ಮದರಸಾದಲ್ಲಿ ಬಾಲ್‌ ಅಂದ್ಕೊಂಡು ಬಾಂಬ್‌ ಎತ್ತಿಕೊಂಡ ವಿದ್ಯಾರ್ಥಿ, ಬ್ಲಾಸ್ಟ್‌ನಲ್ಲಿ ಸಾವು ಕಂಡ ಮೌಲ್ವಿ!

ಬಿಹಾರದ ಸರನ್‌ನಲ್ಲಿ ಮದರಸಾ ಬಳಿ ಸಂಭವಿಸಿದ ಬಾಂಬ್‌ ಬ್ಲಾಸ್ಟ್‌ನಲ್ಲಿ ಮೌಲ್ವಿ ಸಾವು ಕಂಡಿದ್ದು, ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

Bihar Saran madrassa Bomb Maulana dead student hurt in blast outside san

ಪಾಟ್ನಾ (ಮೇ.17):  ಬಿಹಾರದ ಸರನ್ ಜಿಲ್ಲೆಯ ಮೋತಿರಾಜ್‌ಪುರ ಗ್ರಾಮದ ಮದರಸಾ ಬಳಿ ಬುಧವಾರ ತಡರಾತ್ರಿ ನಡೆದ ಸ್ಫೋಟದಲ್ಲಿ 40 ವರ್ಷದ ಮೌಲಾನಾ ಸಾವನ್ನಪ್ಪಿದ್ದು, ಅಪ್ರಾಪ್ತ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಸೋಮವಾರ ಸರನ್‌ನಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ಸ್ಫೋಟವು ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ. ಸ್ಫೋಟದಲ್ಲಿ ಮೌಲಾನಾ ಇಮಾಮುದ್ದೀನ್ ಮತ್ತು ವಿದ್ಯಾರ್ಥಿ ನೂರ್ ಆಲಂ (15) ಗಾಯಗೊಂಡಿದ್ದರು,  ಇಬ್ಬರನ್ನೂ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ದಾರಿ ಮಧ್ಯೆ ಇಮಾಮುದ್ದೀನ್ ಮೃತಪಟ್ಟರೆ, ಯುವಕ ಪಿಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತರು ಸರನ್‌ನ ಓಲ್ಹಾನ್‌ಪುರ ಗ್ರಾಮದ ನಿವಾಸಿಯಾಗಿದ್ದು, ನೂರ್ ಆಲಂ ಮುಜಾಫರ್‌ಪುರ ಜಿಲ್ಲೆಯವರಾಗಿದ್ದಾರೆ. ಸ್ಥಳೀಯರ ಪ್ರಕಾರ, ಆಲಂ ಮದರಸಾದ ಬಳಿ ಬಾಲ್‌ನಂತಿದ್ದ ವಸ್ತುವನ್ನು ಕಂಡು ಅದನ್ನು ಒಳಗೆ ತೆಗೆದುಕೊಂಡು ಹೋಗಿದ್ದ. ಮೌಲಾನಾ ವಸ್ತುವನ್ನು ನೋಡಿದ್ದರು. ಅವರು ಆಲಂನಿಂದ ಅದನ್ನು ತೆಗೆದುಕೊಂಡು ಅದನ್ನು ಬಾಂಬ್ ಎಂದು ಶಂಕಿಸಿ ಎಸೆದರು. ವಸ್ತು ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ. 

ಘಟನಾ ಸ್ಥಳವನ್ನು ವಿಧಿವಿಜ್ಞಾನ ತಂಡವು ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಸರನ್ ಎಸ್ಪಿ ಗೌರವ್ ಮಂಗಳಾ ತಿಳಿಸಿದ್ದಾರೆ. "ನಾವು ಅವರ ವರದಿಯನ್ನು ಪಡೆದ ನಂತರ, ವಸ್ತುವು ಬಾಂಬ್ ಅಥವಾ ಪಟಾಕಿಯೇ ಎನ್ನುವುದನ್ನು ಖಚಿತವಾಗಿ ಹೇಳಬಹುದು' ಎಂದು ತಿಳಿಸಿದ್ದಾರೆ.

ಇನ್ನು ಪ್ರಕರಣದ ವಿಚಾರ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಕೂಲಂಕಷ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ. ಶುಕ್ರವಾರದ ವೇಳೆ ಬ್ಲಾಸ್ಟ್‌ನಲ್ಲಿ ಗಾಯಗೊಂಡವರು ಇಬ್ಬರು ವ್ಯಕ್ತಿಗಳು ಎಂದು ತಿಳಿಸಲಾಗಿದೆ.  ಎಸ್ಪಿ ಗೌರವ್ ಮಂಗಳಾ ನೀಡಿರುವ ಮಾಹಿತಿಯ ಪ್ರಕಾರ, ಪ್ರಕರಣದ ನಡೆದ ಬಳಿಕ ಸ್ಥಳೀಯ ಜನರು ಸಾಕ್ಷ್ಯವನ್ನು ನಾಶ ಮಾಡಿದ್ದರಿಂದ ಇಲ್ಲಿ ಬ್ಲಾಸ್ಟ್‌ ಆದ ವಸ್ತು ಯಾವುದು ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.

ಮದರಸಾದಲ್ಲಿ ಸ್ಫೋಟದ ನಂತರ, ಎಫ್‌ಎಸ್‌ಎಲ್ ತಂಡ ತನಿಖೆ ಆರಂಭಿಸಿದೆ. ಸ್ಫೋಟದ ಹಿಂದಿನ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸ್ಫೋಟದ ಹಿಂದೆ ಬಾಂಬ್ ಇದೆಯೇ ಅಥವಾ ಪಟಾಕಿಯಿಂದ ಸ್ಫೋಟ ಸಂಭವಿಸಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯ ನಂತರ ಮದರಸಾದಲ್ಲಿ ಯಾರೂ ಪತ್ತೆಯಾಗಿಲ್ಲ. ಘಟನೆಗೂ ಮುನ್ನ ಮದರಸಾದಲ್ಲಿ 12 ಮಕ್ಕಳು ಓದುತ್ತಿದ್ದರು. ಘಟನೆಯ ನಂತರ ಸ್ಥಳವನ್ನು ತೊಳೆಯಲಾಗಿದೆ. ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಯತ್ನ ನಡೆದಿದೆ ಎಂಬ ಆರೋಪಗಳಿವೆ ಎನ್ನಲಾಗಿದೆ.

'ನೀವ್ಯಾಕೆ ಪ್ರೆಸ್‌ ಮೀಟ್‌ ಮಾಡೋದಿಲ್ಲ?' ವಿಪಕ್ಷಗಳ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಮೋದಿ ಉತ್ತರ!

ಈ ನಡುವೆ ಈ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜಕೀಯ ಹೇಳಿಕೆಗಳ ಸರಣಿ ತೀವ್ರಗೊಂಡಿದೆ. ಸ್ಫೋಟದ ನಂತರ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು, ಬಿಹಾರದ ಮದರಸಾಗಳು ಭಯೋತ್ಪಾದನೆಯ ಗೂಡು ಎಂಬುದನ್ನು ಚಾಪ್ರಾ ಘಟನೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಬಿಹಾರದ ಮದರಸಾಗಳು ಭಯೋತ್ಪಾದಕರ ತಾಣಗಳಾಗಿವೆ ಎಂದು ನಾವು ಮೊದಲೇ ಹೇಳಿದ್ದೆವು ಎಂದಿದ್ದಾರೆ.

ಭಕ್ತಿ ಸಿರೀಸ್‌ಗಾಗಿ ಹೊಸ ಒಟಿಟಿ ವೇದಿಕೆ ಆರಂಭಿಸಿದ ಅಡಲ್ಟ್‌ OTT ಸೈಟ್‌ Ullu

Latest Videos
Follow Us:
Download App:
  • android
  • ios