HD Revanna ಲೈಂಗಿಕ ದೌರ್ಜನ್ಯ ಪ್ರಕರಣ, ಮೇ.20ರವರೆಗೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಹೊಳೆನರಸೀಪುರದಲ್ಲಿ ದಾಖಲಾದ  ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿ ತೀರ್ಪನ್ನು ಕೋರ್ಟ್ ಮೇ 20ರವರೆಗೆ ಕಾಯ್ದಿರಿಸಿದೆ. 

HD Revanna holenarasipura sexuval harasment Case  court reserved judgment on the bail application till May 20  gow

ಬೆಂಗಳೂರು (ಮೇ.17): ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಹೊಳೆನರಸೀಪುರದಲ್ಲಿ ದಾಖಲಾದ  ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ಜಾಮೀನು ಅರ್ಜಿ ತೀರ್ಪನ್ನು ಮೇ.20ರವರೆಗೆ ಕಾಯ್ದಿರಿಸಿದೆ

ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ  ಗುರುವಾರ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿ ಶುಕ್ರವಾರದವರೆಗೆ ವಿಚಾರಣೆ ಮುಂದೂಡಲಾಗಿತ್ತು.  ಹೀಗಾಗಿ ಇಂದು ಉಭಯ ತಂಡಗಳ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ತೀರ್ಪನ್ನು ಮೇ.20ರವರೆಗೆ ಕಾಯ್ದಿರಿಸಿದೆ.  ಅರ್ಜಿಯ ಆದೇಶ ಬರುವವರೆಗೂ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಹೇಳಿದೆ.

ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ನಿಯಮ ಮರೆಯಲೇಬೇಡಿ, ಕೇವಲ 16ದಿನದಲ್ಲಿ ದಾಖಲಾಗಿದೆ 12ಸಾವಿರಕ್ಕೂ ಹೆಚ್ಚು ಕೇಸ್!

ಐದು ಲಕ್ಷ ರು. ಬಾಂಡ್, ಇಬ್ಬರ ಶ್ಯೂರಿಟಿ ಹಾಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತುವಿಧಿಸಿ ಶುಕ್ರವಾರ ಮಧ್ಯಾಹ್ನದವರೆಗೆ ಷರತ್ತು ಬದ್ಧ ಜಾಮೀನು ನೀಡಲಾಗಿತ್ತು. ಇಂದು ಮದ್ಯಾಹ್ನ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು ರೇವಣ್ಣ ಅವರಿಗೆ ಜಾಮೀನು ಕೊಡಬೇಕೋ ಬೇಡವೋ ಎಂಬ ತೀರ್ಪನ್ನು ಸೋಮವಾರ ಅಂದರೆ ಮೇ.20ಕ್ಕೆ ನಿರ್ಧರಿಸುವುದಾಗಿ ನ್ಯಾ.ಜೆ.ಪ್ರೀತ್ ಹೇಳಿದ್ದಾರೆ.

ರೇವಣ್ಣ ಪರ ಸಿ.ವಿ.ನಾಗೇಶ್ ವಾದ ಮಂಡನೆ‌ ಮಾಡಿದ್ದರು. ಎಸ್‌ಐಟಿ ಪರ ವಾದ ಮಂಡಿಸಿದ ಎಸ್ಪಿಪಿ ಜಯ್ನಾ ಕೋಠಾರಿ, ನನ್ನನ್ನು ಕೊಠಡಿಗೆ ಆಹ್ವಾನಿಸುತ್ತಿದ್ದರು, ಲೈಂಗಿಕ ದೌರ್ಜನ್ಯ ನೀಡಿದ್ದರೆಂದು ದೂರು ನೀಡಲಾಗಿದೆ. ಭವಾನಿ ಇಲ್ಲದ ಸಮಯದಲ್ಲಿ ಸೊಂಟ ಜಿಗುಟುತ್ತಿದ್ದರು. ತಲೆಗೆ ಎಣ್ಣೆ ಹಚ್ಚು ಎನ್ನುತ್ತಿದ್ದರು. ರೇವಣ್ಣ ಲೈಂಗಿಕ ಕಿರುಕುಳ ಇಷ್ಟಕ್ಕೆ ನಿಂತಿಲ್ಲ. ಆಶ್ರಯ ಮಂಜೂರು ಮನೆಯಿಂದ ಹೊರ ಹಾಕಿದ್ದರು ಎಂದು ದೂರುದಾರ ಮಹಿಳೆ ನೀಡಿದ್ದ ಸಂಪೂರ್ಣ ದೂರನ್ನು ನ್ಯಾಯಾಧೀಶರ ಮುಂದೆ ಎಸ್ಪಿಪಿ ಓದಿ ಹೇಳಿದರು. ನನಗೆ ಜೀವ ಭಯ ಇದೆ ಎಂದು ದೂರುದಾರರು ಹೇಳಿದ್ದಾರೆ ಎಂದು ಕೋರ್ಟ್ ಮುಂದೆ ಹೇಳಿದರು.

ದೂರುದಾರರಿಗೆ ಮನೆಯಲ್ಲಿ ಇಬ್ಬರಿಂದಲೂ (ರೇವಣ್ಣ, ಪ್ರಜ್ವಲ್) ಕಿರುಕುಳ ನಡೆದಿದೆ. ಇದನ್ನೆಲ್ಲಾ ಮುಕ್ತ ನ್ಯಾಯಾಲಯದಲ್ಲಿ ವಿವರಿಸಲು ಆಗದು. ಇದು ಇನ್ ಕ್ಯಾಮೆರಾ ವಿಚಾರಣೆ ನಡೆಯಬೇಕು. ಅಪರಾಧ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡುವಂಥಾದ್ದು, ಈ ಹಂತದಲ್ಲಿ ಇದನ್ನು ಪುರಸ್ಕರಿಸಲು ಸಾಧ್ಯವೇ? ದಿನಾಲೂ ಸಂತ್ರಸ್ತರಿಂದ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ತನಿಖೆ ನಡೆಯುತ್ತಿದೆ. ಸಾಕ್ಷಿಗಳು ಮುಂದೆ ಬರುತ್ತಿದ್ದಾರೆ. ಹೇಳಿಕೆ ನೀಡುತ್ತಿದ್ದಾರೆ‌ ಈ ಹಂತದಲ್ಲಿ ಜಾಮೀನು ನೀಡಬಾರದು. ಜೀವಾವಧಿ, ಮರಣದಂಡನೆ ಶಿಕ್ಷೆ ಇರುವ ಕೇಸಲ್ಲಿ  ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಜಾಮೀನು ನೀಡುವ ಅಧಿಕಾರ ಇಲ್ಲ. ಸೆ.376 ಪ್ರಕಾರ ಈ ಜಾಮೀನು ಅರ್ಜಿ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಬೇಕು ಎಂದು ಎಸ್ಪಿಪಿ ಹೇಳಿದರು.

ಪ್ರಜ್ವಲ್ ರೇಪ್ ಬಗ್ಗೆ ಕಿಡಿಕಾರಿದ್ದ ಆಪ್, ಸ್ವಾತಿ ವಿಷಯದಲ್ಲಿ ಮೌನ!

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 354A,354D, 506,509 ಅಡಿ ಮಾತ್ರ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಸೆಕ್ಷನ್ ಗಳು ಬೆಲೆಬಲ್ ಸೆಕ್ಷನ್ ಗಳು, ಈ ಕಾರಣಕ್ಕಾಗಿ ಸಿಆರ್ಪಿಸಿ 436 ಅಡಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಬೆಲೆಬಲ್ ಸೆಕ್ಷನ್ ಇರೋದ್ರಿಂದ ಜಾಮೀನಿನ ಮೇಲೆ ರಿಲೀಸ್ ಮಾಡಲೇಬೇಕು.  ಜೀವಾವಧಿ, ಮರಣದಂಡನೆ ಶಿಕ್ಷೆ ಸೆಕ್ಷನ್ ಇದ್ದಾಗ ಮಾತ್ರ ಜಾಮೀನು ‌ನಿರಾಕರಿಸಬುಹುದು. ಸಂತ್ರಸ್ತೆ ದೂರಿನ ಮೇರೆಗೆ 28.4.2024ರಂದು ಎಫ್ಐಆರ್ ದಾಖಲಾಗಿದೆ. ದೂರು ದಾಖಲಾದ 5 ವರ್ಷ ಹಿಂದೆ ನಡೆದದ್ದು ಎಂದು ಆರೋಪಿಸಲಾಗಿದೆ. ಕೇಸ್ ದಾಖಲಿಸುವುದು ತೀರಾ ತಡವಾಗಿದೆ. ದೂರು ಪಡೆಯಲು ಹೊಳೆನರಸೀಪುರ ಪಿಎಸ್ಐ ಬೆಂಗಳೂರಿಗೆ ಹೋಗಿ ದೂರು ಪಡೆದಿದ್ದಾರೆ. ಬೆಂಗಳೂರಿನ ಯಾವುದೋ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡು ದೂರು ನೀಡಲಾಗಿದೆ ಎಂದು ರೇವಣ್ಣ ಪರ ಸಿ.ವಿ.ನಾಗೇಶ್ ವಾದ ಮಂಡನೆ‌ ಮಾಡಿದರು.

ಕೇಸಿನ ಫ್ಯಾಕ್ಟ್ ಬಗ್ಗೆ ವಾದಕ್ಕೆ ಎಸ್ಪಿಪಿ ಅಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನಾಗೇಶ್ , ನೀವು ವಾದಿಸುವಾಗ ನಾನು ಗರ್ಭಗುಡಿಯಲ್ಲಿ ಕೂತಹಾಗೆ ಇದ್ದೆ. ನೀವು ಕೂಡ ಉತ್ಸವ ಮೂರ್ತಿ ಯಂತೆ ಕೂತು ಕೇಳಿ ಎಂದರು. ಇವೆಲ್ಲಾ ಜಾಮೀನು ನೀಡಬಹುದಾದ ಆರೋಪಗಳು ಎಂದು ನಾಗೇಶ್ ಬೇಲ್‌ ನೀಡುವಂತೆ ಕೋರ್ಟ್ ಮುಂದೆ ಮನವಿ ಮಾಡಿಕೊಂಡರು. ಈಗಾಗಲೇ ಮೈಸೂರು ಕೆ.ಆರ್‌ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು ರೇವಣ್ಣ ಜೈಲಿಂದ ಹೊರಬಂದಿದ್ದಾರೆ. 

Latest Videos
Follow Us:
Download App:
  • android
  • ios