Asianet Suvarna News Asianet Suvarna News

ಛೇ... ಎಲ್ರೂ ಇಶಾ ಇಶಾ ಅಂತಾರೆ... ನಾನು ಇಶಾ ಅಲ್ಲಪ್ಪಾ... ನನ್​ ಹೆಸ್ರು ಏಶಾ... ಇದರ ಅರ್ಥ...

ಹೇಮಾ ಮಾಲಿನಿ- ಧರ್ಮೇಂದ್ರ ಪುತ್ರಿ ತಮ್ಮ ಹೆಸರು ಇಶಾ ಅಲ್ಲ ಏಶಾ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಅರ್ಥವನ್ನೂ ನಟಿ ಹೇಳಿದ್ದಾರೆ. 
 

Hema Malini Dharmendras daughter has clarified that her name is Eesha and not Isha suc
Author
First Published May 17, 2024, 7:20 PM IST

ಬಾಲಿವುಡ್  ಹಿರಿಯ ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ (Hema Malini) ಅವರ ಪುತ್ರಿ ಏಶಾ ಡಿಯೋಲ್ ಇಶಾ ಎಂದೇ ಫೇಮಸ್​ ಆದವರು. ಎಲ್ಲರೂ ಇವರನ್ನು ಇಶಾ ಎಂದೇ  ಕರೆಯುವುದು, ಬರೆಯುವುದು ಕೂಡ ಇಶಾ ಎಂದೇ.  ಸ್ಟಾರ್​ ಕಿಡ್​ ಆದರೂ ತಂದೆ ಧರ್ಮೇಂದ್ರ, ತಾಯಿ ಹೇಮಾಮಾಲಿನಿಯವರಂತೆ ಫೇಮಸ್​ ಆಗಲು ಸಾಧ್ಯವಾಗದ ನಟಿ ಇತ್ತೀಚೆಗೆ  ತಮ್ಮ ಮತ್ತು ಪತಿ ಭರತ್ ಬೇರೆಯಾಗುತ್ತಿರುವುದಾಗಿ ತಿಳಿಸಿ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು.  ಮದುವೆಯಾಗಿ 12 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ವಿಚ್ಛೇದನ ಪಡೆಯಲು ಸ್ಪಷ್ಟ ಕಾರಣ ದಂಪತಿ ನೀಡಲಿಲ್ಲ. ಆದರೆ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಈ ಸ್ನೇಹ ಸಂಬಂಧ ಮುರಿದುಹೋಗುವುದರಿಂದ ಇಬ್ಬರು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳನ್ನು ಒಟ್ಟಿಗೇ ಬೆಳೆಸುತ್ತೇವೆ ಎಂದಿದ್ದಾರೆ.  

ಇದೀಗ ನಟಿ ಏಶಾ ಡಿಯೋಲ್​ ಅವರು ಪಾಪರಾಜಿ ಒಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ನನ್ನ ಹೆಸರು ಇಶಾ ಅಲ್ಲ. ಎಲ್ಲರೂ ಇಶಾ ಅಂತಾನೇ ಕರೀತಾರೆ. ಇಷ್ಟು ವರ್ಷಗಳಿಂದ ಇದರದ್ದೇ ಚರ್ಚೆ ನಡೆಯುತ್ತಿದೆ. ಅಸಲಿಗೆ ನನ್ನ ಹೆಸರು ಇಶಾ ಅಲ್ಲ, ಏಶಾ ಡಿಯೋಲ್​ ಎಂದಿದ್ದಾರೆ. ಏಶಾ ಎನ್ನುವುದು ಸಂಸ್ಕೃತ ಶಬ್ದ. ಇದರ ಅರ್ಥ ದೈವಿಕ ಪ್ರೀತಿ ಎಂದು ಅವರು ಹೇಳಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ,  ಫುಟ್‌ಬಾಲ್‌ನಲ್ಲಿ ಆಸಕ್ತಿಯಿದ್ದರೂ ಮತ್ತು ಶಾಲಾ ದಿನಗಳಲ್ಲಿ ಫುಟ್‌ಬಾಲ್ ತಂಡದ ನಾಯಕಿಯಾಗಿ ಮತ್ತು ರಾಜ್ಯ ಮಟ್ಟದಲ್ಲಿ ಹ್ಯಾಂಡ್‌ಬಾಲ್‌ನಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದ ಮಿಡ್‌ಫೀಲ್ಡರ್ ಆಗಿದ್ದ ಏಶಾ, ನಂತರ  ನಟಿಯಾಗುವ ಕನಸಿನ ಬೆನ್ನೇರಿದವರು.   ಅವರು 2002 ರಲ್ಲಿ 'ಕೋಯಿ ಮೇರೆ ದಿಲ್ ಸೆ ಪೂಛೆ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ  ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರೂ ಖ್ಯಾತಿ ಪಡೆಯಲಿಲ್ಲ. ಕೊನೆಗೂ  ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಮದುವೆಯಾಗಲು ನಿರ್ಧರಿಸಿದ್ದರು. 

ಶಾರುಖ್​, ಕರಣ್​ ಜೋಹರ್​ ಸಲಿಂಗಕಾಮಿಯೆ? ವಿದೇಶಗಳ ಸಭೆಯ ಶಾಕಿಂಗ್​ ಹೇಳಿಕೆ ನೀಡಿದ ಗಾಯಕಿ ಸುಚಿತ್ರಾ

ಉದ್ಯಮಿ ಭರತ್ ತಖ್ತಾನಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದು ಏಶಾ (Eesha Deol) ಅವರೇ. ಇಬ್ಬರ ಪ್ರೇಮಕಥೆಯೂ ಕುತೂಹಲಕರವಾಗಿದ್ದು, ಸಿನಿಮಾ ರೀತಿಯಲ್ಲಿದೆ.  ಅವರು ಮೊದಲು ಪ್ರೀತಿಸುತ್ತಿದ್ದರು, ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಅವರ ಸಂಬಂಧ ಮುರಿದುಹೋಯಿತು, ಆದರೆ ನಂತರ ಮತ್ತೆ ಭೇಟಿಯಾದರು, ಪುನಃ ಪ್ರೇಮ ಚಿಗುರಿತ್ತು. ಅಂದಹಾಗೆ ಭರತ್​ ತಮ್ಮ  13 ನೇ ವಯಸ್ಸಿನಲ್ಲಿ ಇಶಾಗೆ ತಮ್ಮ  ಹೃದಯವನ್ನು ನೀಡಿದ್ದರು. ಏಶಾ ಮತ್ತು ಭರತ್ ಅವರ ಮೊದಲ ಭೇಟಿ ನಡೆದಿದ್ದು ಇಬ್ಬರೂ 13 ವರ್ಷದವರಾಗಿದ್ದಾಗ. ಭರತ್ ಮೊದಲ ನೋಟದಲ್ಲೇ ಮನಸೋತಿದ್ದರು. ಇಂಟರ್‌ಸ್ಕೂಲ್ ಸ್ಪರ್ಧೆಗಳಲ್ಲಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಕೊನೆಗೆ ಮದುವೆಯಾದರು.

ಆದರೆ ಇದೀಗ ದಂಪತಿ ಬೇರೆ ಬೇರೆಯಾಗಿದ್ದಾರೆ.  ಇವರಿಬ್ಬರ ನಡುವೆ ಬೆಂಗಳೂರಿನ ಬೆಡಗಿಯ ಎಂಟ್ರಿ ಆಯಿತಾ ಎನ್ನುವ ಸಂದೇಹವಿದೆ. ಅಷ್ಟಕ್ಕೂ ಏಶಾ ಅವರು ಹೇಳಿರುವಂತೆ, ಎರಡನೆಯ ಮಗು ಹುಟ್ಟಿದ ಮೇಲೆ ತಮ್ಮ ಸಂಬಂಧ ಹದಗೆಟ್ಟಿತ್ತು ಎಂದಿದ್ದಾರೆ. ಇದಕ್ಕೆ ಕಾರಣ, ಅದೇ ವೇಳೆಗೆ  ತಮ್ಮ ಪತಿ ಭರತ್ ಬೆಂಗಳೂರಿನ ಹುಡುಗಿಯೊಬ್ಬಳ ಜೊತೆ ಸಂಬಂಧ ಹೊಂದಿರುವುದು ಎಮದು ಆರೋಪಿಸಿದ್ದರು. ಬೆಂಗಳೂರಿನಲ್ಲಿ ಭರತ್ ಗರ್ಲ್ ಫ್ರೆಂಡ್ ಜೊತೆ ನ್ಯೂ ಇಯರ್ ಪಾರ್ಟಿ ಮಾಡಿದ್ದನ್ನು ತಾವು ನೋಡಿರುವುದಾಗಿ ಹೇಳಿದ್ದರು. ಇದೇ ಕಾರಣದಿಂದ ಭರತ್​ ತಮ್ಮ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಿರಲಿಲ್ಲ. ಇನ್ನು ತಾವಿಬ್ಬರೂ ಒಟ್ಟಿಗೇ ಇರುವುದು ಕಷ್ಟ ಎಂದಿದ್ದರು. 

ಸಮಾಜದ ಒಳಿತಿಗೆ ಲೈಂಗಿಕ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದ ನಟ ಶೇಖರ್​ ಸುಮನ್​

Latest Videos
Follow Us:
Download App:
  • android
  • ios