಿ ಮಹಿಳೆಯರು ಸ್ತ್ರೀರೋಗ ತಜ್ಞರನ್ನು ಕೂಡಲೇ ಸಂಪರ್ಕಿಸಬೇಕು. ಋತುಬಂಧದ ಸಮಯದಲ್ಲಿ ಕೆಲವರಿಗೆ ಅತಿಯಾದ ರಕ್ತಸ್ರಾವ ಹಾಗೂ ಇನ್ಕೆಲವರಿಗೆ ಕಡಿಮೆ ರಕ್ತಸ್ರಾವ ಅಥವಾ ದುರ್ವಾಸನೆಯಿಂದ ಕೂಡಿದ ರಕ್ತಸ್ರಾವವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.