ಪೆನ್‌ಡ್ರೈವ್ ಕೇಸ್‌ನಲ್ಲಿ ಹೆಚ್‌ಡಿಕೆ ಹೆಸರು ಹೇಳಲು ಡಿಕೆಶಿ 100 ಕೋಟಿ ರೂ ಆಫರ್, ದೇವರಾಜ್ ಸ್ಫೋಟಕ ಹೇಳಿಕೆ!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪೆನ್‌ಡ್ರೈವ್ ಹಂಚಿದ್ದು ಹೆಚ್ ಡಿ ಕುಮಾರಸ್ವಾಮಿ ಎಂದು ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಡಿಕೆ ಶಿವಕುಮಾರ್ ಆಫರ್ ನೀಡಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ವಕೀಲ ದೇವರಾಜೇಗೌಡ ಹೇಳಿದ್ದಾರೆ. 
 

DK Shivakumar offered rs 100 crore to name HD Kumaraswamy in pen Drive case says devaraje gowda ckm

ಹಾಸನ(ಮೇ.17) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ವಕೀಲ ದೇವರಾಜೇ ಗೌಡ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಶ್ಲೀಲ ವಿಡಿಯೋ ಪೆನ್‌‌ಡ್ರೈವ್ ಹಂಚಿಕೆಯನ್ನು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೂಚನೆಯಂತೆ ಮಾಡಿದ್ದೇನೆ ಎಂದು ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಡಿಕೆ ಶಿವಕುಮಾರ್ ಆಫರ್ ನೀಡಿದ್ದರು ಎಂದು ದೇವರಾಜೇ ಗೌಡ ಹೇಳಿದ್ದಾರೆ. 

ಪೆನ್‌ಡ್ರೈವ್ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನ್ನನ್ನು ಕರೆಸಿ ಮಾತನಾಡಿದ್ದಾರೆ. ಕಾರ್ತಿಕ್‌ನಿಂದ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲಾ ಮಾಹಿತಿ ಪಡೆದಿದ್ದಾರೆ ಎಂದು ದೇವೇರಾಜೇ ಗೌಡ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಕುರಿತ ಪೆನ್‌ಡ್ರೈವ್ ಹಂಚಲು ಹೆಚ್‌ಡಿ ಕುಮಾಸ್ವಾಮಿಯೇ ಹೇಳಿದ್ದಾರೆ ಎಂದು ಹೇಳಲು ನನಗೆ ಡಿಕೆಶಿ ಸೂಚಿಸಿದ್ದಾರೆ. ಹೀಗೆ ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಿದ್ದರು ಎಂದು ದೇವರಾಜೆ ಗೌಡ ಹೇಳಿದ್ದಾರೆ.  ಏನೇ ಸಮಸ್ಯೆಯಾದರೂ ನಾನು ನಿನ್ನನ್ನು ರಕ್ಷಿಸುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದ್ದರು ಎಂದಿದ್ದರೆ.

Breaking: ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ವಶಕ್ಕೆ

ಪೊಲೀಸರ ವಶದಲ್ಲಿರುವ ದೇವೇರಾಜೇಗೌಡ ಮಾಧ್ಯಮಕ್ಕೆ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿಕೆ ಶಿವಕುಮಾರ್ ಎಂದು ಆರೋಪಿಸಿದ್ದಾರೆ.  ಈ ಪೆನ್‌ಡ್ರೈವ್ ಪ್ರಕರಣಕ್ಕೆ ನಾಲ್ವರು ಸಚಿವರನ್ನು ನೇಮಕ ಮಾಡಿದ್ದರು. ಚೆಲುವರಾಯ ಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಮತ್ತೊಬ್ಬ ಸಚಿವರ ತಂಡ ರಚಿಸಿದರು. ಬಳಿಕ ನಿರಂತರವಾಗಿ ನನ್ನ ಮೇಲೆ ಒತ್ತಡ ತರುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ ಎಂದು ದೇವೇರಾಜೇ ಗೌಡ ಹೇಳಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ಹಾಗೂ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಈ ಪ್ರಕರಣವನ್ನು ಮಾಡಿದ್ದಾರೆ. 100 ಕೋಟಿ ರೂಪಾಯಿ ಆಫರ್ ನೀಡಿದ್ದರು. 5 ಕೋಟಿ ರೂಪಾಯಿ ಅಡ್ವಾನ್ಸ್ ಮೊತ್ತವನ್ನು ಬೌರಿಂಗ್ ಕ್ಲಬ್‌ನ 110 ರೂಂ ನಂಬರ್‌ಗೆ ಕಳುಹಿಸಿದ್ದರು. ಚೆನ್ನರಾಯಪಟ್ಟಣದ ಗೋಪಾಲಸ್ವಾಮಿಯನ್ನು ಸಂಧಾನಕ್ಕೆ ಕಳುಹಿಸಿದ್ದರು. ಗೋಪಾಲಸ್ವಾಮಿ ಬಳಿ 5 ಕೋಟಿ ರೂಪಾಯಿ ನಗದು ಕೊಟ್ಟು ಕಳುಹಿಸಿದ್ದರು. ನಾಯಕ ಶಿವರಾಮೇ ಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಪ್ರಮುಖ ಉದ್ದೇಶ ಎಂದರೆ, ಹೆಚ್‌ಡಿ ಕುಮಾರಸ್ವಾಮಿ ನಾಯಕತ್ವ ಅಂತ್ಯಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ದೇವೇರಾಜೆ ಗೌಡ ಹೇಳಿದ್ದಾರೆ.

ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ಡಿಕೆಶಿ ಭೇಟಿಗಾಗಿ ದೇವರಾಜೇಗೌಡನೇ ದುಂಬಾಲು ಬಿದ್ದಿದ್ದ: ಶಿವರಾಮೇಗೌಡ

ಅವರ ಒತ್ತಡಕ್ಕೆ ನಾನು ಮಣಿಯದಾಗ ನನ್ನ ಮೇಲೆ ಹಲವು ಕೇಸ್‌ಗಳನ್ನು ಹಾಕಿದ್ದಾರೆ. ಎಂದು ದೇವೇರಾಜೇ ಗೌಡ ಹೇಳಿದ್ದಾರೆ.

Latest Videos
Follow Us:
Download App:
  • android
  • ios