Asianet Suvarna News Asianet Suvarna News

ಡ್ರಗ್ಸ್ ಸೇವಿಸಿ ಹೊಸ ಭಂಗಿಯಲ್ಲಿ ಸೆಕ್ಸ್, 26ರ ಹರೆಯದ ಡ್ಯಾನ್ಸರ್ ದಾರುಣ ಸಾವು!

ಇಬ್ಬರು ಪರಸ್ಪರ ಚಾಟ್ ಮಾಡಿ ಹೊಸ ರೀತಿಯಲ್ಲಿ ಸೆಕ್ಸ್ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಡ್ರಗ್ಸ್ ಸೇವಿಸಿದ್ದಾರೆ. ಉಸಿರುಗಟ್ಟಿಸುವ ಭಂಗಿಯಲ್ಲಿ ಸೆಕ್ಸ್ ಮಾಡಿದ್ದಾರೆ. ಆದರೆ ಹೊಸ ಪ್ರಯೋಗ ದುರಂತದಲ್ಲಿ ಅಂತ್ಯವಾಗಿದೆ. 26ರ ಹರೆಯದ ಡ್ಯಾನ್ಸರ್ ದಾರುಣ ಅಂತ್ಯಕಂಡಿದ್ದಾಳೆ.
 

British Dance died after new style of sex with Boyfriend with Drugs ckm
Author
First Published May 17, 2024, 3:56 PM IST

ವೆಸ್ಟ್ ಯಾರ್ಕ್‌ಶೈರ್ (ಮೇ.17) ಆಕೆ ವಯಸ್ಸು 26, ಡ್ಯಾನ್ಸರ್ ಆಗಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಳು. ಆದರೆ ಸೆಕ್ಸ್‌ನಿಂದ ದುರಂತ ಅಂತ್ಯ ಕಂಡಿದ್ದಾಳೆ. ಬಾಯ್‌ಫ್ರೆಂಡ್ ಹಾಗೂ ಈಕೆ ಪರಸ್ಪರ ಸೆಕ್ಸ್ ಕುರಿತು ಚಾಟ್ ಮಾಡಿದ್ದಾರೆ. ಈ ವೇಳೆ ಹೊಸ ಭಂಗಿಯಲ್ಲಿ ಸೆಕ್ಸ್ ಕುರಿತು ಮಾತನಾಡಿದ್ದಾರೆ. ಇದರಂತೆ ಡ್ರಗ್ಸ್ ಸೇವಿಸಿ ಉಸಿರುಗಟ್ಟಿಸುವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ 26ರ ಹರೆಯದ ಡ್ಯಾನ್ಸರ್ ಮೃತಪಟ್ಟಿದ್ದಾಳೆ. ಇತ್ತ ಡ್ಯಾನ್ಸರನ್ನು ಆಸ್ಪತ್ರೆ ಸೇರಿಸಿ ಬಳಿಕ ಪರಾರಿಯಾದ ಬಾಯ್‌ಫ್ರೆಂಡ್ ಬದುಕು ಅಂತ್ಯಗೊಳಿಸಿದ ಘಟನೆ ವೆಸ್ಟ್ ಯಾರ್ಕ್‌ಶೈರ್‌ನಲ್ಲಿ ನಡೆದಿದೆ.

ಡ್ಯಾನ್ಸರ್ ಜಾರ್ಜಿಯಾ ಲೂಕ್ ಹಾಗೂ ಈಕೆಯ ಬಾಯ್‌ಫ್ರೆಂಡ್ ಲ್ಯೂಕ್ ಕ್ಯಾನಾನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಆದರೆ ಇತ್ತೀಚೆಗೆ ಮೆಸೇಜ್ ಮೂಲಕ ಹೊಸ ರೀತಿಯ ಸೆಕ್ಸ್ ಕುರಿತು ಚಾಟ್ ಮಾಡಿದ್ದಾರೆ. ಈ ವೇಳೆ ಈ ಮೊದಲು ನಡೆಸಿದ ಸೆಕ್ಸ್‌ಗಿಂತ ಭಿನ್ನವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಕುರಿತು ಇಬ್ಬರು ಮಾತನಾಡಿದ್ದಾರೆ. ಇದರಂತೆ ಇಬ್ಬರು ತಯಾರಿ ನಡೆಸಿದ್ದಾರೆ.

ಸೆಕ್ಸ್ ಮಾಡೋ ಸಮಯದಲ್ಲೋ, ಆಮೇಲೋ ಸ್ನಾಯು ಸೆಳೆತ ಉಂಟಾಗೋದೇಕೆ?

ಚಾಟಿಂಗ್ ವೇಳೆ ಉಸಿರುಗಟ್ಟಿಸುವ ಸೆಕ್ಸ್ ಆಸಕ್ತಿಯನ್ನು ಬಿಚ್ಚಿಟ್ಟಿದ್ದಾಳೆ. ಚಾಟಿಂಗ್‌ನಂತೆ ಇಬ್ಬರೂ ಜೊತೆ ಸೇರಿದ್ದಾರೆ. ಸೆಕ್ಸ್ ಉತ್ತುಂಗದ ಅನುಭವ ಪಡೆಯಲು ಡ್ರಗ್ಸ್ ಸೇವಿಸಿದ್ದಾರೆ. ಬಳಿಕ ಜಾರ್ಜಿಯಾ ಬ್ರೂಕ್ ಹೇಳಿದಂತೆ ಉಸಿರುಗಟ್ಟಿಸುವ ಭಂಗಿಯಲ್ಲಿ ಸೆಕ್ಸ್ ಮಾಡಿದ್ದಾರೆ. ಆದರೆ ಇವರ ಲೈಂಗಿಕ ಕ್ರಿಯೆಯಲ್ಲಿ ಎಡವಟ್ಟವಾಗಿದೆ. ಒಂದಡೆ ಡ್ರಗ್ಸ್ ಮತ್ತೊಂದೆಡೆ ಉಸಿರುಗಟ್ಟಿಸುವ ಭಂಗಿ ಎರಡೂ ಜಾರ್ಜಿಯಾ ಜೀವಕ್ಕೆ ಅಪಾಯ ತಂದಿದೆ. ಸೆಕ್ಸ್ ಮಾಡುತ್ತಿದ್ದಂತೆ ಜಾರ್ಜಿಯಾ ಅಸ್ವಸ್ಥಗೊಂಡಿದ್ದಾಳೆ. 

ಜಾರ್ಜಿಯಾ ಬ್ರೂಕ್ ಕುಸಿದು ಬಿದ್ದಿದ್ದಾಳೆ. ಆತಂಕಗೊಂಡ ಲ್ಯೂಕ್ ಕ್ಯಾನಾನ್, ತಕ್ಷವೇ ತನ್ನ ಕಾರಿನಲ್ಲಿ ಗೆಳತಿಯನ್ನು ಆಸ್ಪತ್ರೆ ದಾಖಲಿಸಿದ್ದಾಳೆ. ತಪಾಸಣೆ ನಡೆಸಿದ ವೈದ್ಯರು ಜಾರ್ಜಿಯಾ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಷ್ಟರಲ್ಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಅಗ್ನಿಶಾಮಕ ನಿರ್ವಹಣೆಗಾಗಿ ಅಳವಡಿಸಿದ ಪೈಪ್ ಹಿಡಿದು ಆಸ್ಪತ್ರೆಯಿಂದ ಬಾಯ್‌ಫ್ರೆಂಡ್ ಲ್ಯೂಕ್ ಪರಾರಿಯಾಗಿದ್ದಾನೆ.

ಬೆಂಗಳೂರು: ಲೈಂಗಿಕ ಸುಖ ಕೊಡು ಎಂದು ಕಕ್ಷಿದಾರರನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅರೆಸ್ಟ್‌

ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಎರಡು ದಿನಗಳ ಬಳಿಕ ಲ್ಯೂಕ್ ಮೃತದೇಹ ಪತ್ತೆಯಾಗಿದೆ.ಲ್ಯೂಕ್ ಸ್ವಯಂ ಬದುಕು ಅಂತ್ಯಗೊಳಿಸಿದ್ದ. ಇತ್ತ ಇವರಿಬ್ಬರ ಮೊಬೈಲ್ ಚಾಟ್, ಸ್ಥಳದಲ್ಲಿ ಸಿಕ್ಕ ದಾಖಲೆ ತನಿಖೆ ನಡೆಸಿದ ಪೊಲೀಸರು ಉದ್ದೇಶಪೂರ್ವಕ ಕೃತ್ಯವಲ್ಲ, ಹೊಸ ಸೆಕ್ಸ್ ಪ್ರಯೋಗದಲ್ಲಿ ಘಟನೆ ಸಂಭವಿಸಿದೆ ಎಂದು ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ.
 

Latest Videos
Follow Us:
Download App:
  • android
  • ios