ನಾಲ್ಕು ಹೋಳಾಗುತ್ತಾ ಪಾಕಿಸ್ತಾನ? ಭಾರತದಲ್ಲಿ ಲೀನವಾಗೋಕೆ ಸಿದ್ಧವಾಯ್ತು ಪಿಒಕೆ!
ಪಾಕಿಸ್ತಾನದಲ್ಲಿ ಆಕ್ರೋಶ ಶುರುವಾಗಿದೆ. ಅಂತರ್ಯುದ್ಧ, ಹಾಹಾಕಾರ ದೇಶದಲ್ಲಿ ತಾಂಡವವಾಗುತ್ತಿದೆ. ಪಾಜ್‌ನ ಅಂತರ್ಯುದ್ಧಕ್ಕೆ ಚೀನಾ.. ತಾಲಿಬಾನ್ ಕೂಡ ಎಂಟ್ರಿಯಾಗಿದೆ. ಭಾರತದ ಒಂದು ನಿರ್ಣಯ ಪಾಕಿಸ್ತಾನದ ಭವಿಷ್ಯವನ್ನು ನಿರ್ಧಾರ ಮಾಡಲಿದೆಯೇ?
ಬೆಂಗಳೂರು (ಮೇ. 16): ಭಾರತದ ಬದ್ಧಶತ್ರುವಿನ ಹಾಗೆ ವರ್ತಿಸೋ ದೇಶ ಪಾಕಿಸ್ತಾನ. ಭಾರತದ ನೆಮ್ಮದಿಕೆ ಕೊಳ್ಳಿ ಇಡೋದೇನ್ನೇ ತನ್ನ ಧ್ಯೇಯವಾಗಿಸಿಕೊಂಡಿರೋ ದೇಶ, ಪಾಕಿಸ್ತಾನ. ಅದು ಉಗ್ರರ ಸ್ವರ್ಗ. ಪಾತಕಿಗಳ ಲೋಕ. ಅಂಥಾ ಪಾಕಿಸ್ತಾನ ಈಗ ಅದೆಂಥಾ ದೈನೇಸಿ ಸ್ಥಿತಿ ತಲುಪಿದೆ ಅಂದ್ರೆ, ತುತ್ತು ಅನ್ನಕ್ಕೂ ಹಾಹಾಕಾರ ಶುರುವಾಗಿದೆ.
ಅಲ್ಲಿನ ಸರ್ಕಾರ ತನ್ನನ್ನೇ ತಾನು ಮಾರಿಕೊಳ್ಳೋ ಹಂತಕ್ಕೆ ಬಂದಿದೆ. ಪಾಕಿಸ್ತಾನ ಜನ, ಸಾಕಾಪ್ಪ ಈ ನರಕದ ಸಹವಾಸ ಅಂತ ತೊಳಲಾಡುತ್ತಿದ್ದಾರೆ. ಇದೆಲ್ಲದ ಮಧ್ಯೆ, ಭಾರತ ಯುದ್ಧವೇ ಇಲ್ಲದೆ, ದೊಡ್ಡ ಗೆಲುವು ಗಳಿಸಿದೆ.
'ನಮಗೆ ಇರೋದು ಇದೊಂದೇ ಮಾರ್ಗ..' ಎಲ್ಲಾ ಸರ್ಕಾರಿ ಕಂಪನಿಗಳ ಮಾರಾಟ ಘೋಷಿಸಿದ ಪಾಕಿಸ್ತಾನ!
ಕಂಪನಿಗಳ ಖಾಸಗೀಕರಣ ಮಾಡಿದ ಮಾತ್ರಕ್ಕೇ, ಆಪತ್ತಿನಿಂದ ಬಚಾವ್ ಆಗೋ ಸ್ಥಿತಿಲಿ ಪಾಕಿಸ್ತಾನ ಇಲ್ಲ.. ಅಷ್ಟಕ್ಕೂ ಪಾಕ್ ಆಂತರಿಕ ಪರಿಸ್ಥಿತಿ ಅದೆಷ್ಟು ಭೀಕರವಾಗಿದೆ ಗೊತ್ತಾ? ಪಾಕಿಸ್ತಾನಕ್ಕೆ ಸಧ್ಯಕ್ಕೀಗ ನೆಮ್ಮದಿಯೇ ಇಲ್ಲ. ನಂಬಿಕೊಂಡಿದ್ದವರೆಲ್ಲಾ ಕೈಕೊಟ್ಟಿದ್ದಾರೆ. ರಕ್ಷಿಸಬೇಕಿದ್ದೋರೆಲ್ಲಾ ಭಕ್ಷಿಸೋಕೆ ನೋಡ್ತಿದ್ದಾರೆ. ಇಲ್ಲೀ ತನಕ ಯಾವ ಉಗ್ರ ಸರ್ಪಗಳಿಗೆ ಹಾವೆರೆದಿತ್ತೋ, ಅದೇ ಘಟ ಸರ್ಪಗಳು, ಪಾಕಿಸ್ತಾನದ ಜೀವ ತಿನ್ನೋಕೆ ನೋಡ್ತಿದ್ದಾವೆ.. ಅದರ ಪರಿಣಾಮಕ್ಕೆ, ಪಾಕಿಸ್ತಾನ ಛಿದ್ರವಾಗೋ ವಾರತಾವರಣವೇ ನಿರ್ಮಾಣವಾಗಿದೆ..