Sensational puctures of celebrities: ಬಿಸಿಲ ಬೇಗೆ ಮನಸ್ಸು ತಂಪಿಗೆ ಹಾತೊರೆಯುತ್ತೆ. ಇಂಥಾ ಟೈಮಲ್ಲಿ ಟೂಪೀಸ್, ಬಿಕಿನಿ ಧರಿಸಿ ತಮ್ಮನ್ನು ಕೂಲ್ ಮಾಡಿಕೊಳ್ಳುತ್ತಾ ಹುಡುಗರೆದೆಗೆ ಕೊಳ್ಳಿ ಇಡೋ ಕೆಲಸ ಮಾಡುತ್ತಿದ್ದಾರೆ ಈ ತಾರೆಯರು.
ಬಾಲಿವುಡ್‌ನಲ್ಲಿ (Bollywood) ಬಿಕಿನಿ (Bikini) ಹವಾ ಶುರುವಾಗಿದೆ. ಹೇಳಿ ಕೇಳಿ ಬೇಸಿಗೆ. ಮುಂಬೈ (Mumbai) ಶಹರ ಕರಾವಳಿ ತೀರವೂ ಆದ ಕಾರಣ ಬಿಸಿಲ ಬೇಗೆ ಹೆಚ್ಚಾಗಿದೆ. ಇಲ್ಲೀಗ ಬಿಕಿನಿ ಹವಾ. ಬಾಲಿವುಡ್ ತಾರೆಯರು ಬಿಕಿನಿ, ಟೂ ಪೀಸ್ ಹಾಕ್ಕೊಂಡು ಓಡಾಡೋದು, ಫೋಟೋಶೂಟ್ ಮಾಡಿಸ್ಕೊಳ್ಳೋದು ಕಾಮನ್ ಆಗಿದೆ. ಮೊದಲೇ ಬೇಸಿಗೆ ಕಾಲ. ಇಂಥಾ ಟೈಮಲ್ಲೇ ಇಂಥಾ ಡ್ರೆಸ್ ಹಾಕ್ಕೊಂಡು ತಾಪಮಾನ ಇನ್ನಷ್ಟು ಹೆಚ್ಚಿಸಬೇಕಾ ಅಂತ ಒಂದಿಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಿದ್ದಾರೆ. ಹಾಗೆಲ್ಲ ಹುಡುಗರಿಗೆ ತೊಂದರೆ ಮಾಡಿದ, ನಿದ್ರೆ ಕೆಡಿಸಿದ ತಾರೆಯರು ಯಾರು ಅನ್ನೋದನ್ನ ನೋಡೋಣ
Ranbir Kapoor ಮಾಜಿ ಗೆಳತಿಯ ಪತಿ Alia Bhatt ಅವರ ಕ್ಲೋಸ್ ಫ್ರೆಂಡ್!
ಜಾನ್ವಿ ಕಪೂರ್ (Janvi Kapoor)
ಹನ್ನೊಂದು ಸಾವಿರ ಬೆಲೆಯ ಸ್ವಿಮ್ಮಿಂಗ್ ಸೂಟ್ ಹಾಕ್ಕೊಂಡು ಒದ್ದೆ ಕೂದಲ ಮೇಲೆ ಕೈಯಿಟ್ಟು ಹಾಟ್ ಲುಕ್‌ನಲ್ಲಿ ಕಳೆದೆರಡು ತಿಂಗಳ ಹಿಂದೆಯೇ ಪೋಸ್ ಕೊಟ್ಟವರು ಜಾನ್ವಿ. ಆಗಲೇ ಓಹ್, ಚಳಿಗಾಲ ಕಳೆದು ಬೇಸಿಗೆ ಹತ್ರ ಬರ್ತಿದೆ ಅಂತ ಒಂದಿಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ರು. ಇದೀಗ ಎದೆಸೀಳು ತೋರಿಸುತ್ತಾ ಮೀನಿನಂತೆ ಫಳ ಫಳ ಹೊಳೆಯುವ ಬಾಡಿಫಿಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಗಮನಸೆಳೆಯುತ್ತಿದ್ದಾರೆ. ಮೈ ತುಂಬ ಕನ್ನಡಿ ಇರೋ ಈ ಡ್ರೆಸ್ ನೋಡಿ ನಿಮ್ ಬಟ್ಟೇಲಿರೋ ಕನ್ನಡೀಲಿ ಒಮ್ಮೆ ಮುಖ ನೋಡ್ಕೊಳ್ಲಾ ಅಂತ ಕಮೆಂಟ್ ಹಾಕ್ತಿದ್ದಾರೆ ಒಂದಿಷ್ಟು ಜನ. ಇದೆಲ್ಲಕ್ಕೂ ಕ್ಯಾರೇ ಅನ್ನದೇ ನಾನಾಯ್ತು ನನ್ ಸ್ಟೈಲಾಯ್ತು ಅಂತಿದ್ದಾರೆ ಜಾನ್ವಿ.
ದಿಶಾ ಪಟಾನಿ (Disha Patani)
ಲೈಫಲ್ಲಿ ಹ್ಯಾಪಿನೆಸ್ ಇರ್ಬೇಕು ಅಂದರೆ ಫಿಟ್ ನೆಸ್ ಬೇಕು ಅಂತ ಬಲವಾಗಿ ನಂಬಿಕೊಂಡಿದ್ದಾರೆ ದಿಶಾ ಪಟಾನಿ. ತನ್ನ ಬಾಡಿ ಕರ್ವ್ ಅನ್ನು ಟೂ ಪೀಸ್ ನಲ್ಲಿ ತೋರಿಸೋದು ಅಂದರೆ ಈಕೆಗೆ ಭಾರೀ ಕುಶಿ. ಒಂದು ಸಿನಿಮಾ ಶೂಟಿಂಗ್ ಮುಗಿದ ಕೂಡಲೇ ಬಾಯ್ ಫ್ರೆಂಡ್ ಜೊತೆಗೆ ಔಟ್ ಸ್ಟೇಶನ್ ಹೋಗೋದು, ಅಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸೋದು ಈಕೆಗೆ ನೀರು ಕುಡಿದಷ್ಟೇ ಸಲೀಸು. ಈಕೆಯ ಹಾಟ್ ಫೋಟೋಗಳಿಗೆ ಕಾಯುವ ಲಕ್ಷಾಂತರ ಹುಡುಗ್ರು ಇನ್ ಸ್ಟಾದಲ್ಲಿದ್ದಾರೆ. ಅವರ ಆಸೆಗೆ ಎಂದೂ ತಣ್ಣೀರೆರೆಚದ ಈ ಬೆಡಗಿ ಇದೀಗ ಸಮ್ಮರ್ ನಲ್ಲಿ ತನ್ನ ಬಾಡಿ ಕರ್ವ್ ಕಾಣುವಂತೆ ಬಿಕಿನಿ ಫೋಟೋ ಶೂಟ್ ಮಾಡಿದ್ದಾಳೆ. ಅದನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿದ್ದಾಳೆ. ಹಾಟ್, ಕಣ್ಣಲ್ಲಿ ಹೃದಯದ ಇಮೋಜಿ, ಬೆಂಕಿಯ ಸ್ಟಿಕರ್ಸ್ ಗಳಲ್ಲೇ ತಮ್ಮ ಭಾವನೆಗಳನ್ನು ಹೊರ ಹಾಕಿದ್ದಾರೆ ಫ್ಯಾನ್ಸ್.
Priyanka Chopra Nick Jonas ಅವರ ಸೆಕ್ಸಿ ಬೀಚ್ ಫೋಟೋಸ್
ಶನಾಯ ಕಪೂರ್ (Shanaya Kapoor)
ದುಬೈ ಯ ವೆದರ್ ಸಖತ್ ಹಾಟ್ ಇದೆ ಅನ್ನೋದು ಶನಾಯ ಕಪೂರ್ ಬಿಕಿನಿ ನೋಡಿದ್ರೆ ಗೊತ್ತಾಗುತ್ತೆ. ಟೆರೇಸ್ ಟಾಪ್ ಮೇಲೆ ಸೊಂಟದವರೆಗೆ ನೀರಿರುವ ಈಜುಕೊಳದಲ್ಲಿ ನಸು ನೀಲಿ ಬಣ್ಣದ ಒಂದೇ ಸ್ವೀವ್ ಇರೋ ಕಟ್ ಔಟ್ ಟಾಪ್ ಹಾಗೂ ಬ್ರೀಫ್ಸ್‌ತೊಟ್ಟು ಕತ್ತು ತಿರುಗಿಸಿ ನಿಂತಿರೋ ಶನಾಯ ಫೋಟೋಗೆ ಫಿದಾ ಆಗದ ಹುಡುಗರಿಲ್ಲ. ಇಷ್ಟಕ್ಕೇ ಮುಗಿದಿಲ್ಲ. ಈಕೆ ತೊಟ್ಟಿರೋ ಬಿಕಿನಿ ಸಖತ್ ಲುಕ್ ನದಾದ್ರೂ ಅಂಥಾ ಕಾಸ್ಟ್ಲೀ ಅಲ್ಲ ಅನ್ನೋದು ಮತ್ತೊಂದು ವಿಷಯ. ನಾಲ್ಕೂವರೆ ಸಾವಿರ ಕೊಟ್ಟರೆ ಈ ತುಂಡುಡುಗೆ ತೊಟ್ಟ ನಮ್ ಹುಡುಗೀರೂ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತು ಹಾಟ್ ಫೋಟೋ ಶೂಟ್ ಮಾಡಿಸಬಹುದು.
ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಸಹ ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿ ಮಾದಕ ಪೋಸ್ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ತನ್ ಫಾರಿನ್ ಸ್ಟೈಲ್ ಬಿಕಿನಿಯಲ್ಲಿ ಮಿಂಚಿದ್ದಾರೆ. ಆಲಿಯಾ ಭಟ್ ತನ್ನ ಬಾಡಿ ಬಿಕಿನಿಗೂ ಸೈ, ಟ್ರೆಡಿಶನಲ್ ವೇರ್ ಗೂ ಸೈ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹೀಗೆ ಸಾಲು ಸಾಲು ಹುಡುಗೀರು ಬಿಕಿನಿಯಲ್ಲಿ ಮೆರವಣಿಗೆ ಹೊರಟಿರೋದು ನೋಡಿ ಈ ಸಲದ ಸಮ್ಮರ್ ಸಖತ್ ಹಾಟ್ ಅಂತ ಇಮೋಜಿಗಳಲ್ಲೇ ಹೇಳ್ತಿದ್ದಾರೆ ನೆಟ್ಟಿಗರು.
